ಮಹತ್ವದ ಸುದ್ದಿ.. ಮೇ 31ರ ವರೆಗೂ ಕರ್ನಾಟಕದಲ್ಲಿ ಬ್ಯಾಂಕಿಂಗ್ ಸೇವೆ ಸಮಯ ಬದಲು

ಬೆಂಗಳೂರು: ಕೋವಿಡ್‌ ಎರಡನೇ ಅಲೆ ರಾಜ್ಯಾದ್ಯಂತ ಹರಡುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಬ್ಯಾಂಕಿಂಗ್ ಸಮಯ ಬದಲಿಸಲಾಗಿದೆ ಎಂದು ಎಸ್‌ಎಲ್‌ಬಿಸಿ (ಸ್ಟೇಟ್ ಲೆವೆಲ್ ಬ್ಯಾಂಕ್ ಕಮಿಟಿ ಕನ್ವೈನರ್) ತಿಳಿಸಿದೆ.
ರಾಜ್ಯದಲ್ಲಿ ಕೊರೊನಾ ವ್ಯಾಪಕವಾಗಿ ಹರಡುತ್ತಿರುವುದನ್ನು ತಡೆಗಟ್ಟಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಬೆಂಬಲಕ್ಕೆ ನಿಲ್ಲುತ್ತೇವೆ ಹಾಗೂ ನಮ್ಮ ಬ್ಯಾಂಕ್ ಸಿಬ್ಬಂದಿ ಆರೋಗ್ಯದ ಹಿತದೃಷ್ಟಿ ಕಾಪಾಡಿಕೊಳ್ಳುವ ದೃಷ್ಟಿಯಿಂದ ಸಮಯ ಬದಲಿಸಲಾಗಿದೆ ಎಂದು ಅದು ತಿಳಿಸಿದೆ.
ಸಾಂಕ್ರಾಮಿಕ ರೋಗ ಆದಷ್ಟು ತಡೆಯಲು ಬ್ಯಾಂಕಿಂಗ್ ಸಮಯವನ್ನು ತಾತ್ಕಾಲಿಕವಾಗಿ ಬದಲಾಯಿಸುತ್ತಿದ್ದೇವೆ ಎಂದು ಸ್ಟೇಟ್ ಲೆವೆಲ್ ಬ್ಯಾಂಕ್ ಕಮಿಟಿ ಕನ್ವೈನರ್ ಚಂದ್ರಶೇಖರ ಪತ್ರದ ಮೂಲಕ ತಿಳಿಸಿದ್ದಾರೆ.
ಈ ಪತ್ರದಲ್ಲಿ ನಮೂದಿಸಿದಂತೆ, ಏಪ್ರಿಲ್ 22 ರಿಂದ ಮೇ 31ರ ವರೆಗೆ ರಾಜ್ಯದ ಎಲ್ಲಾ ಬ್ಯಾಂಕುಗಳು ಬೆಳಿಗ್ಗೆ 10 ರಿಂದ ಮಧ್ಯಹ್ನ 2 ಗಂಟೆ ವರೆಗೆ ಮಾತ್ರ ಸೇವೆ ನೀಡಲಿದೆ ಹಾಗೂ ಶೇಕಡಾ 50% ರಷ್ಟು ಮಾತ್ರ ಸಿಬ್ಬಂದಿ ಹಾಜರಾಗಲು ತಿಳಿಸಿದೆ.
ಬ್ಯಾಂಕಿನಲ್ಲಿ ಬೇಸಿಕ್ ಸೇವೆಗಳು ಮಾತ್ರ ಲಭ್ಯವಿದ್ದು ಉದಾಹರಣೆಗೆ, ಹಣ ವರ್ಗಾವಣೆ, ಕ್ಲಿಯರಿಂಗ್ ಸೇವೆ, ಸರ್ಕಾರಿ ವ್ಯವಹಾರ ಮಾತ್ರ ಇರುತ್ತದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಮಾಜಿ ಸಚಿವ ಎಚ್.ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ : ಅಪಹರಣ ಪ್ರಕರಣ ದಾಖಲು

4.8 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement