ಕೋವಿಡ್‌ ಹಿನ್ನೆಲೆ: ಶಕ್ತಿಪೀಠ ಸನ್ನತಿ ಚಂದ್ರಲಾ ಪರಮೇಶ್ವರಿ ಜಾತ್ರೆ ರದ್ದು

posted in: ರಾಜ್ಯ | 0

ಯಾದಗಿರಿ: ಕೊರೊನಾ ಎರಡನೆ ಅಲೆ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರ ತಾಲೂಕಿನ ಸುಪ್ರಿಸಿದ್ಧ ಸನ್ನತಿಯ ಶಕ್ತಿ ಪೀಠ ಶ್ರೀ ಚಂದ್ರಲಾ ಪರಮೇಶ್ವರಿ ಜಾತ್ರೆ ರದ್ದು ಮಾಡಲಾಗಿದೆ.
ಏಪ್ರಿಲ್‌ 26 ರಿಂದ ಪ್ರರಂಭಗೊಂಡು ಮೇ 4ರ ವರೆಗೆ ನಡೆಯಬೇಕಿದ್ದ ಜಾತ್ರೆಯಲ್ಲಿ ಕರ್ನಾಟಕ ಸೇರಿದಂತೆ ವಿವಿಧ ರಾಜ್ಯಗಳ ಲಕ್ಷಾಂತರ ಭಕ್ತರು ಭಾಗವಹಿಸುತ್ತಿದ್ದರು.
ಕೋವಿಡ್-19 ವೈರಸ್ ಹೆಚ್ಚಾಗುತ್ತಿರುವ ಕಾರಣ ಗುಂಪು ಸೇರುವುದು ಉತ್ಸವ ಜಾತ್ರೆ ನಡೆಸುವುದನ್ನು ನಿಷೇಧಿಸಿದ್ದರಿಂದ ಶ್ರೀ ಕ್ಷೇತ್ರದ ಅರ್ಚಕರು ಮತ್ತು ಸಿಬ್ಬಂದಿ ಸಾಂಕೇತಿಕವಾಗಿ ಶ್ರೀದೇವಿ ಯ ಉತ್ಸವದ ಪ್ರಕ್ರಿಯೆ ನಡೆಸಲು ನಿರ್ಧರಿಸಲಾಗಿದೆ
ಈ ಹಿನ್ನೆಲೆಯಲ್ಲಿ ಸರಕಾರದ ಕೋವಿಡ್ 19 ನಿಯಮಾವಳಿಗಳ ಪ್ರಕಾರ ಜಿಲ್ಲಾಧಿಕಾರಿಗಳ ಸೂಚನೆ ಮೇರೆಗೆ ತಾಲೂಕು ದಂಡಾಧಿಕಾರಿಗಳಾದ ಚಿತ್ತಾಪುರ್ ತಹಶೀಲ್ದಾರರು ಏಪ್ರಿಲ್‌ 20ರಂದು ಶ್ರೀಕ್ಷೇತ್ರದಲ್ಲಿ ಸಭೆ ನಡೆಸಿ ಕೊರೊನಾ ವೈರಸ್ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವುದರಿಂದ ದೇವಸ್ಥಾನದಲ್ಲಿ ಎಂದಿನಂತೆ ಕೇವಲ ಪೂಜಾ ಕೈಂಕರ್ಯ ಮಾತ್ರ ಮುಂದುವರಿಸಿಕೊಂಡು ಹೋಗಬೇಕು. ರಥೋತ್ಸವ ಹಾಗೂ ಜಾತ್ರೆ ನಡೆಸಬಾರದು ಹಾಗೂ ಶ್ರೀ ಕ್ಷೇತ್ರದಲ್ಲಿ ಯಾವುದೇ ರೀತಿಯಿಂದ ಜನಸಂದಣಿ ಆಗದಂತೆ ಆದೇಶ ಪಾಲಿಸಲು ಸೂಚಿಸಿದ್ದಾರೆ. ಹೀಗಾಗಿ ಕಾರಣ ಶ್ರೀ ಚಂದ್ರಲಾಂಬಾ ದೇವಸ್ಥಾನದ ಆಡಳಿತ ಮಂಡಳಿ ಹಾಗೂ ಅರ್ಚಕರು ಸಮೂಹ ಸಾಂಕೇತಿಕವಾಗಿ ಕಾರ್ಯಕ್ರಮ ನಡೆಸಲು ನಿರ್ಧರಿಸಲಾಗಿದೆ.
ಈ ವರ್ಷವೂ ಸಹ ಭಕ್ತರು ತಮ್ಮ ತಮ್ಮ ಮನೆಯಲ್ಲಿಯೇ ಶ್ರೀದೇವಿಯ ಪೂಜಾ ಸೇವಾ ನೈವೇದ್ಯಗಳನ್ನು ಸಮರ್ಥಿಸಿ ಶ್ರೀದೇವಿಯನ್ನು ಪ್ರಾರ್ಥಿಸಲು ಕೋರಲಾಗಿದೆ
ಶ್ರೀಕ್ಷೇತ್ರಕ್ಕೆ ಶ್ರೀ ದೇವಿಯ ದರ್ಶನಕ್ಕೆ ಬರುವಂತಹ ಭಕ್ತಾದಿಗಳೆಲ್ಲರೂ ಸರಕಾರದ ಮುಂದಿನ ಆದೇಶ ಬರುವವರೆಗೆ ಸಹಕರಿಸುವಂತೆ ದೇವಸ್ಥಾನದ ಸಮಿತಿ ಮನವಿ ಮಾಡಿಕೊಂಡಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ