ಜೈಲ್‌ ಭರೋಗೆ ಮುಂದಾದ ಸಾರಿಗೆ ನೌಕರರು: ಲಘು ಲಾಠಿ ಪ್ರಹಾರ

posted in: ರಾಜ್ಯ | 0

ಕೋಲಾರ: ಜೈಲ್ ಭರೋ ಚಳವಳಿ ನಡೆಸಲು ಮುಂದಾದ ಸಾರಿಗೆ ನೌಕರರ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದಾರೆ.
ಕೋಲಾರ ಹೊರವಲಯದ ಸಂಗೊಂಡಹಳ್ಳಿ ಬಳಿ ನೂರಾರು ಸಾರಿಗೆ ನೌಕರರು ಜಮಾವಣೆಗೊಂಡು ಪ್ರತಿಭಟನೆ ನಡೆಸಲು ಮುಂದಾದಾಗ ಗ್ರಾಮಾಂತರ ಪೊಲೀಸ್ ಠಾಣೆಯ ಪೊಲೀಸರು ಲಾಠಿ ಪ್ರಹಾರ ನಡೆಸಿ ಗುಂಪು ಚದುರಿಸಿದ್ದಾರೆ.
ನಿಷೇಧಾಜ್ಞೆ ಜಾರಿಯಲ್ಲಿದೆ. ಚಳವಳಿ ಕೈ ಬಿಡಿ ಎಂದು ಪೊಲೀಸರು ಮನವಿ ಮಾಡಿದರೂ ನೌಕರರು ಪೊಲೀಸರ ಮನವಿ ಲೆಕ್ಕಿಸದೆ ಜೈಲ್ ಭರೋಗೆ ಮುಂದಾದರು. ಈ ವೇಳೆ ಗುಂಪು ಚದುರಿಸಿ ಪೊಲೀಸರು ಹಲವರನ್ನು ವಶಕ್ಕೆ ಪಡೆದಿದ್ದಾರೆ. ಆ ಸಂದರ್ಭದಲ್ಲಿವಶಕ್ಕೆ ಪಡೆದವರನ್ನು ಬಿಡುವಂತೆ ಒತ್ತಾಯಿಸಿ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆ ಮುಂದೆ ನೌಕರರು ಜಮಾವಣೆಗೊಂಡರು. ಸ್ಥಳದಲ್ಲಿ ಬಿಗುವಿನ ವಾತಾವರಣ ಉಂಟಾಗಿ ಪೊಲೀಸರು ಪರಿಸ್ಥಿತಿ ನಿಯಂತ್ರಿಸಲು ಲಘು ಲಾಠಿ ಪ್ರಹಾರ ನಡೆಸಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ