ದೆಹಲಿಯಲ್ಲಿ ಆಮ್ಲಜನಕದ ಕೊರತೆ..ಈತನ ಮನೆಯಲ್ಲಿತ್ತು 48 ಆಮ್ಲಜನಕದ ಸಿಲಿಂಡರ್…!!

ನವ ದೆಹಲಿ: ಇಡೀ ದೇಶಾದ್ಯಂತ ಎಲ್ಲೆಲ್ಲೂ ಆಮ್ಲಜನಕದ ಸಿಲಿಂಡರ್‌ ಅಭಾವವಾಗಿರುವ ಹೊತ್ತಿನಲ್ಲಿ ಇಲ್ಲೊಬ್ಬ ಮನೆಯೊಂದರಲ್ಲಿ ಬರೋಬ್ಬರಿ 48 ಆಮ್ಲಜನಕದ ಸಿಲಿಂಡರ್‌ ಬಚ್ಚಿಟ್ಟಿದ್ದ..!
ಈಗ ಆತ ಪೊಲೀಸರ ಅತಿಥಿಯಾಗಿದ್ದಾನೆ. ಹಾಗೂ ಆಮ್ಲಜನಕದ ಸಿಲಿಂಡರ್‌ ವಶಕ್ಕೆ ಪಡೆಯಲಾಗಿದೆ.ಹೆಚ್ಚು ಆಮ್ಲಜನಕದ ಕೊರತೆ ಎದುರಿಸುತ್ತಿರುವ ದೆಹಲಿಯಲ್ಲಿ ಈ ಘಟನೆ ನಡೆದಿದೆ. ಮಾಹಿತಿ ಪಡೆದ ದೆಹಲಿ ಪೊಲೀಸರ ತಂಡ ಈ ಮನೆ ಮೇಲೆ ದಾಳಿ ನಡೆಸಿ 32 ದೊಡ್ಡ ಹಾಗೂ 16 ಸಣ್ಣ ಅಮ್ಲಜನಕದ ಸಿಲಿಂಡರ್​ಗಳನ್ನು ವಶಪಡಿಸಿಕೊಂಡಿದೆ.
ಕೃತಕ ಆಮ್ಲಜನಕ ಕೈಗಾರಿಕೆ ಹೊಂದಿದ್ದೇನೆ ಎಂದು ಹೇಳಿಕೊಂಡಿರುವ ಮನೆಯ ಮಾಲೀಕ ಅನಿಲಕುಮಾರ್ ಎಂಬಾತ ದೆಹಲಿಯ ನೈಋತ್ಯ ಭಾಗದಲ್ಲಿನ ಮನೆಯೊಂದರಲ್ಲಿ 32 ದೊಡ್ಡ ಹಾಗೂ 16 ಸಣ್ಣ ಅಮ್ಲಜನಕದ ಸಿಲಿಂಡರ್​ಗಳನ್ನುಸಂಗ್ರಹಿಸಿಟ್ಟಿದ್ದ. ತನ್ನ ಉದ್ಯಮಕ್ಕೆ ಇರುವ ಪರವಾನಗಿ ತೋರಿಸಲು ವಿಫಲನಾದ ಹಿನ್ನೆಲೆ 51 ವರ್ಷದ ಅನಿಲಕುಮಾರನನ್ನು ಬಂಧಿಸಲಾಗಿದೆ. ಈತ ಆಮ್ಲಜನಕವನ್ನು ದೊಡ್ಡ ಸಿಲಿಂಡರ್​ಗಳಿಂದ ಸಣ್ಣ ಸಿಲಿಂಡರ್​ಗೆ ವರ್ಗಾಯಿಸಿ ಅದನ್ನ 12,500 ರೂಪಾಯಿಗೆ ಮಾರಾಟ ಮಾಡುತ್ತಿದ್ದ ಎನ್ನಲಾಗಿದೆ. ಕೋರ್ಟ್​ನ ಆದೇಶದಂತೆ ಪೊಲೀಸರು ಅಗತ್ಯ ಇರುವವರಿಗೆ ಈ ಸಿಲಿಂಡರ್​ಗಳನ್ನ ನೀಡಿದ್ದಾರೆ.

ಪ್ರಮುಖ ಸುದ್ದಿ :-   ದಾಂಪತ್ಯ ಜೀವನಕ್ಕೆ ಕಾಲಿಟ್ಟ ದಕ್ಷಿಣ ಭಾರತದ ಜನಪ್ರಿಯ ನಟರಾದ ಅದಿತಿ ರಾವ್ ಹೈದರಿ-ಸಿದ್ಧಾರ್ಥ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement