ಸೇವಾ ಭಾರತಿ-ನೆರವು ಸಹಯೋಗದಲ್ಲಿ ಕಿಮ್ಸ್‌ನಲ್ಲಿ ಕೊರೊನಾ ಮಾಹಿತಿ ಕೇಂದ್ರ ಉದ್ಘಾಟನೆ

ಹುಬ್ಬಳ್ಳಿ: ಪರಸ್ಪರ ಸಹಕಾರದಿಂದ ಮಾತ್ರ ಕೊರೊನಾ ಎರಡನೇ ಅಲೆ ಎದುರಿಸಲು ಸಾಧ್ಯ ಎಂದು ಆರ್ ಎಸ್ ಎಸ್ ಹಿರಿಯ ಪ್ರಚಾರಕ ರಾಷ್ಟ್ರೀಯ ವ್ಯವಸ್ಥಾ ಪ್ರಮುಖ ಮಂಗೇಶ ಬೇಂಡೆ ಹೇಳಿದರು.
ಸೇವಾ ಭಾರತಿ ಟ್ರಸ್ಟ್ ಹಾಗೂ ನೆರವು ಸಹಯೋಗದಲ್ಲಿ ಇಲ್ಲಿನ ಕಿಮ್ಸ್ ಎದುರು ಸ್ಥಾಪಿಸಲಾದ ಕೊರೊನಾ ಮಾಹಿತಿ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.
ಕೊರೊನಾ ವಿಚಾರದಲ್ಲಿ ಭಾರತವನ್ನು ಇತರೆ ರಾಷ್ಟ್ರಗಳ ಜತೆಗೆ ಹೋಲಿಕೆ ಮಾಡುವುದು ಸರಿಯಲ್ಲ. ಅಮೆರಿಕ, ಇಂಗ್ಲೆಂಡ್ ಗೆ ಹೋಲಿಸಿದರೆ ಭಾರತ ಕೊರೊನಾ ಸೋಂಕನ್ನು ಸಮರ್ಥವಾಗಿ ಎದುರಿಸುತ್ತಿದೆ.  ನಮ್ಮ ದೇಶದಲ್ಲಿ ಪರಸ್ಪರ ಸಹಕಾರದಿಂದ ಕೊರೊನಾ ಎದುರಿಸಲಾಗುತ್ತಿದೆ ಎಂದು ಹೇಳಿದರು.
ಸಂಘದಿಂದ ೫ ಲಕ್ಷಕ್ಕೂ ಹೆಚ್ಚಿನ ಕಾರ್ಯಕರ್ತರು ಹಗಲಿರುಳು ಸ್ವಯಂಪ್ರೇರಿತ ಕೋವಿಡ್ ವಾರಿಯರ್ ಆಗಿ ಶ್ರಮಿಸುತ್ತಿದ್ದಾರೆ. ಆತ್ಮ ಸ್ಥೈರ್ಯ ಹೆಚ್ಚಿಸುವ ಕಾರ್ಯವನ್ನು ಸಂಘದ ಕಡೆಯಿಂದ ಮಾಡುತ್ತಿದ್ದು, ಸಂಘ ಈ ಕಾರ್ಯವನ್ನು ಸಹಾಯ ಎಂಬ ಭಾವನೆಯಿಂದ ಅಲ್ಲ, ಸಹಕಾರ ಸೌಹಾರ್ದದಿಂದ ಎಂಬಂತೆ ಕಾರ್ಯ ಮಾಡುತ್ತಿದೆ ಎಂದರು.
ಮಾಧ್ಯಮಗಳು ಸಮಾಜದಲ್ಲಿ ಜನರಿಗೆ ಆತ್ಮವಿಶ್ವಾಸ ಹೆಚ್ಚಿಸುವ ಮತ್ತು ಜನರ ಮನಸ್ಥಿತಿಗೆ ಧೈರ್ಯ ತುಂಬುವ ಕಾರ್ಯ ಮಾಡಬೇಕು ಎಂದು ಮನವಿ ಮಾಡಿದರು.
ಕಿಮ್ಸ್ ನಿರ್ದೇಶಕ ಡಾ. ರಾಮಲಿಂಗಪ್ಪ ಅಂಟರಠಾಣೆ ಆರೋಗ್ಯ ಇಲಾಖೆಗಳೊಂದಿಗೆ ಸಹಕಾರ ನೀಡುವ ಸಂಘ ಸಂಸ್ಥೆಗಳ ಕಾರ್ಯ ಶ್ಲಾಘಿಸಿದರು.
ಮೇ ತಿಂಗಳಲ್ಲಿ ಕೊರೋನಾ ವಿಕೋಪಕ್ಕೆ ಹೋಗುವ ಸಾಧ್ಯತೆ ಇದೆ. ಈ ನಿಟ್ಟಿನಲ್ಲಿ ಸಂಘ ಸಂಸ್ಥೆಗಳು ಜನತೆಯ ನೆರವಿಗೆ ಧಾವಿಸಿರುವುದು ಸ್ವಾಗತಾರ್ಹ ಎಂದರು.
ಡಾ. ಎಸ್. ವೈ.  ಮುಲ್ಕಿಪಾಟೀಲ್ ಮಾತನಾಡಿದರು.  ಪ್ರಾಸ್ತಾವಿಕವಾಗಿ ವಿಭಾಗ ಕಾರ್ಯವಾಹ ಕಿರಣ ಗುಡ್ಡದಕೇರಿ ಮಾತನಾಡಿ, ಪ್ರಕೃತಿ ವಿಕೋಪದ ಸಂದರ್ಭದಲ್ಲಿ ಸಂಘ ಯಾವ ರೀತಿಯಲ್ಲಿ ಸ್ಪಂದನೆ ಮಾಡುತ್ತದೆಯೋ ಅದೇ ರೀತಿ ಈಗಲೂ ಮಾಡಲು ಮುಂದಾಗಿದೆ. ಜಾಗೃತಿ ಮೂಡಿಸುವ ಕಾರ್ಯ, ರಕ್ತದಾನ ಶಿಬಿರಗಳನ್ನು ಏರ್ಪಡಿಸಿರುವುದು, ಸಹಾಯವಾಣಿ ಮೂಲಕ ಕೋವಿಡ್ ಮಾಹಿತಿಯನ್ನು ನೀಡುವ ಕಾರ್ಯ, ಟೆಲಿ ಮೆಡಿಸಿನ್, ಔಷಧ ಒದಗಿಸುವುದು, ಮೃತಪಟ್ಟರೆ ಅಂತ್ಯಸಂಸ್ಕಾರಕ್ಕೆ ನೆರವಾಗುವುದು, ಅಲ್ಲದೆ, ಕೋವಿಡ್ ಕೇರ್ ಸೆಂಟರ್ ಸ್ಥಾಪನೆಯ ಉದ್ದೇಶವಿದ್ದು, ಕಾರ್ಯ ಪ್ರವೃತ್ತರಾಗಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ಹುಬ್ಬಳ್ಳಿಯ ಸೇವಾಭಾರತಿ ಕಾರ್ಯದರ್ಶಿ ಗೋವರ್ಧನ ರಾವ್‌, ಡಾ. ರಾಜಶೇಖರ ದ್ಯಾಬೇರಿ, ಜಯತೀರ್ಥ ಕಟ್ಟಿ,  ಬಸವರಾಜ ಕುಂದಗೋಳಮಠ, ಸಂದೀಪ ಬೂದಿಹಾಳ, ಕಿಮ್ಸ್ ಅಧಿಕ್ಷಕರು ಡಾ. ಅರುಣಕುಮಾರ, ಕೀಮ್ಸ್ ಭದ್ತಾ ಪಡೆ ಮುಖ್ಯಸ್ಥರು ಎ. ಆರ್ ಬಡಿಗೇರ, ಡಾ. ಕಡಕೋಳ, ಡಾ. ಜಾಲಿಹಾಳ, ಉಮೇಶ ದುಶಿ, ತಿಪ್ಪಣ್ಣ ಮಜ್ಜಗಿ, ಪ್ರಭು ನವಲಗುಂದಮಠ, ಸಂತೋಷ ಚವ್ಹಾಣ್, ಸುಭಾಸಸಿಂಗ್ ಜಮಾದಾರ್, ವಿನಯ ಸಜ್ಜನವರ, ಶಂಕರ ಗುಮಾಸ್ತೆಮಹಾನಗರ ಪ್ರಚಾರಕ ವಿಶ್ವನಾಥ್, ಶಿವಯ್ಯ ಹಿರೇಮಠ, ಬಸವರಾಜ ದೇವರಮನಿ, ಸುಭಾಷ ಮಾಸಗೋನಿ ಮ, ಬೀರೇಶ ಎನ್ ಟಿ ಹಾಗೂ ಸೇವಾಭಾರತಿ ಮತ್ತು ನೇರವು ಸ್ವಯಂಸೇವರು ಇದ್ದರು.

ಪ್ರಮುಖ ಸುದ್ದಿ :-   ಸುಳ್ಳು ಚುನಾವಣಾ ಅಫಿಡವಿಟ್‌ ಪ್ರಕರಣ : ಬಿಜೆಪಿ ಶಾಸಕ ಗರುಡಾಚಾರಗೆ ವಿಧಿಸಿದ್ದ ಜೈಲು ಶಿಕ್ಷೆ ರದ್ದುಮಾಡಿದ ಹೈಕೋರ್ಟ್

ಸಾರ್ವಜನಿಕರು ನೆರವಿಗಾಗಿ 7411734247 ಹಾಗೂ 7411744246  ಈ ನಂಬರ್ ಗಳಿಗೆ ಕರೆ ಮಾಡಿ ತಮ್ಮ ಕೋವಿಡ್ ಸಂಬಂದಿತ ಏನೇ ಸಮಸ್ಯೆಗಳಿದ್ದರೂ ಸಲಹೆ ಪಡೆಯಬಹುದಾಗಿದೆ.

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement