ದೆಹಲಿಯ ಸ್ಮಶಾನಗಳ ಎದುರು ಅಂತ್ಯ ಸಂಸ್ಕಾರಕ್ಕಾಗಿ 20 ತಾಸುಗಳಿಂದ ಸರದಿಯಲ್ಲಿ ಕಾಯುತ್ತಿವೆ ಮೃತದೇಹಗಳು..

ನವ ದೆಹಲಿ: ದೆಹಲಿಯ ಸ್ಮಶಾನವೊಂದರಲ್ಲಿ ಮಂಗಳವಾರ ಒಂದೇ ದಿನ ಸುಮಾರು 50ಕ್ಕೂ ಹೆಚ್ಚು ಕೊರೊನಾ ಸೋಂಕಿತ ಮೃತದೇಹಗಳನ್ನು ಸುಡಲಾಗಿದೆ.
ಸ್ಮಶಾನದ ಹೊರಗೆ ಮತ್ತಷ್ಟು ಶವಗಳು ಸುಮಾರು 20 ಗಂಟೆಗಳಿಗೂ ಅಧಿಕ ಕಾಲ ಅಂತ್ಯ ಸಂಸ್ಕಾರಕ್ಕಾಗಿ ಸರದಿಯಲ್ಲಿ ನೆಲದ ಮೇಲೆ ಮಲಗಿಸಿದ್ದ ಹಾಗೂ ಸಂಬಂಧಿಗಳು ಸಹ ಅಲ್ಲೆ ಕಾಯುತ್ತಿದ್ದ ದೃಶ್ಯ ಎಲ್ಲರ ಮನ ಕರಗುವಂತೆ ಮಾಡಿದೆ. ದೆಹಲಿಯಲ್ಲಿ ಕೊರೋನಾ ಪೀಡಿತರ ಸಾವಿನ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಿದ್ದು, ಒಂದೆಡೆ ನವ ದೆಹಲಿಯ ಸ್ಮಶಾನಗಳು ಸತ್ತವರ ಪ್ರವಾಹವನ್ನು ನಿಭಾಯಿಸಲು ಹೆಣಗಾಡುತ್ತಿದ್ದರೆ ಮತ್ತೊಂದೆಡೆ ಸಹಿಸಲಾಗದ ದುರಂತವೊಂದು ತೆರೆದುಕೊಳ್ಳುತ್ತಿದೆ.

ಸ್ಮಶಾನದ ಸಿಬ್ಬಂದಿ ಈ ಬಗ್ಗೆ ಪಿಟಿಐ ಜೊತೆಗೆ ತಮ್ಮ ಅನುಭವವನ್ನು ಹಂಚಿಕೊಂಡಿದ್ದು, “ನನ್ನ ಜೀವನದಲ್ಲಿ ಹಿಂದೆಂದೂ ಇಂತಹ ಕೆಟ್ಟ ಪರಿಸ್ಥಿತಿಯನ್ನು ನೋಡಿಲ್ಲ. ಜನರು ತಮ್ಮ ಪ್ರೀತಿಪಾತ್ರರ ಮೃತದೇಹಗಳೊಂದಿಗೆ ಸರದಿಯಲ್ಲಿ ಕಾಯುತ್ತಿದ್ದಾರೆ. ಬಹುತೇಕ ಎಲ್ಲಾ ದೆಹಲಿ ಶವಾಗಾರಗಳು ಮೃತ ದೇಹಗಳಿಂದ ತುಂಬಿವೆ’ಎಂದು ತಿಳಿಸಿದ್ದಾರೆ. ಕೋವಿಡ್‌-19 ಸಾಂಕ್ರಾಮಿಕ ರೋಗದ ಎರಡನೇ ಅಲೆಯ ಕಾರಣದಿಂದಾಗಿ ದೆಹಲಿಯಲ್ಲಿ ಈ ತಿಂಗಳು 3,601 ಜನರು ಮೃತಪಟ್ಟಿದ್ದಾರೆ. ಈ ಪೈಕಿ ಕಳೆದ ಏಳು ದಿನಗಳಲ್ಲಿ 2,267 ಜನರು ಮೃತಪಟ್ಟಿದ್ದಾರೆ ಎಂದು ಅಂಕಿಅಂಶಗಳು ಹೇಳುತ್ತಿವೆ.
ತಮ್ಮ ಪ್ರೀತಿ ಪಾತ್ರರನ್ನು ಕೊರೊನಾ ಕಾರಣದಿಂದ ಕಳೆದುಕೊಳ್ಳುತ್ತಿರುವುದು ಒಂದೆಡೆಯಾದರೆ, ಅವರಿಗೆ ಕನಿಷ್ಠ ಗೌರವಯುತವಾದ ಅಂತ್ಯ ಕ್ರಿಯೆಯೂ ತಮ್ಮಿಂದ ಸಾಧ್ಯವಾಗುತ್ತಿಲ್ಲ ಎಂಬ ನೋವು ಜನರನ್ನು ಕಾಡುತ್ತಿದೆ.

ಪ್ರಮುಖ ಸುದ್ದಿ :-   ಐಪಿಎಲ್‌ (IPL)2024: ಹಾರ್ದಿಕ್ ಪಾಂಡ್ಯ- ಲಸಿತ್ ಮಾಲಿಂಗ ನಡುವೆ ಮುನಿಸು..? ಈ ವೀಡಿಯೊಗಳನ್ನು ನೋಡಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement