2022ಕ್ಕೆ ಕೊರೊನಾಕ್ಕೆ ಬಾಯಿ ಮೂಲಕ ತೆಗೆದುಕೊಳ್ಳುವ ಔಷಧ ಲಭ್ಯ: ಫೈಝರ್ ಕಂಪನಿ ಪ್ರಕಟ

ನ್ಯೂಯಾರ್ಕ್: ಕೋವಿಡ್‌ ಸಾಂಕ್ರಾಮಿಕದ ಚಿಕಿತ್ಸೆಗಾಗಿ ಬಾಯಿ ಮೂಲಕ ತೆಗೆದುಕೊಳ್ಳುವ ಔಷಧವು ಮುಂದಿನ ವರ್ಷ ಸಿದ್ಧವಾಗಬಹುದು ಎಂದು ಅಮೆರಿಕದ ಔಷಧ ತಯಾರಿಕಾ ಕಂಪೆನಿ ಫೈಝರ್‌ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಆಲ್ಬರ್ಟ್ ಬೋರ್ಲಾ ಹೇಳಿದ್ದಾರೆ.
ಸಿಎನ್‌ಬಿಸಿ ಸುದ್ದಿವಾಹಿನಿಗೆ ನೀಡಿದ ಸಂದರ್ಶನದಲ್ಲಿ ಆಲ್ಬರ್ಟ್ ಬೋರ್ಲಾ, ಬಾಯಿಯ ಮೂಲಕ ತೆಗೆದುಕೊಳ್ಳುವ ಮತ್ತು ಇಂಜೆಕ್ಷನ್ ಮೂಲಕ ಚುಚ್ಚುವ ಎರಡು ವೈರಸ್ ನಿರೋಧಕ ಔಷಧಗಳನ್ನು ಕಂಪೆನಿಯು ಅಭಿವೃದ್ಧಿಪಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.
ನಿಜವಾಗಿ ನಾವೀಗ ಎರಡು ಔಷಧಗಳನ್ನು ಅಭಿವೃದ್ಧಿಪಡಿಸುತ್ತಿದ್ದೇವೆ. ಒಂದು ಬಾಯಿ ಮೂಲಕ ತೆಗೆದುಕೊಳ್ಳುವಂಥದ್ದು, ಇನ್ನೊಂದು ಇಂಜೆಕ್ಷನ್ ಮೂಲಕ ನೀಡುವಂತಹದ್ದು. ಪ್ರಸಕ್ತ ಈಗ ನಮ್ಮ ಗಮನ ಮುಖ್ಯವಾಗಿ ಬಾಯಿ ಮೂಲಕ ತೆಗೆದುಕೊಳ್ಳುವ ಔಷಧದ ಮೇಲಿದೆ. ಯಾಕೆಂದರೆ ಇದರಿಂದ ಅನೇಕ ಉಪಯೋಗಗಳಿವೆ. ಅವುಗಳ ಪೈಕಿ ಅದನ್ನು ತೆಗೆದುಕೊಳ್ಳಲು ಆಸ್ಪತ್ರೆಗಳಿಗೆ ಹೋಗಬೇಕಾಗಿಲ್ಲ ಎಂಬುದು ಮುಖ್ಯವಾದದ್ದು.. ಆದರೆ, ಇಂಜೆಕ್ಷನ್‌ಗಳನ್ನು ತೆಗೆದುಕೊಳ್ಳಲು ಜನರು ಆಸ್ಪತ್ರೆಗಳಿಗೆ ಹೋಗಬೇಕಾಗುತ್ತದೆ ಎಂದು ಹೇಳಿದ್ದಾರೆ.

ಪ್ರಮುಖ ಸುದ್ದಿ :-   ವೀಡಿಯೊ..| ಅಬ್ಬಬ್ಬಾ...ಅದೆಷ್ಟು ಉದ್ದನೆಯ ಕೂದಲು ; ಇದು ಗಿನ್ನೆಸ್ ದಾಖಲೆಗೆ ಸೇರ್ಪಡೆ : ಇವರ ಕೂದಲು ವಿಶ್ವದ ಅತಿ ಎತ್ತರದ ಮನುಷ್ಯನಿಗಿಂತಲೂ ಉದ್ದ | ವೀಕ್ಷಿಸಿ

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement