ಕರ್ನಾಟಕದಲ್ಲಿ ಬುಧವಾರ ಏಕದಿನದ ಅತಿ ಹೆಚ್ಚು ಕೊರೊನಾ ಸೋಂಕು ದಾಖಲು.. 116 ಸಾವು

ಬೆಂಗಳೂರು: ಕರ್ನಾಟಕವು ತನ್ನ ಅತಿದೊಡ್ಡ ದೈನಂದಿನ 23,558 ಕೊರೊನಾ ಸೋಂಕನ್ನು ದಾಖಲಿಸಿದೆ.ಇದೇ ಸಮಯದಲ್ಲಿ 116 ಕೊರೊನಾ ಸಂಬಂಧಿತ ಸಾವುಗಳನ್ನು ವರದಿ ಮಾಡಿದೆ,
ಒಟ್ಟು ಕೊರೊನಾ ಸೋಂಕು 12.22 ಲಕ್ಷ ತಲುಪಿದರೆ ಒಟ್ಟು ಕೊರೊನಾ ಸಂಬಂಧಿ ಸಾವುಗಳ ಸಂಖ್ಯೆ 13,762ಕ್ಕೆ ತಲುಪಿದೆ ಎಂದು ಆರೋಗ್ಯ ಇಲಾಖೆ ಮಂಗಳವಾರ ತಿಳಿಸಿದೆ.
ರಾಜ್ಯವು ಈ ಹಿಂದೆ ಮಂಗಳವಾರ ತನ್ನ ಅತಿದೊಡ್ಡ ಏಕದಿನ ಸ್ಪೈಕ್ 21,794 ಪ್ರಕರಣಗಳನ್ನು ವರದಿ ಮಾಡಿದೆ. ಬುಧವಾರ ವರದಿಯಾದ 23,558 ಪ್ರಕರಣಗಳಲ್ಲಿ 13,640 ಪ್ರಕರಣಗಳು ಬೆಂಗಳೂರು ನಗರದಲ್ಲಿ ವರದಿಯಾಗಿವೆ. ಚೇತರಿಸಿಕೊಂಡ ನಂತರ 6,412 ರೋಗಿಗಳು ಆಸ್ಪತ್ರೆಯಿಂದ ಬುಧವಾರ ಬಿಡುಗಡೆಯಾಗಿದೆ. ಬುಧವಾರ ವರದಿಯಾದ 116 ಸಾವುಗಳಲ್ಲಿ 70 ಸಾವು ಬೆಂಗಳೂರು ನಗರದಲ್ಲಿ ಸಂಭವಿಸಿದೆ.
ಏತನ್ಮಧ್ಯೆ, ಬೆಂಗಳೂರಿನಲ್ಲಿ ಮತ್ತು ಇತರ ಕೆಲವು ಸ್ಥಳಗಳಲ್ಲಿನ ನಿರ್ಬಂಧಗಳಂತಹ ಲಾಕ್‌ಡೌನ್‌ಗೆ ಹೋಗಬಹುದು ಎಂಬ ತೀವ್ರ ಊಹಾಪೋಹಗಳ ಮಧ್ಯೆ, ರಾಜ್ಯದಲ್ಲಿ ಕೋವಿಡ್‌-19 ಹರಡುವುದನ್ನು ನಿಯಂತ್ರಿಸುವ ಉದ್ದೇಶದಿಂದ ಕಠಿಣ ಮಾರ್ಗಸೂಚಿಗಳನ್ನು ಪ್ರಕಟಿಸಿದ್ದು, ರಾಜ್ಯಾದ್ಯಂತ ರಾತ್ರಿ 9ರಿಂದ ಬೆಳಿಗ್ಗೆ 6ರ ವರೆಗೆ ಕರ್ಫ್ಯೂ ಜಾರಿಗೊಳಿಸಿದೆ.ಅಲ್ಲದೆ ವೀಕೆಂಡ್‌ ಕರ್ಫ್ಯೂ ಜಾರಿ ಮಾಡಿದೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement