ಬೆಂಗಳೂರು: ಸಚಿವರಿಂದ ಕೋವಿಡ್ ಸ್ಮಶಾನ ಸಿದ್ಧತೆ ಪರಿಶೀಲನೆ

posted in: ರಾಜ್ಯ | 0

ಬೆಂಗಳೂರು: ನಗರದ ಹೊರ ವಲಯದ ತಾವರೆಕೆರೆ ಗ್ರಾಮದ ಬಳಿ ಕೋವಿಡ್ ಸೋಂಕು ಪೀಡಿತ ಶವಗಳ ಅಂತ್ಯಸಂಸ್ಕಾರಕ್ಕೆ ನಿರ್ಮಿಸಲಾಗಿರುವ ಸ್ಮಶಾನದ ಸಿದ್ಧತಾ ಕಾರ್ಯಗಳ ಕುರಿತು ಗೃಹ, ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಖಾತೆ ಸಚಿವರಾದ ಬಸವರಾಜ ಬೊಮ್ಮಾಯಿ ಹಾಗೂ ಕಂದಾಯ ಸಚಿವ ಆರ್ ಅಶೋಕ್ ಜಂಟಿಯಾಗಿ ಪರಿಶೀಲನೆ ನಡೆಸಿದರು.
ಗುರುವಾರ ಸಂಜೆ ಅವರು ತಾವರೆಕೆರೆಯ ಸ್ಮಶಾನಕ್ಕೆ ಭೇಟಿ ನೀಡಿ ಸಿದ್ಧತೆಗಳ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಸ್ಮಶಾನದಲ್ಲಿ ಏಕಕಾಲಕ್ಕೆ ಇಪ್ಪತ್ತಕ್ಕೂ ಹೆಚ್ಚು ಶವಗಳನ್ನು ದಹನ ಮಾಡಲು ವ್ಯವಸ್ಥೆ ಮಾಡಲಾಗಿದೆ. ನೀರಿನ ವ್ಯವಸ್ಥೆ ಮಾಡಲಾಗಿದೆ ಎಂದು ಈ ವೇಳೆ ಅಧಿಕಾರಿಗಳು ಸಚಿವರಿಗೆ ತಿಳಿಸಿದರು. ಶವ ಸಂಸ್ಕಾರಕ್ಕೆ ಸರ್ಕಾರ ಮಾಡಿರುವ ಕೋವಿಡ್‌ ಮಾರ್ಗದರ್ಶಿಸೂತ್ರಗಳಿಗೆ ಯಾವುದೇ ಧಕ್ಕೆ ಬಾರದಂತೆ ನೋಡಿಕೊಳ್ಳಬೇಕು ಎಂದು ಸಚಿವರು ಅಧಿಕಾರಿಗಳಿಗೆ ಸೂಚಿಸಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ