ಕ್ಷಮಿಸಿ, ಕೋವಿಡ್‌ ಲಸಿಕೆಯೆಂದು ತಿಳಿದಿರಲಿಲ್ಲ ‘:ಈ ಪತ್ರದೊಂದಿಗೆ ಆಸ್ಪತ್ರೆಯಿಂದ ಕದ್ದ ಕೋವಿಡ್ ಲಸಿಕೆ ಹಿಂತಿರುಗಿಸಿದ ಕಳ್ಳರು..!

ಚಂಡೀಗಡ: ಹರಿಯಾಣದ ಜಿಂದ್ ಜಿಲ್ಲೆಯ ಸರ್ಕಾರಿ ಆಸ್ಪತ್ರೆಯಲ್ಲಿ ಬುಧವಾರ ರಾತ್ರಿ ವೇಳೆ 1700 ಡೋಸ್ ಕೋವಿಡ್‌ ವೈರಸ್ ಲಸಿಕೆಯನ್ನು ಕದ್ದುಕೊಂಡು ಹೋಗಿದ್ದ ಕಳ್ಳರು ಕೆಲವೇ ಗಂಟೆಗಳಲ್ಲಿ ಅದನ್ನು ಮರಳಿ ತಂದಿಟ್ಟಿರುವ ವಿದ್ಯಮಾನ ಘಟನೆ ಬೆಳಕಿಗೆ ಬಂದಿದೆ.
ಒಟ್ಟು 1270 ಡೋಸ್ ಕೊವಿಶೀಲ್ಡ್ ಲಸಿಕೆ ಹಾಗೂ 440 ಡೋಸ್ ಕೊವ್ಯಾಕ್ಸಿನ್ ಲಸಿಕೆ ಕಳ್ಳತನವಾಗಿತ್ತು ಎಂದು ಸಿವಿಲ್ ಲೈನ್ಸ್ ಪೊಲೀಸ್ ಠಾಣೆಯ ಅಧಿಕಾರಿ ರಾಜೇಂದ್ರ ಸಿಂಗ್ ಗುರುವಾರ ಮಾಹಿತಿ ನೀಡಿದ್ದರು. ಗುರುವಾರ ಬೆಳಗ್ಗೆ ಆಸ್ಪತ್ರೆಯಲ್ಲಿ ನೈರ್ಮಲ್ಯ ಸಿಬ್ಬಂದಿಯೊಬ್ಬರು ಬಾಗಿಲು ತೆರೆಯಲು ಮುಂದಾದ ಸಂದರ್ಭದಲ್ಲಿ ಬೀಗ ಮುರಿದ ವಿಷಯ ಬೆಳಕಿಗೆ ಬಂದಿದೆ.
ಸರ್ಕಾರಿ ಆಸ್ಪತ್ರೆಗೆ ನುಗ್ಗಿದ ಆರೋಪಿಗಳು ಆಸ್ಪತ್ರೆಯಲ್ಲಿ ಬೇರೆ ಯಾವುದೇ ಔಷಧಿ ಮತ್ತು ಲಸಿಕೆ ಹಾಗೂ ಹಣವನ್ನು ಮುಟ್ಟಿಲ್ಲ ಎಂದು ತಿಳಿಸಿದ್ದರು. ಇದಾಗಿ ಕೆಲವೇ ಗಂಟೆಗಳಲ್ಲಿ ಬೈಕ್ ನಲ್ಲಿ ಆಗಮಿಸಿದ ಅಪರಿಚಿತ ವ್ಯಕ್ತಿಯೊಬ್ಬ ಸಿವಿಲ್ ಲೈನ್ ಪೊಲೀಸ್ ಠಾಣೆ ಬಳಿ ಟೀ ಅಂಗಡಿ ಎದುರಿನಲ್ಲಿ ಲಸಿಕೆಯ ಬಾಕ್ಸ್ ಅನ್ನು ಇರಿಸಿದ್ದಾರೆ. ಈ ಬಾಕ್ಸ್ ನಲ್ಲಿ ಪೊಲೀಸ್ ಅಧಿಕಾರಿಗಳಿಗೆ ಆಹಾರದ ಬಾಕ್ಸ್ ಇದೆ ಎಂದು ಟೀ ಅಂಗಡಿಯವರಿಗೆ ತಿಳಿಸಿದ್ದಾರೆ ಎಂದು ಸ್ಥಳೀಯರೊಬ್ಬರು ತಿಳಿಸಿದ್ದಾರೆ.
ಲಸಿಕೆ ಕಳ್ಳತನದ ಬಗ್ಗೆ ಆರೋಪಿ ವಿಷಾದ:

ಪ್ರಮುಖ ಸುದ್ದಿ :-   100 ವರ್ಷಗಳಲ್ಲಿ ಅಲಿಘರ್ ಮುಸ್ಲಿಂ ವಿಶ್ವವಿದ್ಯಾಲಯಕ್ಕೆ ಮೊದಲ ಮಹಿಳಾ ಉಪಕುಲಪತಿ ನೇಮಕ

ಲಸಿಕೆಯನ್ನು ಕಳ್ಳತನ ಮಾಡಿರುವ ಬಗ್ಗೆ ಸ್ವತಃ ಆರೋಪಿಯು ವಿಷಾದ ವ್ಯಕ್ತಪಡಿಸಿದ್ದಾನೆ. ಕ್ಷಮಿಸಿ.. ನಾನು ಕದ್ದು ತೆಗೆದುಕೊಂಡು ಹೋಗಿದ್ದು ಕೊರೊನಾ ವೈರಸ್ ಲಸಿಕೆ ಎಂಬುದು ನನಗೆ ತಿಳಿದಿರಲಿಲ್ಲ , ಎಂದು ಪತ್ರದಲ್ಲಿ ಕಳ್ಳತನದ ಆರೋಪಿ ಬರೆದಿದ್ದಾನೆ.
ಆರೋಪಿಯು ಬೇರೆ ಯಾವುದೇ ಔಷಧಿ ಮತ್ತು ಇಂಜೆಕ್ಷನ್ ಕಳ್ಳತನ ಮಾಡುವುದಕ್ಕೆ ಹೋಗಿದ್ದಾನೆ. ತದನಂತರದಲ್ಲಿ ಆತ ಕಳುವು ಮಾಡಿರುವ ಲಸಿಕೆ ಕೊವಿಡ್-19 ಸೋಂಕಿಗೆ ಸಂಬಂಧಿಸಿದ್ದು ಎಂದು ಗೊತ್ತಾಗಿದ್ದಕ್ಕೆ ಅದನ್ನು ಹಿಂತಿರುಗಿ ತಂದಿಟ್ಟಿದ್ದಾನೆ. ಪೊಲೀಸ್‌ ಠಾಣೆಗೆ ತಲುಪಿಸಿದರೆ ಅದು ಆಸ್ಪತ್ರೆಗೆ ತಲುಪುತ್ತದೆ ಎಂಬ ಕಾರಣಕ್ಕೆ ಪೊಲೀಸ್‌ ಠಾಣೆ ಸಮೀಪ ಇಟ್ಟಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆಕುರಿತು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಯನ್ನು ಬಂಧಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

 

 

 

 

 

 

 

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement