ಕೈಗಾರಿಕೆಗಳು ವೈದ್ಯಕೀಯ ಉದ್ದೇಶ ಬಿಟ್ಟು ಬೇರೆ ಉದ್ದೇಶಕ್ಕೆ ಆಮ್ಲಜನಕ ಉತ್ಪಾದಿಸುವ ಹಾಗಿಲ್ಲ: ಕೇಂದ್ರ ಸರ್ಕಾರ ಆದೇಶ

ನವ ದೆಹಲಿ: ಕೊವಿಡ್ ಸೋಂಕಿತರ ಚಿಕಿತ್ಸೆಗಾಗಿ ತುರ್ತು ಕ್ರಮ ಕೈಗೊಂಡಿರುವ ಕೇಂದ್ರ ಗೃಹ ಇಲಾಖೆ ವೈದ್ಯಕೀಯ ದ್ರವ ಆಮ್ಲಜನಕ ವೈದ್ಯಕೀಯೇತರ ಉದ್ದೇಶಗಳಿಗೆ ಬಳಕೆ ಮಾಡುವಂತಿಲ್ಲ ಹಾಗೂ ದೇಶದಲ್ಲಿ ಯಾವುದೇ ಕೈಗಾರಿಕೆಗಳು ವೈದ್ಯಕೀಯ ಉದ್ದೇಶಕ್ಕೆ ಮಾತ್ರ ದ್ರವಿಕೃತ ಆಮ್ಲಜನಕವನ್ನು ಉತ್ಪಾದಿಸಬೇಕು. ಇದರಿಂದ ಯಾರಿಗೂ ವಿನಾಯಿತಿ ಇಲ್ಲ ಎಂದು ಕೇಂದ್ರ ಸರ್ಕಾರ  ಭಾನುವಾರ ಆದೇಶಿಸಿದೆ.
ಈ ಕುರಿತು ಎಲ್ಲ ರಾಜ್ಯ ಸರ್ಕಾರ ಮತ್ತು ಕೇಂದ್ರಾಡಳಿತ ಪ್ರದೇಶಗಳಿಗೂ ನಿರ್ದೇಶನ ನೀಡಿದೆ. ಮುಂದಿನ ಆದೇಶ ಬರುವ ವರೆಗೂ ವೈದ್ಯಕೀಯ ಆಮ್ಲಜಕವನ್ನು ವೈದ್ಯಕೀಯ ಉಪಯೋಗ ಹೊರತುಪಡಿಸಿ ಬೇರೆ ಯಾವ ಉಪಯೋಗಕ್ಕೂ ಬಳಸುವಂತಿಲ್ಲ ಹಾಗೂ ಕೈಗಾರಿಕೆಗಳು ವೈದ್ಯಕೀಯ ಉದ್ದೇಶಕ್ಕೆ ಮಾತ್ರ ದ್ರವಿಕೃತ ಆಮ್ಲಜನಕವನ್ನು ಉತ್ಪಾದಿಸಬೇಕು ಎಂದು ತಿಳಿಸಿದೆ.
ಸದ್ಯ ದೇಶದಲ್ಲಿ ದಾಸ್ತಾನು ಇರುವ ವೈದ್ಯಕೀಯ ಆಮ್ಲಜನಕಕ್ಕೂ ಇದೇ ಆದೇಶ ಅನ್ವಯವಾಗಲಿದೆ.
ಕೊರೊನಾ ಸೋಂಕು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ನಿನ್ನೆಯಷ್ಟೇ ಇನ್ನೊಂದು ಮಹತ್ವದ ಹೆಜ್ಜೆಯಿಟ್ಟಿತ್ತು. ವೈದ್ಯಕೀಯ ಉಪಕರಣಗಳ ಮೇಲೆ ಸುಂಕ ಕಡಿತಕ್ಕೆ ಆದೇಶ ನೀಡಿತ್ತು. ನಿನ್ನೆಯ ಆದೇಶದ ಮೂಲಕ ಆಕ್ಸಿಜನ್​ ಸರಬರಾಜು, ವ್ಯಾಕ್ಸಿನ್​ ಆಮದಿಗೂ ಸುಂಕ ಕಡಿತಗೊಳಿಸಿದೆ. ಸೀಮಾ ಸುಂಕದಿಂದ ಕೊರೊನಾ ವ್ಯಾಕ್ಸಿನ್​ಗೆ ವಿನಾಯಿತಿ ನೀಡಲಾಗಿದೆ.
ಆಮದಿಗೆ ವಿಧಿಸಲಾಗುತ್ತಿದ್ದ ಹೆಲ್ತ್​ ಸೆಸ್​ ಕೂಡ ರದ್ದು ಮಾಡಲಾಗಿದೆ. 3 ತಿಂಗಳ ವರೆಗೆ ಈ ತೆರಿಗೆ ವಿನಾಯಿತಿಗಳು ಅನ್ವಯವಾಗಲಿವೆ ಎಂದು ಕೇಂದ್ರ ಸರ್ಕಾರ ಆದೇಶದಲ್ಲಿ ಸ್ಪಷ್ಟಪಡಿಸಿದೆ.
ಕೇಂದ್ರ ಸರ್ಕಾರವು ಆಮ್ಲಜನಕ ಸರಬರಾಜು, ವ್ಯಾಕ್ಸಿನ್​ ಆಮದು ಮೇಲಿನ ಸುಂಕ ಕಡಿತಗೊಳಿಸಿರುವುದರಿಂದ ಈ ವೈದ್ಯಕೀಯ ಉಪಕರಣಗಳು ಈಗ ಅಗ್ಗವಾಗಲಿದೆ ಮತ್ತು ಹೆಚ್ಚಿನ ಪ್ರಮಾಣದಲ್ಲಿ ಸಿಗಲಿದೆ ಎಂದು ವಿಶ್ಲೇಷಿಸಲಾಗಿದೆ.

ಪ್ರಮುಖ ಸುದ್ದಿ :-   ಲೋಕಸಭೆ ಚುನಾವಣೆ 2ನೇ ಹಂತದ ಮತದಾನ : ಶ್ರೀಮಂತ ಅಭ್ಯರ್ಥಿ ₹ 622 ಕೋಟಿ ಒಡೆಯ, ಅತ್ಯಂತ ಬಡ ಅಭ್ಯರ್ಥಿ ಬಳಿ ಇರುವುದು ಕೇವಲ...

 

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement