ಮಾಜಿ ಪ್ರಧಾನಿ ವಾಜಪೇಯಿ ಸೊಸೆ ಕರುಣಾ ಶುಕ್ಲಾ ಕೊರೊನಾದಿಂದ ನಿಧನ

ರಾಯಪುರ: ಮಾಜಿ ಸಂಸದೆ ಕರುಣಾ ಶುಕ್ಲಾ ಕೊರೋನ ಸೋಂಕಿನಿಂದ ರಾಜಪುರದ ರಾಮಕೃಷ್ಣ ಕೇರ್ ಆಸ್ಪತ್ರೆಯಲ್ಲಿ ಮಂಗಳವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಕರುಣಾ ಶುಕ್ಲಾ ಮಾಜಿ ಪ್ರಧಾನಿ ದಿವಂಗತ ಅಟಲ್ ವಾಜಪೇಯಿ ಅವರ ಸೊಸೆ.
ಕೊರೋನ ಸೋಂಕು ತಗುಲಿದ ಬಳಿಕ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಅದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಅವರ ಅಂತ್ಯ ಸಂಸ್ಕಾರ ಇಲ್ಲಿನ ಬಾಲೋದಬಝಾರ್ ನಲ್ಲಿ ನಡೆಯಿತು. ಕರುಣಾ ಶುಕ್ಲಾ ಅವರ ನಿಧನಕ್ಕೆ ಚತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಗೇಲ್ ಸಂತಾಪ ವ್ಯಕ್ತಪಡಿಸಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ