ಕೋವಿಡ್‌ ರೋಗಿಗಳಿಗೆ ನೀಡುವ ಮಿಷನ್ ಆಕ್ಸಿಜನ್’ಗೆ ತೆಂಡೂಲ್ಕರ್ 1 ಕೋಟಿ ರೂ. ದೇಣಿಗೆ

ಕೋವಿಡ್-19 ರೋಗಿಗಳಿಗೆ ಆಮ್ಲಜನಕ ಸಾಂದ್ರೀಕರಿಸುವ ವಸ್ತುಗಳನ್ನ ಖರೀದಿಸಲು ಖ್ಯಾತ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಗುರುವಾರ ಒಂದು ಕೋಟಿ ದೇಣಿಗೆ ನೀಡಿದ್ದಾರೆ.
‘ಈ ಅಗತ್ಯದ ಸಮಯದಲ್ಲಿ ರಾಷ್ಟ್ರದಾದ್ಯಂತದ ಆಸ್ಪತ್ರೆಗಳಿಗೆ ಜೀವ ಉಳಿಸುವ ಆಮ್ಲಜನಕ ಸಾಂದ್ರೀಕರಣ ಸಂಗ್ರಹಿಸುವ ಮತ್ತು ಒದಗಿಸುವ ಪ್ರಯತ್ನದಲ್ಲಿ ‘ಮಿಷನ್ ಆಕ್ಸಿಜನ್’ಗೆ ಅವರು 1 ಕೋಟಿ ರೂ. ದೇಣಿಗೆ ನೀಡಿದ್ದಾರೆ ಎಂದು ಮಿಷನ್ ಆಕ್ಸಿಜನ್ ಹೇಳಿಕೆ ತಿಳಿಸಿದೆ.
ಈ ಕುರಿತು ಟ್ವಿಟರ್‌ʼನಲ್ಲಿ ಈ ವಿಷಯ ಹಂಚಿಕೊಂಡ ಸಚಿನ್‌, ‘ಕೋವಿಡ್ʼನ ಎರಡನೇ ಅಲೆಯು ನಮ್ಮ ಆರೋಗ್ಯ ರಕ್ಷಣಾ ವ್ಯವಸ್ಥೆಯನ್ನ ತೀವ್ರ ಒತ್ತಡಕ್ಕೆ ಸಿಲುಕಿಸಿದೆ. ಹೆಚ್ಚಿನ ಸಂಖ್ಯೆಯ ಗಂಭೀರ ಕೋವಿಡ್ ರೋಗಿಗಳಿಗೆ ಆಮ್ಲಜನಕವನ್ನು ಒದಗಿಸುವುದು ಈ ಕಾಲದ ಅಗತ್ಯವಾಗಿದೆ’ ಎಂದು ಹೇಳಿದ್ದಾರೆ.
ಜನರು ಈ ಸಂಕಷ್ಟದ ಸಂದರ್ಭಕ್ಕೆ ಸ್ಪಂದಿಸುವ ರೀತಿ ನೋಡಿ ಖುಷಿಯಾಗುತ್ತಿದೆ. 250 ಯುವ ಉದ್ಯಮಿಗಳ ಗುಂಪು ಮಿಷನ್ ಆಕ್ಸಿಜನ್ ಅನ್ನು ಪ್ರಾರಂಭಿಸಿ ಆಮ್ಲಜನಕ ಸಾಂದ್ರೀಕೃತ ವಸ್ತುಗಳನ್ನು ಆಮದು ಮಾಡಿಕೊಳ್ಳಲು ಮತ್ತು ದೇಶಾದ್ಯಂತದ ಆಸ್ಪತ್ರೆಗಳಿಗೆ ದಾನ ಮಾಡಲು ಹಣವನ್ನು ಸಂಗ್ರಹಿಸುತ್ತದೆ.
ನಾನು ಈ ಉದ್ದೇಶಕ್ಕೆ ಹಣ ನೀಡಿದ್ದೇನೆ ಮತ್ತು ಅವರ ಪ್ರಯತ್ನವು ಶೀಘ್ರದಲ್ಲೇ ಭಾರತದಾದ್ಯಂತ ಇನ್ನೂ ಅನೇಕ ಆಸ್ಪತ್ರೆಗಳನ್ನ ತಲುಪುತ್ತದೆ ಎಂದು ಆಶಿಸುತ್ತೇನೆ. ಇಂದು, ಈ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡಲು ಶ್ರಮಿಸುತ್ತಿರುವ ಪ್ರತಿಯೊಬ್ಬರ ಹಿಂದೆ ನಾವು ಒಟ್ಟಾಗಿ ನಿಲ್ಲಬೇಕಾಗಿದೆ.’ ಎಂದು ತೆಂಡೂಲ್ಕರ್‌ ಹೇಳಿದ್ದಾರೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ