ರಾಜ್ಯ ಸರ್ಕಾರಗಳಿಗೆ ಕೋವಿಶೀಲ್ಡ್ ಲಸಿಕೆ ದರ ಇಳಿಸಿದ ಎಸ್‌ಐಐ

ನವ ದೆಹಲಿ:ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾವು ಕೋವಿಶೀಲ್ಡ್ ಲಸಿಕೆ ದರವನ್ನು ರಾಜ್ಯ ಸರ್ಕಾರಗಳಿಗೆ 100 ರೂಪಾಯಿ ಇಳಿಕೆ ಮಾಡಿ 300 ರೂಪಾಯಿ ದರ ನಿಗದಿ ಮಾಡಿದೆ.
ಈ ಮೊದಲು 400 ರೂಪಾಯಿ ದರ ನಿಗದಿಪಡಿಸಲಾಗಿತ್ತು. ರಾಜ್ಯ ಸರ್ಕಾರಗಳಿಗೆ 300 ರೂಪಾಯಿ ದರದಲ್ಲಿ ಲಸಿಕೆ ಮಾರಾಟ ಮಾಡಲಾಗುತ್ತದೆ ಎಂದು ಎಸ್‌ಐಐ ತಿಳಿಸಿದೆ.
ಲಸಿಕೆ ದರ ಹೆಚ್ಚಳದ ಕುರಿತಾಗಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು, ಕೇಂದ್ರ ಸರ್ಕಾರ ಕೂಡ ಲಸಿಕೆ ದರ ಇಳಿಕೆಗೆ ತಯಾರಿಕಾ ಕಂಪನಿಗಳಿಗೆಈ ಬಗ್ಗೆ ಸೂಚಿಸಿದ್ದ ಹಿನ್ನೆಲೆಯಲ್ಲಿ ದರವನ್ನು 100 ರೂಪಾಯಿ ಇಳಿಕೆ ಮಾಡಲಾಗಿದೆ.
ಸೀರಮ್ ಇನ್ ಸ್ಟಿಟ್ಯೂಟ್ ಆಫ್ ಇಂಡಿಯಾ ಲಸಿಕೆಯನ್ನು 400 ರೂ. ದರದಲ್ಲಿ ಸರ್ಕಾರಕ್ಕೆ, 600 ರೂ. ದರದಲ್ಲಿ ಖಾಸಗಿ ಆಸ್ಪತ್ರೆಗಳಿಗೆ ಲಸಿಕೆ ನೀಡುವುದಾಗಿ ಹೇಳಿತ್ತು.

5 / 5. 1

ನಿಮ್ಮ ಕಾಮೆಂಟ್ ಬರೆಯಿರಿ

advertisement