ಕೊರೊನಾ ಕರ್ಫ್ಯೂ ಉಲ್ಲಂಘನೆ: ನಮಾಜಿಗೆ ಸೇರಿದ್ದ 25ಕ್ಕೂ ಹೆಚ್ಚು ಜನರು ವಶಕ್ಕೆ

posted in: ರಾಜ್ಯ | 0

ಶಿವಮೊಗ್ಗ :ಶಿವಮೊಗ್ಗ ಜಿಲ್ಲೆಯ ಸಾಗರ ನಗರದ ಆಝಾದ್ ಮಸೀದಿಯಲ್ಲಿ ಕೊರೋನಾ ಕರ್ಪ್ಯೂ ನಿಯಮವಿದ್ದರೂ ಗುಂಪು ಸೇರಿ ನಿಯಮ ಉಲ್ಲಂಘಿಸಿ ಶುಕ್ರವಾರದ ನಮಾಜಿಗೆ ಸೇರಿದ್ದ ಮಾಡುತ್ತಿದ್ದ 25ಕ್ಕೂ ಹೆಚ್ಚು ಜನರನ್ನು ಸಾಗರ ಪೊಲೀಸರು ಬಂಧಿಸಿದ್ದಾರೆ.
ಕೊರೋನಾ ಸೋಂಕಿನ ಮುಂಜಾಗ್ರತಾ ಕ್ರಮವಾಗಿ, ಗುಂಪುಗೂಡುವಿಕೆ, ಪ್ರಾರ್ಥನೆ,ಧಾರ್ಮಿಕ ಕಾರ್ಯಕ್ರಮ ಸೇರಿದಂತೆ ಹೆಚ್ಚು ಜನರು ಸೇರುವುದನ್ನು ನಿರ್ಬಂಧಿಸಲಾಗಿದೆ. ಮೇ12ರ ವರೆಗೂ ರಾಜ್ಯಾದ್ಯಂತ ಕೊರೊನಾ ಕರ್ಪ್ಯೂ ಜಾರಿಗೊಳಿಸಲಾಗಿದೆ. ಆದಾಗ್ಯೂ
ಸಾಗರದ ಆಝಾದ್ ಮಸೀದಿಯಲ್ಲಿ, ಶುಕ್ರವಾರ ಮಧ್ಯಾಹ್ನ ಈ ನಿಯಮ ಮೀರಿ ಅನೇಕರು ನಮಾಜ್ ನಲ್ಲಿ ತೊಡಗಿದ್ದರು ಎನ್ನಲಾಗಿದೆ.
ಈ ಬಗ್ಗೆ ಖಚಿತ ಮಾಹಿತಿ ಪಡೆದ ಡಿವೈಎಸ್ಪಿ ವಿನಾಯಕ ಶೇಟಗೇರಿ ನೇತೃತ್ವದಲ್ಲಿ ಇನ್ಸ್ ಪೆಕ್ಟರ್ ಅಶೋಕ್ ಕುಮಾರ್ ಹಾಗೂ ಸಿಬ್ಬಂದಿ ದಾಳಿ ನಡೆಸಿದ್ದಾರೆ. 25ಕ್ಕೂ ಹೆಚ್ಚು ಜನರನ್ನು ವಶಕ್ಕೆ ಪಡೆದಿದ್ದಾರೆ. ದಾಳಿಯ ಸಂದರ್ಭದಲ್ಲಿ ಅನೇಕರು ಪರಾರಿಯಾಗಿದ್ದಾರೆ ಎನ್ನಲಾಗಿದೆ. ವಶಕ್ಕೆ ಪಡೆದವರ ವಿರುದ್ಧ, ಪೊಲೀಸರು ಕೊರೊನಾ ಕರ್ಪ್ಯೂ ನಿಯಮ ಉಲ್ಲಂಘನೆಯ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ