ಕೋವಿಡ್ ರೋಗಿಗಳಿಗೆ ಚಿಕಿತ್ಸೆ: ಮೊಲ್ನುಪಿರವಿರ್ ಮಾತ್ರೆ 3ನೇ ಹಂತದ ಪ್ರಾಯೋಗಿಕ ಬಳಕೆಗೆ ಅರ್ಜಿ

ಹೈದರಾಬಾದ್‌: ಕೋವಿಡ್‌ ರೋಗಿಗಳಿಗೆ ಚಿಕಿತ್ಸೆ ನೀಡುವ ‘ಮೊಲ್ನುಪಿರವಿರ್‌ ಮಾತ್ರೆಗಳನ್ನು ಮೂರನೇ ಹಂತದ ಕ್ಲಿನಿಕಲ್ ಪ್ರಯೋಗದ ಅನುಮೋದನೆಗಾಗಿ ನ್ಯಾಟ್ಕೊ ಫಾರ್ಮಾ ಲಿಮಿಟೆಡ್ ಕಂಪನಿ ಕೇಂದ್ರೀಯ ಔಷಧ ನಿಯಂತ್ರಣ ಪ್ರಾಧಿಕಾರಕ್ಕೆ(ಸಿಡಿಎಸ್‌ಸಿಒ) ಅರ್ಜಿ ಸಲ್ಲಿಸಿದೆ.
ಅಮೆರಿಕದ ಔಷಧ ಕಂಪನಿ ಮೆರ್ಕ್‌ ಮತ್ತು ರಿಡ್ಜ್‌ಬ್ಯಾಕ್ ಬಯೋಥೆರಪಿಟಿಕ್ಸ್ ಜತೆಯಾಗಿ ಅಭಿವೃದ್ಧಿಪಡಿಸಿರುವ ಮೊಲ್ನುಪಿರವಿರ್‌ (ಎಂಕೆ -4482) ಮಾತ್ರೆಗಳನ್ನು ಎರಡು ಹಂತಗಳಲ್ಲಿ ಪ್ರಾಯೋಗಿಕವಾಗಿ ಕೊರೊನಾ ರೋಗಿಗಳ ಮೇಲೆ ಬಳಸಲಾಗಿದ್ದು, ಈಗ ಮೂರನೇ ಪ್ರಾಯೋಗಿಕ ಪರೀಕ್ಷೆಗೆ ಅನುಮತಿ ಪಡೆಯಲು ಕಂಪನಿಯು ಸಿಡಿಎಸ್‌ಸಿಒಗೆ ಅರ್ಜಿ ಸಲ್ಲಿಸಿದೆ ಎಂದು ಹೈದರಾಬಾದ್ ಮೂಲದ ಔಷಧ ತಯಾರಕರು ಬಿಡುಗಡೆ ಮಾಡಿರುವ ಪತ್ರಿಕಾ ಪ್ರಕಟಣೆ ಬಿಡುಗಡೆ ಮಾಡಿದ್ದಾರೆ.
ಪ್ರಾಯೋಗಿಕ ಹಂತದ ಪರೀಕ್ಷೆಗಳ ದತ್ತಾಂಶದ ಪ್ರಕಾರ ಮೊಲ್ನುಪಿರವಿರ್‌ ಮಾತ್ರೆಗಳು ಪ್ರಬಲವಾದ ಶೀತಜ್ವರ ನಿರೋಧಕ ಚಟುವಟಿಕೆಯನ್ನು(ಆಂಟಿ ಇನ್ಫ್ಲ್ಯೂಯೆಂಜಾ)ಹೊಂದಿದೆ ಹಾಗೂ ಸಾರ್ಸ್‌-ಕೋವ್‌-2 ವೈರಸ್‌ ಮರುಕಳಿಸುವುದನ್ನು ಪ್ರಬಲವಾಗಿ ಪ್ರತಿಬಂಧಿಸುವ ಗುಣವನ್ನೂ ಹೊಂದಿದೆ ಎಂದು ತಿಳಿದುಬಂದಿದೆ.
‘ಮೊಲ್ನುಪಿರವಿರ್‌ ನಿಂದ ಚಿಕಿತ್ಸೆ ಪಡೆದ ರೋಗಿಗಳು ಐದು ದಿನಗಳಲ್ಲೇ ಉತ್ತಮ ಪ್ರತಿಕ್ರಿಯೆ ತೋರಿದ್ದಾರೆ. ಈ ಪ್ರಕಾರ, ಮೊಲ್ನುಪಿರವಿರ್‌ ಮಾತ್ರೆಯೊಂದಿಗೆ ಕಡಿಮೆ ಅವಧಿಯಲ್ಲೂ ಆರೋಗ್ಯ ಉತ್ತಮಗೊಳ್ಳುವ ಸಾಧ್ಯತೆಗಳನ್ನು ಸೂಚಿಸುತ್ತದೆ, ಹೀಗಾಗಿ ‘ಈಗ ಮೂರನೇ ಪ್ರಾಯೋಗಿಕ ಪರೀಕ್ಷೆಗೆ ಅನುಮತಿ ಪಡೆಯಲು ಅರ್ಜಿ ಸಲ್ಲಿಸಲಾಗಿದೆ ಎಂದು ಪತ್ರಿಕಾ ಪ್ರಕಟಣೆ ತಿಳಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ