ಕೊರೊನಾ ಜಯಿಸಿ ಬಂದ 105 ವರ್ಷದ ಪತಿ-95 ವರ್ಷದ ಪತ್ನಿ..!!

ಇಲ್ಲೊಬ್ಬರು ಶತಾಯುಷಿ ಕೊರೊನಾ ಯುದ್ಧದಲ್ಲಿ ಗೆದ್ದು ಬಂದಿದ್ದಾರೆ. ನೂರರ ಸಮೀಪದಲ್ಲಿರುವ ಅವರ ಪತ್ನಿಯೂ ಕೊರೊನಾದೊಂದಿಗಿನ ಹೋರಾಟದಲ್ಲಿ ಜಯಶಾಲಿಯಾಗಿದ್ದಾರೆ.
105 ವರ್ಷದ ಧೇನು ಚವಾಣ್‌ ಮತ್ತು 95 ವರ್ಷದ ಅವರ ಪತ್ನಿ ಮೋಟಾಬಾಯಿ ದಂಪತಿಯೇ ಕೊರೋನಾ ವಿರುದ್ಧ ಹೋರಾಡಿ ಗೆದ್ದುಬಂದ ವಯೋವೃದ್ಧರು.
ಈ ವೃದ್ಧ ದಂಪತಿ ಮಹಾರಾಷ್ಟ್ರ ರಾಜ್ಯದ ಲಾತೂರು ಸಮೀಪದ ಕಟಕ ತಾಂಡಾದವರು.ಇವರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಆಗ ಗ್ರಾಮಸ್ಥರೆಲ್ಲ ಇಷ್ಟೊಂದು ವಯಸ್ಸಾದವರನ್ನು ಆಸ್ಪತ್ರೆಗೆ ಒಯ್ದರೆ ಮರಳಿ ಬರುವುದು ಅನುಮಾನ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಆದರೂ ಅವರ ಮಗ ಸುರೇಶ ಚವ್ಹಾಣ ಅವರು ಈ ವೃದ್ಧ ದಂಪತಿಯನ್ನು ಅಸ್ಪತ್ರೆಗೆ ಸೇರಿಸಲು ಹುಡುಕಾಡಿದ್ದಾರೆ. ಕೊನೆಗೆ ಲಾತೂರ್ ನ ದೇಶ್ ಮುಖ್ ಇನ್ಸ್ ಟ್ಯೂಟ್ ಆಫ್ ಮೆಡಿಕಲ್ ಸೈನ್ಸ್ ನಲ್ಲಿ ಈ ವೃದ್ಧ ದಂಪತಿಯನ್ನು ದಾಖಲಿಸಿದ್ದಾರೆ. ಬರೋಬ್ಬರಿ ಒಂಭತ್ತು ದಿನಗಳ ಕಾಲ ಐಸಿಯುವಿನಲ್ಲಿದ್ದ 105 ವರ್ಷದ ಧೇನು ಚವಾಣ್‌ ಮತ್ತು 95 ವರ್ಷದ ಅವರ ಪತ್ನಿ ಮೋಟಾಬಾಯಿ ಕೊರೋನಾ ವಿರುದ್ಧ ಹೋರಾಡಿ ಜಯಿಸಿ ಬಂದಿದ್ದಾರೆ.
ನಮ್ಮದು ಅವಿಭಕ್ತ ಕುಟುಂಬ, ತಂದೆ – ತಾಯಿ ಅಲ್ಲದೆ ಮನೆಯಲ್ಲಿದ್ದ ಮೂವರ ಮಕ್ಕಳಿಗೂ ಸೋಂಕು ಕಾಣಿಸಿಕೊಂಡಿತ್ತು. ಅವರು ಭಯಭೀತರಾಗಿದ್ದರು. ಈ ಸಂದರ್ಭದಲ್ಲಿ ಅವರನ್ನು ಮನೆಯಲ್ಲಿ ಇಟ್ಟುಕೊಳ್ಳುವುದು ಸೂಕ್ತವಲ್ಲವೆಂದು ನಿರ್ಧರಿಸಿ ಆಸ್ಪತ್ರೆಗೆ ದಾಖಲಿಸಿದೆ ಎಂದು ಸುರೇಶ್ ಚವಾಣ್ ಮಾಧ್ಯಮಗಳಿಗೆ ಹೇಳಿದ್ದಾರೆ.
ಇಬ್ಬರೂ ವೃದ್ಧರಾದ ಕಾರಣ ಚಿಕಿತ್ಸೆಗೆ ಹೇಗೆ ಸ್ಪಂದಿಸುತ್ತಾರೆಂಬ ಕಳವಳವಿತ್ತು, ಆಕ್ಸಿಜನ್ ಬೆಂಬಲದಲ್ಲಿಯೇ ಇದ್ದರು ಮತ್ತು 5 ಆಂಟಿವೈರಸ್ ರೆಮಿಡಿಸಿವರ್ ಚುಚ್ಚುಮದ್ದು ನೀಡಲಾಯಿತು ಎಂದು ದಂಪತಿಗೆ ಚಿಕಿತ್ಸೆ ನೀಡಿದ ವೈದ್ಯ ಗಜಾನನ ಹೇಳಿದ್ದಾರೆ. ಏಪ್ರಿಲ್ 5 ರಂದು ಧೇನು ಹಾಗೂ ಎರಡು ದಿನದ ಬಳಿಕ ಅವರ ಪತ್ನಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
9 ದಿನ ಐಸಿಯುನಲ್ಲಿದ್ದ ಬಳಿಕ ಈಗ ಸೋಂಕು ಮುಕ್ತರಾಗಿ ಕಾಣಿಸಿಕೊಂಡಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ