ಕೊರೊನಾ ಉಲ್ಬಣ: ಬ್ರಿಟನ್‌ ಪ್ರಧಾನಿ ಭಾರತ ಪ್ರವಾಸ ರದ್ದು

ನವ ದೆಹಲಿ: ಕೊರೊನಾ ವೈರಸ್​ ಹೆಚ್ಚಳ ಹಿನ್ನೆಲೆ ಬ್ರಿಟಿಷ್​ ಪ್ರಧಾನಿ ಬೋರಿಸ್​ ಜಾನ್ಸನ್​​ ಮುಂದಿನ ವಾರ ಕೈಗೊಳ್ಳಬೇಕಿದ್ದ ಭಾರತ ಪ್ರವಾಸ ರದ್ದು ಮಾಡಿದ್ದಾರೆ. ಈ ಬಗ್ಗೆ ಬ್ರಿಟನ್​ ಪ್ರಧಾನಿ ಸಚಿವಾಲಯ ಅಧಿಕೃತ ಮಾಹಿತಿ ನೀಡಿದೆ.
ಭಾರತದಲ್ಲಿ ಪ್ರಸ್ತುತ ಕೊರೊನಾ ವೈರಸ್​ ಗಮನದಲ್ಲಿ ಇಟ್ಟುಕೊಂಡು, ಪ್ರಧಾನ ಮಂತ್ರಿ ಬೋರಿಸ್​ ಜಾನ್ಸನ್​​ ಮುಂದಿನ ವಾರದ ಭಾರತ ಪ್ರವಾಸ ಕೈಗೊಳ್ಳುತ್ತಿಲ್ಲ. ಭಾರತ ಹಾಗೂ ಬ್ರಿಟನ್​​ ಮುಂದಿನ ದಿನಗಳಲ್ಲಿ ಸಭೆ ನಡೆಸಿ ಉಭಯ ದೇಶದ ಸಂಬಂಧ ಸರಿಮಾಡಿಕೊಳ್ಳಲಿದೆ ಎಂದು ಪ್ರಧಾನಿ ಕಚೇರಿ ತಿಳಿಸಿದೆ.
ಏಪ್ರಿಲ್​ 26ರಂದು ಬೋರಿಸ್​ ಜಾನ್ಸನ್​ರ ಭಾರತ ಪ್ರವಾಸ ನಿಗದಿಯಾಗಿತ್ತು. ಮುಂಬೈ ಹಾಗೂ ಪುಣೆಗೆ ಬ್ರಿಟನ್​ ಪ್ರಧಾನಿ ಭೇಟಿಯಾಗಬೇಕಿತ್ತು. ಆದರೆ ಭಾರತದಲ್ಲಿ ಕೊರೊನಾ ಪ್ರಕರಣ ಹೆಚ್ಚಾಗುತ್ತಿರುವ ಹಿನ್ನೆಲೆ ಅದರಲ್ಲಿಯೂ ಮಹಾರಾಷ್ಟ್ರದಲ್ಲಿಯೇ ಹೆಚ್ಚಳವಾದ ಈ ಪ್ರವಾಸವನ್ನ ಬ್ರಿಟನ್​ ಪ್ರಧಾನಿ ಕೈಬಿಟ್ಟಿದ್ದಾರೆ. ಜೂನ್​​ನಲ್ಲಿ ನಡೆಯಲಿರುವ ಜಿ 7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ಬ್ರಿಟನ್​ ಪ್ರಧಾನಿ ಭಾರತಕ್ಕೆ ಆಹ್ವಾನ ನೀಡಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ