ಶಶಿ ತರೂರ್‌ಗೆ ಕೊರೊನಾ ಸೋಂಕು

ನವ ದೆಹಲಿ: ಕಾಂಗ್ರೆಸ್ ಸಂಸದ ಶಶಿ ತರೂರ್ ಅವರಿಗೆ ಬುಧವಾರ ಕೊರೊನಾ ಸೋಂಕು ದೃಢಪಟ್ಟಿದ್ದು, ಅವರ ಸಹೋದರಿ ಮತ್ತು ತಾಯಿ ಕೂಡ ಸೋಂಕಿಗೆ ಒಳಗಾಗಿದ್ದಾರೆ ಎಂದು ತರೂರ್ ಹೇಳಿದ್ದಾರೆ.
ಈ ಕುರಿತು ಟ್ವೀಟ್‌ ಮಾಡಿರುವ ತರೂರ್‌, ಪರೀಕ್ಷೆ ಮತ್ತು ವರದಿಗಾಗಿ 4 ದಿನ ಕಾದ ನಂತರ ಬುಧವಾರ ವರದಿ ಸಿಕ್ಕಿದ್ದು, ಸೋಂಕು ದೃಢಪಟ್ಟಿದೆ. ನನ್ನ ಜೊತೆಗೆ ನನ್ನ ಸಹೋದರಿ ಮತ್ತು 85 ವರ್ಷದ ತಾಯಿ ಬೀನ್ʼಗೂ ಪಾಸಿಟಿವ್‌ ಆಗಿದೆ ಎಂದು ಖಚಿತ ಪಡಿಸಿದ್ದಾರೆ.
ಮತ್ತೊಂದು ಟ್ವೀಟ್‌ʼನಲ್ಲಿ ‘ನನ್ನ ಸಹೋದರಿ ಕ್ಯಾಲಿಫೋರ್ನಿಯಾದಲ್ಲಿ ಫೈಜರ್ ಲಸಿಕೆಯ ಎರಡು ಡೋಸ್ʼ ಗಳನ್ನ ಪಡೆದಿದ್ದಾಳೆ. ಇನ್ನು ನನ್ನ ತಾಯಿ ಮತ್ತು ನಾನು ಏಪ್ರಿಲ್ 8ರಂದು ನಮ್ಮ ಎರಡನೇ ಕೋವಿಶೀಲ್ಡ್ ಡೋಸ್ ತೆಗೆದುಕೊಂಡಿದ್ದೇವೆ ಎಂದು ಜನರು ತಿಳಿದುಕೊಳ್ಳಬೇಕು. ಆದ್ದರಿಂದ ಲಸಿಕೆಗಳು ಸೋಂಕನ್ನ ತಡೆಗಟ್ಟಲು ಸಾಧ್ಯವಾಗದಿದ್ದರೂ, ಅವು ಕೋವಿಡ್‌ ವೈರಸ್ʼನ ಪರಿಣಾಮವನ್ನ ಮಿತಗೊಳಿಸುತ್ತದೆ ಎಂದು ಆಶಿಸಲು ನಮಗೆ ಎಲ್ಲಾ ಕಾರಣಗಳಿವೆ’ ಎಂದು ಟ್ವೀಟ್‌ ಮಾಡಿದ್ದಾರೆ.

advertisement

ಸುಂದರವಾದ ಮತ್ತು ವಿಶಾಲವಾದ ಸ್ಥಳದಲ್ಲಿ ನಿಮ್ಮ ರಜಾದಿನಗಳನ್ನು ಆನಂದಿಸಿು

ಉತ್ತರ ಕರ್ನಾಟಕದ ಅತಿ ದೊಡ್ಡ ರೆಸಾರ್ಟ್ ಮತ್ತು ಅಡ್ವೆಂಚರ್ ಪಾರ್ಕ್

ಹೆಚ್ಚಿನ ಮಾಹಿತಿಗಾಗಿ ಕರೆ ಮಾಡಿ ಮತ್ತು ವಿಚಾರಿಸಿ: 98867 84189

ಕನ್ನಡಿ ನ್ಯೂಸ್ ನ ದಿನದ ಪ್ರಮುಖ ಸುದ್ದಿಗಳು ಮತ್ತು ಮಾಹಿತಿಗಾಗಿ
ಟೆಲಿಗ್ರಾಮ್ ಚಾನೆಲ್ ಸೇರಿ
ವಾಟ್ಸಾಪ್ ಗ್ರೂಪ್ ಸೇರಿ
ಫೇಸ್ ಬುಕ್ ಫಾಲೋ ಮಾಡಿ
ಗೂಗಲ್ ನ್ಯೂಸ್ ನಲ್ಲಿ ಸೇರಿ
ಟ್ವಿಟರ್ ನಲ್ಲಿ ಫಾಲೋ ಮಾಡಿ
advertisement

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ.

(1. ಚೆನ್ನಾಗಿಲ್ಲ. 2. ಸಾಧಾರಣ. 3. ಪರವಾಗಿಲ್ಲ. 4. ಉತ್ತಮ . 5. ಅತ್ಯುತ್ತಮ)

ಓದಿರಿ :-   ದುರ್ಗಾ ಪೂಜೆ ಪೆಂಡಾಲ್‌ಗೆ ಬೆಂಕಿ ತಗುಲಿ 5 ಮಂದಿ ಸಾವು, 67 ಮಂದಿಗೆ ಗಾಯ

/ 5. ಒಟ್ಟು ವೋಟುಗಳು

ನಿಮ್ಮ ಕಾಮೆಂಟ್ ಬರೆಯಿರಿ

advertisement