ಕರ್ನಾಟಕದಲ್ಲಿ ಭಾನುವಾರ 19 ಸಾವಿರ ದಾಟಿದ ದೈನಂದಿನ ಕೊರೊನಾ ಸೋಂಕು, 81 ಸಾವು..!

ಬೆಂಗಳೂರು :ಕರ್ನಾಟಕದಲ್ಲಿ ಮತ್ತೆ ಕೊರೊಆ ಉಲ್ಬಣ ಮತ್ತೂ ಹೆಚ್ಚಾಗಿದೆ. ಭಾನುವಾರ ದೈನಂದಿನ ಕೊರೊನಾ ಸೋಂಕು ಹತ್ತೊಂಭತ್ತು ಸಾವಿರ ದಾಟಿದೆ..!
ಕಳೆದ 24 ಗಂಟೆಯಲ್ಲಿ ರಾಜ್ಯಾದ್ಯಂತ 19,067 ಜನರಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದೇ ಸಮಸಯದಲ್ಲಿ 81 ಸೋಂಕಿತರು ಮೃತಪಟ್ಟಿದ್ದಾರೆ.
ಈ ಕುರಿತಂತೆ ರಾಜ್ಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಕೊರೋನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 12,793 ಜನರು ಸೇರಿದಂತೆ ರಾಜ್ಯಾದ್ಯಂತ 19,067 ಜನರಿಗೆ ಸೋಂಕು ದೃಢಪಟ್ಟಿದ್ದು, ಇದರಿಂದಾಗಿ ಸೋಂಕಿತರ ಸಂಖ್ಯೆ 11,61,065ಕ್ಕೆ ಏರಿಕೆಯಾಗಿದೆ. ಭಾನುವಾರ 4,603 ಜನರು ಬಿಡುಗಡೆಯಾಗಿದ್ದು, ಇದುವರೆಗೆ ಒಟ್ಟು 10,14,152 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ರಾಜ್ಯದಲ್ಲಿ ಈಗ 1,33,543ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರು ನಗರದಲ್ಲಿ 60 ಸೋಂಕಿತರು ಮೃತಪಟ್ಟಿದ್ದು, ಯಾದಗಿರಿ, ವಿಜಯಪುರ, ಉತ್ತರಕನ್ನಡ, ಕೊಪ್ಪಳ ಹಾಗೂ ಬಳ್ಳಾರಿಯಲ್ಲಿ ತಲಾ ಇಬ್ಬರು, ಮೈಸೂರು ಜಿಲ್ಲೆಯಲ್ಲಿ ಮೂವರು, ಬೀದರ್, ಚಾಮರಾಜನಗರ, ತುಮಕೂರು ಜಿಲ್ಲೆಯಲ್ಲಿ ತಲಾ ಒಬ್ಬರು ಸೇರಿದಂತೆ ಒಟ್ಟು 81 ಸೋಂಕಿತರು ಚಿಕಿತ್ಸೆ ಮೃತಪಟ್ಟಿದ್ದಾರೆ. ಕೊರೊನಾಕ್ಕೆ ಮೃತಪಟ್ಟವರ ಒಟ್ಟು ಸಂಖ್ಯೆ 13,351ಕ್ಕೆ ಏರಿಕೆಯಾಗಿದೆ.

ಪ್ರಮುಖ ಸುದ್ದಿ :-   ಸ್ವಾತಿ ಮಲಿವಾಲ್ ಹಲ್ಲೆ ಪ್ರಕರಣ: ಕೇಜ್ರಿವಾಲ್ ನಿವಾಸದ ಸಿಸಿಟಿವಿ ಡಿವಿಆರ್ ವಶಕ್ಕೆ ಪಡೆದ ಪೊಲೀಸರು

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement