ಭಕ್ತರಿಗೆ ಮಂತ್ರಾಲಯ ರಾಯರ ದರ್ಶನ ನಿಷೇಧ

posted in: ರಾಜ್ಯ | 0

ರಾಯಚೂರು: ಮಂತ್ರಾಲಯ ಕ್ಷೇತ್ರದಲ್ಲಿ ಸ್ಥಳೀಯವಾಗಿ ಲಾಕ್‌ಡೌನ್‌ ಜಾರಿಗೊಳಿಸಿದ ಹಿನ್ನೆಲೆಯಲ್ಲಿ ಮೇ 1ರಿಂದ ಮಂತ್ರಾಲಯದ ಶ್ರೀ ರಾಘವೇಂದ್ರ ಸ್ವಾಮಿ ಬೃಂದಾವನ ದರ್ಶನ ನಿರ್ಬಂಧಿಸಲಾಗಿದೆ.
ತೀರ್ಥ ಪ್ರಸಾದಗಳಿಗೆ ಅವಕಾಶವಿರುವುದಿಲ್ಲ. ರಾಯರ ಭಕ್ತರು ಮಂತ್ರಾಲಯ ಕ್ಷೇತ್ರಕ್ಕೆ ಮುಂದಿನ ಸೂಚನೆ ನೀಡುವವರೆಗೂ ಆಗಮಿಸಬಾರದು ಎಂದು ತಿಳಿಸಲಾಗಿದೆ.
ಶ್ರೀ ಮಠದಲ್ಲಿ ಎಂದಿನಂತೆ ಪೂಜಾ ಕೈಂಕರ್ಯಗಳು, ಪಂಚಾಮೃತಾಭಿಷೇಕ, ರಥೋತ್ಸವಾದಿ ಸೇವೆಗಳ ನಡೆಯಲಿದ್ದು, ಸಾರ್ವಜನಿಕರಿಗೆ ನಿರ್ಬಂಧಿಸಲಾಗಿದೆ. ಭಕ್ತರು ಆನ್‌ಲೈನ್‌ ಸೇವೆಗಳ ಮೂಲಕ ರಾಯರ ಕೃಪೆಗೆ ಪಾತ್ರರಾಗಬಹುದು ಎಂದು ಶ್ರೀಮಠ ತಿಳಿಸಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 2

ನಿಮ್ಮ ಕಾಮೆಂಟ್ ಬರೆಯಿರಿ