ಕೊರೊನಾ ಸೋಂಕಿನಿಂದ ಮೃತಪಟ್ಟ ಆಜ್‌ ತಕ್‌ ಖ್ಯಾತ ಸುದ್ದಿ ವಾಚಕ ರೋಹಿತ್ ಸರ್ದಾನಾ

ನವ ದೆಹಲಿ: ಕೊರೊನಾ ತನ್ನ ಮರಣ ಮೃದಂಗ ಮುಂದುವರೆಸಿದ್ದು, ಮಾಧ್ಯಮಗಳಲ್ಲೂ ಸಾವು ನೋವಿನ ಸುದ್ದಿಗಳು ಬರಲಾರಂಭಿಸಿದೆ. ಆಜ್ ತಕ್ ಹಿಂದಿ ನ್ಯೂಸ್ ಚಾನೆಲ್ ನ ಖ್ಯಾತ ಸುದ್ದಿವಾಚಕ ರೋಹಿತ್ ಸರ್ದಾನಾ ಕೊರೊನಾಕ್ಕೆ ಸೋಂಕಿನಿಂದ ಮೃತಪಟ್ಟಿದ್ದಾರೆ.
ಹಿಂದಿ ಸುದ್ದಿ ಚಾನೆಲ್ ಆಜ್ ತಕ್ ನಲ್ಲಿ ಕೆಲಸ ಮಾಡುತ್ತಿದ್ದ 41 ವರ್ಷದ ರೋಹಿತ್ ಸರ್ದಾನಾ ಜನಪ್ರಿಯ ಚರ್ಚಾ ಕಾರ್ಯಕ್ರಮ ‘ದಂಗಲ್’ ಆಯೋಜಿಸಿದ್ದರು. ಅವರಿಗೆ ಏ. 24ರಂದು ಕೊರೊನಾ ಸೋಂಕು ದೃಢಪಟ್ಟಿತ್ತು. ರೋಹಿತ್ ಸರ್ದಾನಾ ಅವರಿಗೆ ಏಪ್ರಿಲ್ 25 ರಂದು ಕೊರೊನಾ ಸೊಂಕು ದೃಢಪಟ್ಟಿದ್ದು ಅವರನ್ನು ದೆಹಲಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಶುಕ್ರವಾರ (ಇಂದು) ಹೃದಯಾಘಾತವಾಗಿದೆ ಎಂದು ಹೇಳಲಾಗಿದೆ.
ಆಜ್ ತಕ್ ಅವರ ಸಹೋದರ ಸಂಸ್ಥೆ ಇಂಗ್ಲಿಷ್ ನ್ಯೂಸ್ ಚಾನೆಲ್ ಇಂಡಿಯಾ ಟುಡೆ ಈ ಸುದ್ದಿಯನ್ನು ದೃಢಪಡಿಸಿದ್ದು, ‘ನಮ್ಮ ಆತ್ಮೀಯ ಸಹೋದ್ಯೋಗಿ ಮತ್ತು ಸ್ನೇಹಿತ ರೋಹಿತ್ ಸರ್ದಾನ ಅವರ ಅಕಾಲಿಕ ನಷ್ಟವು ನಮಗೆ ಆಘಾತವನ್ನುಂಟು ಮಾಡಿದೆ. ಇದು ತುಂಬಲಾರದ ನಷ್ಟ ಅದನ್ನು ಯಾವುದೇ ಪದಗಳಿಂದ ವಿವರಿಸಲು ಸಾಧ್ಯವಿಲ್ಲ ಎಂದು ಹೇಳಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ