ವರನಿಗೆ ಕೊರೊನಾ; ಪಿಪಿಇ ಕಿಟ್‌ ಧರಿಸಿ ಸಪ್ತಪದಿ ತುಳಿದ ಜೋಡಿ

ಭೋಪಾಲ್: ವರನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ವರ, ವಧು ಇಬ್ಬರೂ ಪಿಪಿಇ ಕಿಟ್ ಧರಿಸಿ ಸಾಂಪ್ರದಾಯಿಕವಾಗಿ ಮದುವೆಯಾಗಿರುವ ವಿದ್ಯಮಾನ ಮಧ್ಯಪ್ರದೇಶದ ರತ್ಲಾಂ ಎಂಬಲ್ಲಿ ನಡೆದಿದೆ. ಈ ಮದುವೆ ವಿಡಿಯೋ ಈಗ ವೈರಲ್‌ ಆಗಿದೆ.
ಏಪ್ರಿಲ್ 19ರಂದು ವರ ಕೊರೊನಾ ಪರೀಕ್ಷೆಗೆ ಒಳಗಾಗಿದ್ದರು. ಅವರ ಮದುವೆಯನ್ನು ಸೋಮವಾರ (ಎಪ್ರಿಲ್‌ 26) ನಿಶ್ಚಯಿಸಲಾಗಿತ್ತು, ವಧುವಿಗೆ ಸೋಂಕು ಇರುವ ಸಂಗತಿ ತಿಳಿಯುತ್ತಿದ್ದಂತೆ ಮದುವೆ ನಿಲ್ಲಿಸಲು ಸ್ಥಳೀಯ ಆಡಳಿತವೂ ಮುಂದಾಗಿತ್ತು.
ನಾವು ಮದುವೆ ನಿಲ್ಲಿಸಲು ಬಂದಿದ್ದೆವು. ಆದರೆ ಒತ್ತಾಯದ ಮೇರೆಗೆ ಹಾಗೂ ಹಿರಿಯ ಅಧಿಕಾರಿಗಳ ನಿರ್ದೇಶನದಲ್ಲಿ ಮದುವೆ ಕಾರ್ಯ ನಡೆಸಲಾಯಿತು. ಸೋಂಕು ಹರಡದಂತೆ ಇಬ್ಬರಿಗೂ ಪಿಪಿಇ ಕಿಟ್ ಧರಿಸಲು ನಿರ್ದೇಶನ ನೀಡಿ ಶೀಘ್ರವೇ ಮದುವೆ ಮಾಡಲಾಗಿದೆ” ಎಂದು ರತ್ಲಾಂ ತಹಸಿಲ್‌ದಾರ್ ನವೀನ್ ಗರ್ಗ್ ತಿಳಿಸಿದ್ದಾರೆ.
ಪಿಪಿಇ ಕಿಟ್ ಧರಿಸಿಯೇ ಇಬ್ಬರೂ ಸಪ್ತಪದಿ ತುಳಿದಿದ್ದಾರೆ. ಮದುವೆಯಲ್ಲಿ ಕೆಲವು ಸಂಬಂಧಿಗಳು ಹಾಗೂ ಪೊಲೀಸರು ಇದ್ದರು.
ಮಧ್ಯಪ್ರದೇಶದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಭೋಪಾಲ್‌ನಲ್ಲಿ ಮೂರನೇ ಬಾರಿ ಕರ್ಫ್ಯೂ ವಿಸ್ತರಿಸಲಾಗಿದೆ.

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement