ಕರ್ನಾಟಕದಲ್ಲಿ 21 ಸಾವಿರ ದಾಟಿದ ದೈನಂದಿನ ಕೊರೊನಾ ಸೋಂಕು..149 ಸಾವು

ಬೆಂಗಳೂರು : ಕರ್ನಾಟಕದಲ್ಲಿ ಮಂಗಳವಾರ ಕೋವಿಡ್ ಪ್ರಕರಣಗಳು ಸ್ಫೋಟವಾಗಿದ್ದು, ಕಳೆದ 24 ಗಂಟೆಗಳಲ್ಲಿ ಬರೋಬ್ಬರಿ 21,794 ಕೋವಿಡ್ ಹೊಸ ಪ್ರಕರಣಗಳು ವರದಿಯಾಗಿವೆ. ಇದೇ ಸಮಯದಲ್ಲಿ 149 ಜನರು ಮೃತಪಟ್ಟಿದ್ದಾರೆ.
ಬೆಂಗಳೂರು ನಗರದಲ್ಲಿಯೇ 13782 ಪ್ರಕರಣಗಳು ವರದಿಯಾಗಿವೆ. ಬೆಂಗಳೂರು ನಗರದಲ್ಲಿ ಸೋಂಕಿಗೆ 92 ಮಂದಿಮೃತಪಟ್ಟಿದ್ದಾರೆ. ಆರೋಗ್ಯ ಇಲಾಖೆ ಅಂಕಿ ಸಂಖ್ಯೆಗಳ ಪ್ರಕಾರ ರಾಜ್ಯದಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 1,59,158ಕ್ಕೆ ಏರಿದೆ.
ರಾಜ್ಯದಲ್ಲಿ ಮಂಗಳವಾರ 4,571 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಇದರೊಂದಿಗೆ ಸೋಂಕಿನಿಂದ ಚೇತರಿಸಿಕೊಂಡವರ ಸಂಖ್ಯೆ 10,25,821ಕ್ಕೆ ಏರಿಕೆಯಾಗಿದೆ. 751 ಮಂದಿ ಕೋವಿಡ್ ಆಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಜಿಲ್ಲಾವಾರು ಪ್ರಕರಣಗಳ ಸಂಖ್ಯೆ : ಬಾಗಲಕೋಟೆ-125, ಬಳ್ಳಾರಿ-406, ಬೆಳಗಾವಿ-186, ಬೆಂಗಳೂರು ಗ್ರಾಮಾಂತರ -513, ಬೆಂಗಳೂರು ನಗರ -13782, ಬೀದರ್- 151, ಚಾಮರಾಜನಗರ -99, ಚಿಕ್ಕಬಳ್ಳಾಪುರ- 217, ಚಿಕ್ಕಮಗಳೂರು -115, ಚಿತ್ರದುರ್ಗ- 121, ದಕ್ಷಿಣ ಕನ್ನಡ -482, ದಾವಣಗೆರೆ- 136, ಧಾರವಾಡ -288, ಗದಗ- 73, ಹಾಸನ- 410, ಹಾವೇರಿ-37, ಕಲಬುರಗಿ-818, ಕೊಡಗು-65, ಕೋಲಾರ- 284, ಕೊಪ್ಪಳ-103, ಮಂಡ್ಯ-413, ಮೈಸೂರು -699, ರಾಯಚೂರು-243, ರಾಮನಗರ-114, ಶಿವಮೊಗ್ಗ-202, ತುಮಕೂರು-1055, ಉಡುಪಿ-109, ಉತ್ತರ ಕನ್ನಡ-106, ವಿಜಯಪುರ-358,ಯಾದಗಿರಿ-84

ಪ್ರಮುಖ ಸುದ್ದಿ :-   ಸುಮಲತಾ ಭೇಟಿ ಮಾಡಿದ ವಿಜಯೇಂದ್ರ : ಭೇಟಿ ನಂತರ ಸುಮಲತಾ ಹೇಳಿದ್ದೇನು..?

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement