ಕೋವಿಡ್‌ ಲಸಿಕೆ ಪಡೆದ 10,000 ಜನರಲ್ಲಿ 2 ರಿಂದ 4 ಜನರಿಗೆ ಮಾತ್ರ ಸೋಂಕು: ಐಸಿಎಂಆರ್

ನವ ದೆಹಲಿ: ಕೋವಿಡ್‌ ಸಾಂಕ್ರಾಮಿಕ ರೋಗದ ವಿರುದ್ಧದ ಹೋರಾಟದ ಮಧ್ಯೆಯೇ ಲಸಿಕೆ ಪಡೆದ ಅನೇಕರು ಕೋವಿಡ್‌ ಸೋಂಕಿಗೆ ಒಳಗಾಗುತ್ತಿದ್ದಾರೆ. ಆದರೆ ಕೇಂದ್ರ ಸರ್ಕಾರ ಬುಧವಾರ ಬಿಡುಗಡೆಗೊಳಿಸಿದ ದತ್ತಾಂಶ ಲಸಿಕೆ ಪಡೆದವರಿಗೆ ಕೊರೊನಾ ಸೊಂಕು ತಗುಲಿರುವುದು ತೀರಾ ಕಡಿಮೆ ಪ್ರಮಾಣದಲ್ಲಿದೆ.
ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಐಸಿಎಂಆರ್ ಮಹಾನಿರ್ದೇಶಕ ಬಲರಾಮ್ ಭಾರ್ಗವ, ಭಾರತದಲ್ಲಿ ಈವರೆಗೆ ಲಸಿಕೆ ಪಡೆದ 10,000 ಜನರ ಪೈಕಿ 2 ರಿಂದ 4 ಜನರಿಗೆ ಮಾತ್ರ ಸೋಂಕು ಕಾಣಿಸಿಕೊಂಡಿದೆ ಎಂದು ಹೇಳಿದ್ದಾರೆ. ಆದಾಗ್ಯೂ, ಈ ಸೋಂಕುಗಳು ಎಷ್ಟು ತೀವ್ರವಾದ ಕಾಯಿಲೆ ಅಥವಾ ಸಾವಿಗೆ ಕಾರಣವಾಗಿದೆ ಎಂಬ ಬಗ್ಗೆ ಅವರು ಹೇಳಲಿಲ್ಲ.
ಮೇ 1 ರಿಂದ ದೇಶದ ಹದಿನೆಂಟು ವರ್ಷದ ಮೇಲ್ಪಟ್ಟವರಿಗೆಲ್ಲರಿಗೂ ಲಸಿಕೆ ನೀಡಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಲಸಿಕೆ ಪಡೆದವರಿಗೆ ಸೋಂಕು ಹರಡುತ್ತಿದೆ ಎಂದು ಹೇಳಲಾಗುತ್ತಿದೆ. ಅದರೆ ಇದು ವಾಸ್ತವಕ್ಕೆ ಹತ್ತಿರವಾಗಿಲ್ಲ ಎಂದು ರಾಷ್ಟ್ರೀಯ ಕೋವಿಡ್ ಕಾರ್ಯಪಡೆಯ ಮುಖ್ಯಸ್ಥರಾದ ನೀತಿ ಆಯೋಗದ ಸದಸ್ಯ (ಆರೋಗ್ಯ) ವಿ.ಕೆ. ಪಾಲ್ ಹೇಳಿದರು. “ಲಸಿಕೆಯ ಮೊದಲ ಮತ್ತು ಎರಡನೆಯ ಡೋಸ್ ನಂತರ ಕೋವಿಡ್ ಸೋಂಕು ಕಾಣಿಸಿದ್ದರೂ ಅದು ತೀವ್ರವಾದ ಕಾಯಿಲೆಗೆ ಕಾರಣವಾಗುವುದಿಲ್ಲ. ಸೋಂಕಿನ ಅಪಾಯವಿದೆ, ಅದಕ್ಕಾಗಿಯೇ ಮಾಸ್ಕ್ ಮುಖ್ಯವಾದರೂ ತೀವ್ರವಾದ ಸೋಂಕಿನ ಅಪಾಯವು ಗಣನೀಯವಾಗಿ ಕಡಿಮೆಯಾಗುತ್ತದೆ ಎಂದು ಹೇಳಿದರು.
ಪ್ರತಿರಕ್ಷಣಾ ಪ್ರತಿಕ್ರಿಯೆಯು ವ್ಯಕ್ತಿಯಿಂದ ವ್ಯಕ್ತಿಗೆ ಬದಲಾಗಬಹುದು. ಆದರೆ, ಲಭ್ಯವಿರುವ ಲಸಿಕೆಗಳು ಎರಡನೆಯ ಡೋಸ್‌ನ ಎರಡು ವಾರಗಳ ನಂತರ ಹೆಚ್ಚು ಪರಿಣಾಮಕಾರಿ ಎಂದು ಭಾರ್ಗವ ಹೇಳಿದ್ದಾರೆ. ಭಾರತ್ ಬಯೋಟೆಕ್‌ನಿಂದ ಕೋವಾಕ್ಸಿನ್‌ನ ಮೊದಲ ಪ್ರಮಾಣವನ್ನು ಪಡೆದ 93,56,436 ಜನರಲ್ಲಿ 4,208 (0.04%) ಜನರಿಗೆ ಮಾತ್ರ ಸೋಂಕು ತಗುಲಿದೆ ಎಂದು ಮಾಹಿತಿಯು ತೋರಿಸಿದೆ. ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಕೋವಿಡ್ 19 ಲಸಿಕೆಯ ಎರಡನೇ ಪ್ರಮಾಣವನ್ನು ಪಡೆದವರಿಗೆ 7,37,178 ರಲ್ಲಿ ಎರಡನೇ ಮತ್ತು ಅಂತಿಮ ಡೋಸ್ ಪಡೆದ 695 ಜನರಿಗೆ ಮಾತ್ರ ಸೋಂಕು ತಗುಲಿತು. ಖೊವಿಶೀಲ್ಡ್ ನ ಮೊದಲ ಡೋಸ್ ಪಡೆದ 10,03,02,745 ಜನರಲ್ಲಿ, 17,145 ಅಥವಾ 0.02% ಜನರು ಸೋಂಕಿಗೆ ತುತ್ತಾಗಿದ್ದಾರೆ.ಈ ಲಸಿಕೆಯ ಎರಡನೇ ಡೋಸ್ ಪಡೆದ 1,57,32,754 ಜನರಲ್ಲಿ, 5,014 ಅಥವಾ 0.03% ರಷ್ಟು ಪ್ರಮಾಣದ ಜನ ಸೋಂಕಿಗೀಡಾಗಿದ್ದಾರೆ ಎಂದು ಆರೋಗ್ಯ ಇಲಾಖೆ ನೀಡಿದ ದತ್ತಾಂಶ ಹೇಳಿದೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

3.3 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement