ಕೇಂದ್ರ ಸರ್ಕಾರ ಜನರು ಸಾವು ಬಯಸುತ್ತಿರುವಂತಿದೆ: ದೆಹಲಿ ಹೈಕೋರ್ಟ್ ತರಾಟೆ

ನವ ದೆಹಲಿ: ಕೇಂದ್ರ ಸರ್ಕಾರ ರೆಮ್ಡಿಸಿವಿರ್ ಬಳಕೆಯಲ್ಲಿ ಪಾಲಿಸಬೇಕಾದ ಹೊಸ ಪ್ರೊಟೋಕಾಲ್ ಬಿಡುಗಡೆ ಮಾಡಿದ್ದರ ಬಗ್ಗೆ ದೆಹಲಿ ಹೈಕೋರ್ಟ್ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ.
ಕೇಂದ್ರ ಸರ್ಕಾರವನ್ನು ತೀವ್ರವಾಗಿ ತರಾಟೆ ತೆಗೆದುಕೊಂಡಿರುವ ದೆಹಲಿ ಹೈಕೋರ್ಟ್‌ ಕೇಂದ್ರ ಸರ್ಕಾರವು ಜನರ ಸಾವನ್ನು ಬಯಸುತ್ತಿರುವಂತಿದೆ” ಹೇಳಿದೆ. ರೆಮ್ಡಿಸಿವಿರ್ ಅನ್ನು ಆಮ್ಲಜನಕದ ಸಪೋರ್ಟ್ ನಲ್ಲಿರುವ ರೋಗಿಗಳಿಗೆ ಮಾತ್ರವೇ ನೀಡಬೇಕೆಂಬ ನಿಯಮವನ್ನು ಕೇಂದ್ರ ಜಾರಿಗೊಳಿಸಿದೆ.
ಕೋವಿಡ್-19 ನಿಂದ ಬಳಲುತ್ತಿರುವ ವಕೀಲರೊಬ್ಬರು ತಮಗೆ 6 ಡೋಸ್ ಗಳ ರೆಮ್ಡಿಸಿವಿರ್ ಬದಲಾಗಿ 3 ಡೋಸ್ ಅಷ್ಟೇ ಸಿಕ್ಕಿದ್ದು ಎಂದು ಕೇಂದ್ರದ ಹೊಸ ನಿಯಮದ ವಿರುದ್ಧ ದೆಹಲಿ ಹೈಕೋರ್ಟ್ ಮೊರೆ ಹೋಗಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ ನ್ಯಾಯಾಲಯ, ಈ ನಿಯಮ ಸರಿಯಲ್ಲ, ಬುದ್ಧಿ ಉಪಯೋಗಿಸದೇ ತೆಗೆದುಕೊಂಡ ನಿರ್ಧಾರವಾಗಿದೆ. ಆಮ್ಲಜನಕ ಇಲ್ಲದವರಿಗೆ ರೆಮ್ಡಿಸಿವಿರ್ ಕೂಡ ಸಿಗುವುದಿಲ್ಲ. ಕೇಂದ್ರ ಸರ್ಕಾರ ಜನರ ಸಾವನ್ನು ಬಯಸುತ್ತಿರುವಂತಿದೆ ಎಂದು ನ್ಯಾ. ಪ್ರತಿಭಾ ಎಂ ಸಿಂಗ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ರೆಮ್ಡಿಸಿವಿರ್ ದಾಸ್ತಾನು ಕೊರತೆ ಕಡಿಮೆ ಮಾಡುವುದಕ್ಕೆ ನಿಯಮಗಳನ್ನು ಬದಲಾವಣೆ ಮಾಡಿರುವಂತೆ ಕಾಣುತ್ತಿದೆ ಎಂದು ಕೋರ್ಟ್ ಹೇಳಿದ್ದು, ಇದು ಸಂಪೂರ್ಣ ಕೆಟ್ಟ ನಿರ್ವಹಣೆ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ