ಎರಡು ಬಾರಿ ಕೊರೊನಾದೊಂದಿಗೆ ಯುದ್ಧ ಗೆದ್ದ 90ರ ಅಜ್ಜ..!!

ಔರಂಗಾಬಾದ್: ಮಹಾರಾಷ್ಟ್ರದ ಕೋವಿಡ್ -19 ಸಾವು ಏರಿಕೆಯಾಗುತ್ತಿರುವ ಸಮಯದಲ್ಲಿ, ಬೀಡ್ ಜಿಲ್ಲೆಯ 90 ವರ್ಷದ ವ್ಯಕ್ತಿಯೊಬ್ಬರು ಮಾರಣಾಂತಿಕ ಸೋಂಕನ್ನು ಎರಡು ಬಾರಿ ಎದುರಿಸಿ ಗೆದ್ದಿದ್ದಾರೆ. ಎರಡು ಸಲವೂ ಆಸ್ಪತ್ರೆಗೆ ದಾಖಲಾಗಿದ್ದ ಅವರು ಎರಡು ಸಲವೂ ಕೋವಿಡ್‌ ವಿರುದ್ಧ ಜಯಶಾಲಿಯಾಗಿ ಹೊರ ಬಂದಿದ್ದಾರೆ…!
ಅವರು ತನ್ನ ಚೇತರಿಕೆಗೆ ಯಾವುದೇ ಹ್ಯಾಬಿಟ್‌ ಇಲ್ಲದಿರುವುದು, ಆರೋಗ್ಯಕರ ಜೀವನಶೈಲಿ ಮತ್ತು ಸಕಾರಾತ್ಮಕ ಮನೋಭಾವವೇ ಕಾರಣ ಎಂದು ಹೇಳಿದ್ದಾರೆ.
ಮಹಾರಾಷ್ಟ್ರದ ಬೀಡ್‌ ಜಿಲ್ಲೆಯ ಅದಾಸ್‌ನ ನಿವಾಸಿ ಪಾಂಡುರಂಗ ಆತ್ಮಾರಾಮ ಅಗ್ಲೇವ್ (ಅಡಸ್ಕರ್), 2020 ರ ನವೆಂಬರ್‌ನಲ್ಲಿ ಮೊದಲ ಬಾರಿಗೆ ಕೊರೊನಾ ವೈರಸ್‌ ಸೋಂಕಿಗೆ ತುತ್ತಾದರು ಮತ್ತು ನಂತರ ಕೇಜ್‌ನಲ್ಲಿರುವ ಸರ್ಕಾರಿ ಆಸ್ಪತ್ರೆಯಲ್ಲಿ ದಾಖಲಾಗಿ 10 ದಿನಗಳ ವರೆಗೆ ಚಿಕಿತ್ಸೆ ಪಡೆದ ನಂತರ ಚೇತರಿಸಿಕೊಂಡರು.
ವಿಶ್ವದಾದ್ಯಂತ ಲಕ್ಷಾಂತರ ಜನರನ್ನುಸಾಯಿಸುತ್ತಿರುವ ಮಾರಣಾಂತಿಕ ಕಾಯಿಲೆಯ ವಿರುದ್ಧದ ಹೋರಾಟದ ಬಗ್ಗೆ ಪಾಂಡುರಂಗ ಅವರು, “ನಾನು ಮೊದಲ ಬಾರಿಗೆ ಸೋಂಕಿಗೆ ತುತ್ತಾದಾಗ, ಅದರ ತೀವ್ರತೆಯು ಕಡಿಮೆಯಾಗಿತ್ತು ಎಂದು ಹೇಳುತ್ತಾರೆ.
ಆದಾಗ್ಯೂ, ಚೇತರಿಕೆ ಹಾದಿ ಎರಡನೇ ಬಾರಿಗೆ ಅವರಿಗೆ ಸುಲಭವಾಗಿರಲಿಲ್ಲ. ಏಪ್ರಿಲ್‌ ತಿಂಗಳ ಆರಂಭದಲ್ಲಿ ಪಾಂಡುರಂಗ ಅವರು ಮತ್ತೆ ಕೊರೊನಅ ಸೋಂಕಿಗೆ ಒಳಗಾದರು. ಅವರನ್ನು ಅಂಬಜೋಗೈನ ಲೋಖಂಡಿ ಸಾವರ್ಗಾಂವ್‌ನಲ್ಲಿರುವ ಕೋವಿಡ್‌-19 ಆರೈಕೆ ಕೇಂದ್ರಕ್ಕೆ ದಾಖಲಿಸಲಾಯಿತು ಮತ್ತು ಐದು ದಿನಗಳ ನಂತರ ಅಲ್ಲಿಂದ ಸ್ವಾಮಿ ರಾಮಾನಂದ್ ತೀರ್ಥ ವೈದ್ಯಕೀಯ ಕಾಲೇಜಿನ ಚಿಕಿತ್ಸಾ ಕೇಂದ್ರಕ್ಕೆ ಕರೆದೊಯ್ಯಲಾಯಿತು, ಅಲ್ಲಿಂದ ಏಪ್ರಿಲ್‌ 17ರಂದು ಬಿಡುಗಡೆ ಮಾಡಲಾಯಿತು.
ನನ್ನ ತಂದೆಯ ಹೈ-ರೆಸಲ್ಯೂಶನ್ ಕಂಪ್ಯೂಟರೀಕೃತ ಟೊಮೊಗ್ರಫಿ (ಎಚ್‌ಆರ್‌ಸಿಟಿ) ಸ್ಕೋರ್ 18 ಆಗಿತ್ತು, ಅವರು ಎರಡನೇ ಬಾರಿಗೆ ಸೋಂಕಿಗೆ ಒಳಗಾದಾಗ ಚೇತರಿಸಿಕೊಳ್ಳಲು ಸ್ವಲ್ಪ ಸಮಯ ತೆಗೆದುಕೊಂಡಿತುಅವರು ಶಿಸ್ತುಬದ್ಧ ಜೀವನಶೈಲಿಯನ್ನು ನಡೆಸುತ್ತಾರೆ ಮತ್ತು ಇಲ್ಲಿಯ ವರೆಗೆ ಅವರಿಗೆ ಯಾವುದೇ ಕೊಮೊರ್ಬಿಡ್ ಪರಿಸ್ಥಿತಿಗಳಿಲ್ಲ “ಎಂದು ಪಾಂಡುರಂಗ ಅವರ ಮಗ ವಿಷ್ಣು ಹೇಳಿದರು.
ರೋಗವನ್ನು ಸೋಲಿಸುವ ರಹಸ್ಯವನ್ನು ಬಹಿರಂಗಪಡಿಸಿದ ಪಾಂಡುರಂಗ ಅವರು, “ಇಂದು ಯುವಕರು ಸುಲಭವಾಗಿ ವ್ಯಸನಗಳತ್ತ ತಿರುಗುತ್ತಿದ್ದಾರೆ ಮತ್ತು ಸದೃಢವಾಗಿರಲು ವ್ಯಾಯಾಮ ಮಾಡುವುದಿಲ್ಲ ಎನ್ನುತ್ತಾರೆ.
ನಾನು ನಿಯಮಿತವಾಗಿ ವಾಕಿಂಗ್‌ಗೆ ಹೋಗುತ್ತೇನೆ ಮತ್ತು ಒತ್ತಡರಹಿತ ಜೀವನ ನಡೆಸಿದ್ದೇನೆ, ಇದು ನನಗೆ ಸಾಕಷ್ಟು ಸಹಾಯ ಮಾಡಿದೆ.
ನಾನು ದಾಖಲಿಸಲ್ಪಟ್ಟ ಆಸ್ಪತ್ರೆಯಲ್ಲಿ ರೋಗಿಗಳು ಕೊರೊನಾ ರೋಗದಿಂದ ಸಾಯುತ್ತಲೇ ಇದ್ದರೂ ನನಗೆ ಸಕಾರಾತ್ಮಕವಾಗಿರಲು ಸಾಧ್ಯವಾಯಿತು.
ನನಗೆ ಆಮ್ಲಜನಕವನ್ನು ನೀಡಲಾಯಿತು. ಆದರೂ ನಾನು ಯಾವುದೇ ಒತ್ತಡವನ್ನು ತೆಗೆದುಕೊಳ್ಳಲಿಲ್ಲ ಮತ್ತು ನನ್ನ ಆರೋಗ್ಯ ಮತ್ತು ಆಹಾರದ ಬಗ್ಗೆ ಗಮನಹರಿಸಿದ್ದೇನೆ” ಎಂದು ಅವರು ಹೇಳಿದರು.
ಸ್ವಾಮಿ ರಾಮಾನಂದ್ ತೀರ್ಥ ವೈದ್ಯಕೀಯ ಕಾಲೇಜಿನಲ್ಲಿ ಚಿಕಿತ್ಸೆ ನೀಡಿದ ವೈದ್ಯರು ಮತ್ತು ವೈದ್ಯಕೀಯ ಸಿಬ್ಬಂದಿಯ ಮೇಲೂ ಇವರ ಸಕಾರಾತ್ಮಕ ವರ್ತೆ ಪರಿಣಾಮ ಬೀರಿದೆ.
ವೈದ್ಯಕೀಯ ಸಿಬ್ಬಂದಿಯ ಮನೋಸ್ಥೈರ್ಯವನ್ನು ಹೆಚ್ಚಿಸಿದ ಕೆಲವು ರೋಗಿಗಳು ಇದ್ದರು. ಪಾಂಡುರಂಗ ಅವರಿಗೆ ಅಷ್ಟೊಂದು ವಯಸ್ಸಾಗಿದ್ದರೂ ಅವರು ಮಾನಸಿಕವಾಗಿ ಬಲಶಾಲಿಯಾಗಿದ್ದರು,ಸಕಾರಾತ್ಮಕವಾಗಿ ಆಲೋಚಿಸುತ್ತಿದ್ದರು. ಇದು ಅವರಿಗೆ ಕೊರೊನಾ ಸೋಲಿಸಲು ಸಹಾಯ ಮಾಡಿತು.
ಅವರು ಇಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗ ನಾನು ಅವರೊಂದಿಗೆ ಪ್ರತಿ ದಿನ ಹೆಚ್ಚುವರಿ 10 ನಿಮಿಷಗಳನ್ನು ಕಳೆದಿದ್ದೇನೆ “ಎಂದು ಆಸ್ಪತ್ರೆಯ ಕೋವಿಡ್‌-19 ಉಸ್ತುವಾರಿ ಡಾ.ಸಿದ್ದೇಶ್ವರ ಬಿರಾಜ್ದಾರ್ ಹೇಳಿದ್ದಾರೆ.
.

ಪ್ರಮುಖ ಸುದ್ದಿ :-   ಕಾರು ಅಡ್ಡ ಹಾಕಿ ನಟಿ ಹರ್ಷಿಕಾ ಪೂಣಚ್ಚ ದಂಪತಿಗೆ ಕಿರುಕುಳ : "ನಾವು ಪಾಕಿಸ್ತಾನ ಅಥವಾ ಅಫ್ಘಾನಿಸ್ತಾನದಲ್ಲಿದ್ದೇವೆಯೇ ಎಂದು ನಟಿ ಪ್ರಶ್ನೆ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement