ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಕೊರೋನಾ ವೈರಸ್ ಉಲ್ಬಣ ಮುಂದುವರೆದಿದೆ. ಈಗ ಬೆಂಗಳೂರು ದೇಶದಲ್ಲೇ ಅತೀ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳನ್ನು ಹೊಂದಿದ ಜಿಲ್ಲೆಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೆ ಏರಿದೆ.
ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿ ಶುಕ್ರವಾರ 16,662 ಹೊಸ ಕೊರೊನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಸಕ್ರಿಯ ಪ್ರಕರಣಗಳ ಸಂಖ್ಯೆ 1,49,624ಕ್ಕೆ ತಲುಪಿತ್ತು. ಹೀಗಾಗಿ ದೇಶದಲ್ಲೇ ಅತೀ ಹೆಚ್ಚು ಸಕ್ರಿಯ ಕೊರೊನಾ ಪ್ರಕರಣಗಳನ್ನು ಹೊಂದಿದ ಜಿಲ್ಲೆಗಳ ಪಟ್ಟಿಯಲ್ಲಿ ಬೆಂಗಳೂರು ನಗರ ಅಗ್ರ ಸ್ಥಾನಕ್ಕೇರಿದೆ. ಬೆಂಗಳೂರಿನ ನಂತರ ಅತಿ ಹೆಚ್ಚು ಸಕ್ರಿಯ ಪ್ರಕರಣಗಳಿರುವ ಜಿಲ್ಲೆ ಪುಣೆ ಆಗಿದ್ದು ಇಲ್ಲಿ 1.1 ಲಕ್ಷ ಸಕ್ರಿಯ ಪ್ರಕರಣಗಳಿವೆ.
ಬೆಂಗಳೂರು, ಪುಣೆ ಹೊರತುಪಡಿಸಿದರೆ ಭಾರತದ ಉಳಿದೆಲ್ಲಾ ಜಿಲ್ಲೆಗಳು 1 ಲಕ್ಷಕ್ಕೂ ಕಡಿಮೆ ಸಕ್ರಿಯ ಪ್ರಕರಣಗಳನ್ನು ಹೊಂದಿವೆ. ದೆಹಲಿ 1 ಲಕ್ಷದ ಸಮೀಪದಲ್ಲಿದ್ದು, ಮುಂಬೈ 81,174 ಸಕ್ರಿಯ ಪ್ರಕರಣಗಳನ್ನು ಹೊಂದಿದೆ.
ಬೆಂಗಳೂರಿನಲ್ಲೇ ಕರ್ನಾಟಕದ ಶೇ.70 ಪ್ರಕರಣಗಳು..!
ಕರ್ನಾಟಕದ ದಾಖಲಾಗಿರುವ ಒಟ್ಟು ಕೋವಿಡ್ ಪ್ರಕರಣಗಳ ಪೈಕಿ ಶೇ.70ರಷ್ಟು ಪ್ರಕರಣಗಳು ಬೆಂಗಳೂರಿನಲ್ಲೇ ದಾಖಲಾಗುತ್ತಿವೆ. ಇದು ಸುಮಾರು ಇಪ್ಪತ್ತು ದಿನಗಳಿಂದಲೂ ಮುಂದುವರಿದಿದೆ. ಹೀಗೆಯೇ ಮುಂದುವರೆದಲ್ಲಿ ಮೇ 1ರ ಒಳಗೆ ದೈನಂದಿನ ಕೊರೊನಾ ಪ್ರಕರಣಗಳ ಸಂಖ್ಯೆ 25 ಸಾವಿರಕ್ಕೆ ತಲುಪಲಿದೆ ಎಂದುಅಧ್ಯಯನ ವರದಿಗಳು ಹೇಳಿವೆ. ಪರಿಸ್ಥಿತಿ ಹೀಗೆ ಮುಂದುವರಿದರೆ ಆ ಪೈಕಿ ಶೇ.5ರಷ್ಟು ಜನರಿಗೆ ತುರ್ತು ಸೇವೆ ಒದಗಿಸಬೇಕೆಂದರೂ ಪರಿಸ್ಥಿತಿ ಕಠಿಣವಾಗಲಿದೆ ಎಂದು ತಾಂತ್ರಿಕ ಸಲಹಾ ಸಮಿತಿ ಸದಸ್ಯ ಡಾ.ಗಿರಿಧರ್ ಬಾಬು ಈಗಾಗಲೇ ಎಚ್ಚರಿಕೆ ನೀಡಿದ್ದಾರೆ.
ಸೋಂಕು ನಿಯಂತ್ರಣಕ್ಕೆ ವೀಕೆಂಡ್ ಕರ್ಫ್ಯೂ ಹಾಗೂ ರಾತ್ರಿ ಕರ್ಫ್ಯೂಅಂತಹ ಕ್ರಮ ಕೂಗೊಳ್ಳಗುತ್ತಿದೆ. ಆದರೆ ಎರಡನೇ ಅಲೆ ಸೋಂಕು ಅತಿವೇಗವಾಗಿ ಹಬ್ಬುತ್ತಿರುವುದರಿಂದ ಜನರು ಆದಷ್ಟು ಮನೆಯಲ್ಲಿ ಇರುವುದು ಒಳಿತು ಎಂದು ಪದೇಪದೇ ಹೇಳಲಾಗುತ್ತಿದೆ.


ನಿಮ್ಮ ಕಾಮೆಂಟ್ ಬರೆಯಿರಿ