ಕೊರೊನಾ ಹೆಚ್ಚಳ: ದೆಹಲಿಯಲ್ಲಿ ಲಾಕ್‌ಡೌನ್‌ ಅವಧಿ ವಿಸ್ತರಣೆ

ನವ ದೆಹಲಿ: ದೆಹಲಿಯಲ್ಲಿ ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಹೆಚ್ಚಳವಾಗುತ್ತಿದ್ದು, ಹೀಗಾಗಿ ದೆಹಲಿಯಲ್ಲಿ ಸೋಮವಾರ ( ಏಪ್ರಿಲ್ 26, 2021) ಬೆಳಿಗ್ಗೆ ವರೆಗೆ ಜಾರಿಯಲ್ಲಿದ್ದ ಕೋವಿಡ್-19 ಲಾಕ್ ಡೌನ್ ಅನ್ನು ಮತ್ತೊಂದು ವಾರ ವಿಸ್ತರಣೆ ಮಾಡಿ ದೆಹಲಿ ಮುಖ್ಯಮಂತ್ರಿ ಕೇಜ್ರಿವಾಲ ಆದೇಶ ಹೊರಡಿಸಿದ್ದಾರೆ.
ದೆಹಲಿಯಲ್ಲಿ ಕೊರೊನಾ ವೈರಸ್ ಪರಿಸ್ಥಿತಿ ಭೀಕರವಾಗಿರುವುದರಿಂದ ಲಾಕ್ ಡೌನ್ ಅನ್ನು ಮತ್ತೆ ಒಂದು ವಾರಗಳ ವಿಸ್ತರಿಸಲಾಗಿದೆ ಎಂದು ತಿಳಿಸಲಾಗಿದೆ.
ಶನಿವಾರ, ರಾಷ್ಟ್ರ ರಾಜಧಾನಿಯಲ್ಲಿ 24,103 ಹೊಸ ಕೋವಿಡ್-19 ಸೋಂಕುಗಳು ಮತ್ತು 357 ಸಾವುಗಳು ದಾಖಲಾಗಿವೆ, ಸಾಂಕ್ರಾಮಿಕ ರೋಗ ಕಾಣಿಸಿಕೊಂಡ ನಂತರ ಇದು ನಗರಕ್ಕೆ ಅತಿ ಹೆಚ್ಚು ಒಂದೇ ದಿನದ ಸಂಖ್ಯೆಯಾಗಿದೆ. ದೆಹಲಿಯ ಒಟ್ಟು ಸಕ್ರಿಯ ಪ್ರಕರಣಗಳ ಸಂಖ್ಯೆ ಒಂದು ಲಕ್ಷಕ್ಕೆ ಸಮೀಪಿಸಿದೆ. ನಗರದಲ್ಲಿ ಪ್ರಸ್ತುತ 93,080 ಸಕ್ರಿಯ ಸೋಂಕುಗಳಿವೆ. ದೆಹಲಿಯಲ್ಲಿ 13,898 ಕೊರೊನಾವೈರಸ್ ಸಂಬಂಧಿತ ಸಾವುಗಳು ಸಂಭವಿಸಿವೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ