ಬೆಂಗಳೂರು: ರಾಜ್ಯದಲ್ಲಿ ಬುಧವಾರ ಒಂದೇ ದಿನ 39,047 ಜನರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿದೆ. ಇದೇ ಸಮಯದಲ್ಲಿ 229 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ಈ ಕುರಿತು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊರೊನಾ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ್ದು, ಕಳೆದ 24 ಗಂಟೆಯಲ್ಲಿ ಬೆಂಗಳೂರು ನಗರದಲ್ಲಿ 22,596 ಜನರು ಸೇರಿದಂತೆ ರಾಜ್ಯಾಧ್ಯಂತ 39047 ಜನರಿಗೆ ಹೊಸದಾಗಿ ಕೊರೋನಾ ಪಾಸಿಟಿವ್ ಎಂಬುದಾಗಿ ದೃಢಪಟ್ಟಿದೆ ಎಂದು ತಿಳಿಸಿದೆ. ರಾಜ್ಯದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,39,822ಕ್ಕೆ ಏರಿಕೆಯಾಗಿದೆ.
ಇದೇ ಸಮಯದಲ್ಲಿ 11,833 ಸೋಂಕಿತರು ಬಿಡುಗಡೆಯಾಗಿದ್ದು, ಒಟ್ಟು 10,95,883 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಬೆಂಗಳೂರು ನಗರದಲ್ಲಿಯೇ 2,24,152 ಸಕ್ರಿಯ ಪ್ರಕರಣಗಳು ಸೇರಿದಂತೆ ರಾಜ್ಯಾದ್ಯಂತ 3,28,884 ಸಕ್ರಿಯ ಪ್ರಕರಣಗಳಿವೆ.
ಜಿಲ್ಲಾವಾರು ಮಾಹಿತಿ:
ಬಾಗಲಕೋಟೆ 333, ಬಳ್ಳಾರಿ 1106, ಬೆಳಗಾವಿ 360, ಬೆಂಗಳೂರು ಗ್ರಾಮಾಂತರ 732, ಬೆಂಗಳೂರು ನಗರ 22,596, ಬೀದರ್ 269, ಚಾಮರಾಜನಗರ 424, ಚಿಕ್ಕಬಳ್ಳಾಪುರ 683, ಚಿಕ್ಕಮಗಳೂರು 297, ಚಿತ್ರದುರ್ಗ 110, ದಕ್ಷಿಣಕನ್ನಡ 664, ದಾವಣಗೆರೆ 196, ಧಾರವಾಡ 654, ಗದಗ 129, ಹಾಸನ 1001, ಹಾವೇರಿ 36, ಕಲಬುರ್ಗಿ 901, ಕೊಡಗು 388, ಕೋಲಾರ 1194, ಕೊಪ್ಪಳ 444, ಮಂಡ್ಯ 935, ಮೈಸೂರು 1759, ರಾಯಚೂರು 511, ರಾಮನಗರ 164, ಶಿವಮೊಗ್ಗ 333, ತುಮಕೂರು 1174, ಉಡುಪಿ 664, ಉತ್ತರಕನ್ನಡ 301, ವಿಜಯಪುರ 394, ಯಾದಗಿರಿ ಜಿಲ್ಲೆಯಲ್ಲಿಂದು 295 ಜನರಿಗೆ ಸೋಂಕು ತಗುಲಿರುವುದು ದೃಢಪಟ್ಟಿದೆ.
ಬೆಂಗಳೂರಿನಲ್ಲಿ ಯೇ ಬುಧವಾರ 137 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ. ಬಾಗಲಕೋಟೆ 2, ಬಳ್ಳಾರಿ 8, ಬೆಂಗಳೂರು ಗ್ರಾಮಾಂತರ 2, ಬೀದರ್ 6, ಚಾಮರಾಜನಗರ 3, ಚಿಕ್ಕಬಳ್ಳಾಪುರ 1, ಚಿಕ್ಕಮಗಳೂರು 5, ಚಿತ್ರದುರ್ಗ 1, ದಕ್ಷಿಣ ಕನ್ನಡ 4, ದಾವಣಗೆರೆ 3, ಧಾರವಾಡ 4, ಹಾಸನ 1, ಹಾವೇರಿ 2, ಕಲಬುರ್ಗಿ 3, ಕೋಲಾರ 4, ಮಂಡ್ಯ 9, ಮೈಸೂರು 11, ರಾಯಚೂರು 1, ರಾಮನಗರ 5, ಶಿವಮೊಗ್ಗ 5, ತುಮಕೂರು 5, ವಿಜಯಪುರ 2, ಯಾದಗಿರಿ 5 ಮಂದಿ ಸೋಂಕಿತರು ಮೃತಪಟ್ಟಿದ್ದಾರೆ.
ನಿಮ್ಮ ಕಾಮೆಂಟ್ ಬರೆಯಿರಿ