ಚುನಾವಣೋತ್ತರ ಸಮೀಕ್ಷೆ; ಬೆಳಗಾವಿಯಲ್ಲಿ ಯಾರಿಗೆ ಜಯ..?

posted in: ರಾಜ್ಯ | 0

ಬೆಳಗಾವಿ: ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆ ಚುನಾವಣೋತ್ತರ ಫಲಿತಾಂಶ ಪ್ರಕಟವಾಗಿದೆ. ಏಪ್ರಿಲ್ 17ರಂದು ಮತದಾನ ನಡೆದಿದ್ದು, ಮೇ 2ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ.
ಕೇಂದ್ರ ಸಚಿವರಾಗಿದ್ದ ಸುರೇಶ್ ಅಂಗಡಿ ಅವರು ಕೋವಿಡ್‌ಗೆ ಬಲಿಯಾದ ಕಾರಣ ಉಪ ಚುನಾವಣೆ ನಡೆದಿದೆ.
ಗುರುವಾರ ಟಿವಿ 9 ವಾಹಿನಿ ನಡೆಸಿದ ಚುನಾವಣೋತ್ತರ ಸಮೀಕ್ಷೆಗಳ ವರದಿ ಹೊರಬಂದಿದ್ದು, ಬಿಜೆಪಿ ದಿ. ಸುರೇಶ್ ಅಂಗಡಿ ಪತ್ನಿ ಮಂಗಲ ಅಂಗಡಿ ಅ ಕಾಂಗ್ರೆಸ್‌ನಿಂದ ಸತೀಶ್ ಜಾರಕಿಹೊಳಿ ಅವರು ಅಭ್ಯರ್ಥಿಯಾಗಿದ್ದರು. ಜೆಡಿಎಸ್ ಅಭ್ಯರ್ಥಿ ನಿಲ್ಲಿಸಿಲ್ಲ. .
ಟಿವಿ 9 10 ಪ್ರಶ್ನೆಗಳನ್ನು ಮುಂದಿಟ್ಟುಕೊಂಡು ಚುನಾವಣೋತ್ತರ ಸಮೀಕ್ಷೆ ನಡೆಸಿದೆ. ನೀವು ಯಾರಿಗೆ ಮತ ಹಾಕುತ್ತೀರಿ? ಎಂಬ ಪ್ರಶ್ನೆಗೆ ಬಿಜೆಪಿಗೆ ಶೇ 46, ಕಾಂಗ್ರೆಸ್‌ಗೆ ಶೇ 40, ಎಂಇಎಸ್ ಶೇ 7 ಮತ್ತು ಇತರೆ ಶೇ 7ರಷ್ಟು ಜನರು ಉತ್ತರ ನೀಡಿದ್ದಾರೆ.
ನಿಮಗೆ ಮೋದಿ ಸರ್ಕಾರದ ಕಾರ್ಯ ವೈಖರಿ ತೃಪ್ತಿ ತಂದಿದೆಯೇ? ಎಂದು ಪ್ರಶ್ನಿಸಲಾಗಿತ್ತು. ಹೌದು ಎಂದು ಶೇ 48, ಇಲ್ಲ ಎಂದು ಶೇ 37, ಹೇಳುವುದಕ್ಕೆ ಆಗಲ್ಲ ಎಂದು ಶೇ 15ರಷ್ಟು ಜನರು ಉತ್ತರ ನೀಡಿದ್ದಾರೆ, ಈ ಉಪ ಚುನಾವಣೆಯಲ್ಲಿ ಸಿಡಿ ಪ್ರಕರಣ ಯಾವ ಪಕ್ಷಕ್ಕೆ ಹೆಚ್ಚು ಹೊಡೆತ ಕೊಟ್ಟಿದೆ? ಎಂದು ಪ್ರಶ್ನಿಸಲಾಗಿತ್ತು. ಬಿಜೆಪಿಗೆ ಎಂದು ಶೇ 63ರಷ್ಟು ಜನರು, ಕಾಂಗ್ರೆಸ್‌ಗೆಂದು ಶೇ 18ರಷ್ಟು ಹಾಗೂ ಇತರೆ ಎಂದು ಶೇ 19ರಷ್ಟು ಜನರು ಉತ್ತರ ನೀಡಿದ್ದಾರೆ ಎಂದು ಟಿವಿ 9 ಹೇಳಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ