ಆಸ್ಪತ್ರೆಯಲ್ಲಿ ಸಕಾಲಕ್ಕೆ ಬೆಡ್‌ ಸಿಗದೆ ಕೊರೊನಾ ವಾರಿಯರ್ಸ್‌ ಸಾವು

ಬೆಂಗಳೂರು: ಕೊರೋನಾ ಎರಡನೇ ಅಲೆ ತಜ್ಞರು ಅಂದಾಜಿಸಿದ್ದಕ್ಕಿಂತ ಭೀಕರವಾಗಿದೆ. ಸೋಂಕಿನ ಹರಡುವಿಕೆ ಅಂದಾಜಿಗೆ ಸಿಗುತ್ತಿಲ್ಲ.
ಈ ಕೋವಿಡ್‌ ಸಮಯದಲ್ಲಿ ಕೊರೊನಾ ವಾರಿಯರ್ಸ್‌ ಆಗಿದ್ದ ಬೆಂಗಳೂರಿನ ಸ್ವಾಬ್​ ಸಂಗ್ರಹಕಾರರೊಬ್ಬರು ಆಸ್ಪತ್ರೆಯಲ್ಲಿ ಬೆಡ್‌ ಸಿಗದೆ ಮೃತಪಟ್ಟಿದ್ದಾರೆ.
. ಮರ್ಸಿಟೌನ್​ನ ಗೀತಾ (35) ಎಂಬವರು ಮೃತಪಟ್ಟವರು. ಕೊರೊನಅ ಸೋಂಕಿಗೆ ಒಳಗಾಗಿದ್ದ ಅವರು, ನಾಲ್ಕೈದು ಆಸ್ಪತ್ರೆಗಳಿಗೆ ಓಡಾಡಿದರೂ ಸೂಕ್ತ ಸಮಯದಲ್ಲಿ ಬೆಡ್​ ಸಿಗದ ಕಾರಣ ಆಕ್ಸಿಜನ್​ ಮಟ್ಟ ಕಡಿಮೆಯಾಗಿ ಪ್ರಾಣ ಬಿಟ್ಟಿದ್ದಾರೆ.
ಒಂದು ವಾರದ ಹಿಂದೆ ಗೀತಾ ಅವರಿಗೆ ಕೊರೋನಾ ಸೋಂಕು ದೃಢಪಟ್ಟಿತ್ತು. ಉಸಿರಾಟದ ತೊಂದರೆಯಿದ್ದ ಅವರಿಗೆ ಚಿಕಿತ್ಸೆಗಾಗಿ ಆಸ್ಪತ್ರೆಗೆ ಹೋದಾಗ ಸೂಕ್ತ ಸಮಸಯದಲ್ಲಿ ಬೆಡ್​ ಸಿಕ್ಕಿರಲಿಲ್ಲ. ಕಡೆಗೆ ನಾಲ್ಕೈದು ತಾಸು ಕಾಯ್ದ ಬಳಿಕ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಬೆಡ್​ ಸಿಕ್ಕಿತ್ತು. ಈ ವೇಳೆ ಅವರಿಗೆ ಆಕ್ಸಿಜನ್​ ಪ್ರಮಾಣ ಕಡಿಮೆಯಾಗಿತ್ತು. ಕಡೆಗೂ ಸಾವು ಬದುಕಿನ ನಡುವೆ ಹೋರಾಟ ನಡೆಸಿ ಪ್ರಾಣ ಬಿಟ್ಟಿದ್ದಾರೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement