ಕೊರೊನಾಕ್ಕೆ ಮಗನ ಕಳೆದುಕೊಂಡ ಸಿಪಿಐ (ಎಂ) ನಾಯಕ ಸೀತಾರಾಮ ಯೆಚೂರಿ

ನವದೆಹಲಿ: ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ತಮ್ಮ ಹಿರಿಯ ಮಗ ಆಶಿಶ್ ಅವರು ಕೋವಿಡ್ -19 ನಿಂದ ಗುರುವಾರ ಬೆಳಿಗ್ಗೆ ನಿಧನರಾದರು ಎಂದು ತಿಳಿಸಿದ್ದಾರೆ.
ಜೂನ್ 9 ರಂದು 35 ನೇ ವರ್ಷಕ್ಕೆ ಕಾಲಿಡುತ್ತಿದ್ದ ಆಶಿಶ್, ಗುರಗಾಂವ್‌ನ ಮೆಡಂತಾ ಆಸ್ಪತ್ರೆಯಲ್ಲಿ ಚೆನ್ನಾಗಿ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಕುಟುಂಬಕ್ಕೆ ಹತ್ತಿರದವರು ತಿಳಿಸಿದ್ದರು. ಎರಡು ವಾರಗಳ ಹೋರಾಟದ ನಂತರ ಬೆಳಿಗ್ಗೆ 5.30 ಕ್ಕೆ ಅವರ ಹಠಾತ್ ಮೃತಪಟ್ಟಿದ್ದಾರೆ.
ನನ್ನ ಹಿರಿಯ ಮಗ ಆಶಿಶ್ ಯೆಚೂರಿಯನ್ನು ನಾನು ಗುರುವಾರ ಬೆಳಿಗ್ಗೆ ಕೋವಿಡ್‌-19 ಗೆ ಕಳೆದುಕೊಂಡಿದ್ದೇನೆ ಎಂದು ನಾನು ಬಹಳ ದುಃಖದಿಂದ ತಿಳಿಸುತ್ತಿದ್ದೇನೆ. ನಮಗೆ ಭರವಸೆ ನೀಡಿದ ಮತ್ತು ಚಿಕಿತ್ಸೆ ನೀಡಿದ ವೈದ್ಯರು, ದಾದಿಯರು, ಮುಂಚೂಣಿ ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು ಮತ್ತು ನಮ್ಮೊಂದಿಗೆ ನಿಂತ ಅಸಂಖ್ಯಾತರಿಗೆ ನಾನು ಧನ್ಯವಾದಗಳನ್ನು ಅರ್ಪಿಸುತ್ತೇನೆ – “ಎಂದು ಯೆಚೂರಿ ಟ್ವಿಟ್ಟರ್ನಲ್ಲಿ ತಿಳಿಸಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement