ಲಸಿಕೆ ಉತ್ಪಾದನೆ ಹೆಚ್ಚಳಕ್ಕೆ ಕ್ರಮ: ಉತ್ಪಾದಕರಿಗೆ ಕೇಂದ್ರದಿಂದ 4,500 ಕೋಟಿ ರೂ. ಮುಂಗಡ ಹಣ

ನವದೆಹಲಿ: ಕೊರೋನಾ ಲಸಿಕೆಯನ್ನು ಮೇ 1 ರಿಂದ 18 ವರ್ಷದ ಮೇಲ್ಪಟ್ಟವರೆಲ್ಲರಿಗೂ ನೀಡಲು ಸರ್ಕಾರ ಸಿದ್ಧತೆ ನಡೆಸಿಕೊಳ್ಳುತ್ತಿದ್ದು, ಲಸಿಕೆ ತಯಾರಿಕೆ ಹೆಚ್ಚಳಕ್ಕೆ ಕ್ರಮ ಕೈಗೊಂಡಿದೆ.
ಇದರ ಅಂಗವಾಗಿ ಲಸಿಕೆ ತಯಾರಿಕೆ ಮಾಡುವ ಸಂಸ್ಥೆಗಳಿಗೆ ಆರ್ಥಿಕ ನೆರವು ಪ್ರಕಟಿಸಿರುವಕೇಂದ್ರ ಸರ್ಕಾರ ಒಟ್ಟು 4,500 ಕೋಟಿ ರೂ.ಗಳ ಬಿಡುಗಡೆಗೆ ಅನುಮೋದನೆ ನೀಡಿದೆ. ಈ ಮೊತ್ತವನ್ನು ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಹಾಗೂ ಭಾರತ್ ಬಯೋಟೆಕ್ ಸಂಸ್ಥೆಗಳಿಗೆ ಮುಂದಿನ ಲಸಿಕೆ ಪೂರೈಕೆಗಾಗಿ ಮುಂಗಡದ ರೂಪದಲ್ಲಿ ನೀಡಲಾಗುತ್ತಿದೆ.
ಎಸ್‌ಐಐ 200 ಮಿಲಿಯನ್ ಡೋಸ್ ಗಳಷ್ಟು ಲಸಿಕೆಯನ್ನು ಹಾಗೂ ಭಾರತ್ ಬಯೋಟೆಕ್ ಸಂಸ್ಥೆ 90 ಮಿಲಿಯನ್ ಡೋಶ್ ಗಳಷ್ಟು ಲಸಿಕೆಯನ್ನು ಸರ್ಕಾರಕ್ಕೆ ಈ ಹಿಂದಿನ 150 ರೂಪಾಯಿಗಳ ದರದಲ್ಲಿ ಜುಲೈ ವೇಳೆಗೆ ಪೂರೈಕೆ ಮಾಡಲಿದೆ. ಸರ್ಕಾರದಿಂದ ಲಸಿಕೆ ತಯಾರಿಕೆ ಸಂಸ್ಥೆಗಳಿಗೆ ಹೆಚ್ಚುವರಿ ಲಸಿಕೆ ತಯಾರಿಸುವುದಕ್ಕೆ ಅನುವು ಮಾಡಿಕೊಡುವುದಕ್ಕಾಗಿ ಹಲವು ನಿಯಮಗಳನ್ನು ಸಡಿಲಗೊಳಿಸಲಾಗಿದ್ದು, ಬ್ಯಾಂಕ್ ಗ್ಯಾರಂಟಿ ಇಲ್ಲದೇ ಮುಂಗಡ ಪಾವತಿಗೆ ಅನುಮತಿ ನೀಡಲಾಗಿದೆ. ಸರ್ಕಾರವು ಯೋಜನೆಯ ಭಾಗವಾಗಿ ಸೆರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ)ಕ್ಕೆ 3,000 ಕೋಟಿ ಮುಂಗಡವಾಗಿ ನೀಡಲಿದ್ದರೆ, ಭಾರತ್ ಬಯೋಟೆಕ್ ಗೆ 1,500 ಕೋಟಿ ರೂಪಾಯಿ ಸಿಗಲಿದೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಓದಿರಿ :-   ದುರ್ಗಾ ಪೂಜೆ ಪೆಂಡಾಲ್‌ಗೆ ಬೆಂಕಿ ತಗುಲಿ 5 ಮಂದಿ ಸಾವು, 67 ಮಂದಿಗೆ ಗಾಯ

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement