ಮಸ್ಕಿ ಕೇತ್ರದ ಚುನಾವಣೋತ್ತರ ಸಮೀಕ್ಷೆ: ಯಾರೇ ಗೆದ್ದರೂ ಕಡಿಮೆ ಅಂತರ..!

posted in: ರಾಜ್ಯ | 0

ರಾಯಚೂರು: ಕಾಂಗ್ರೆಸ್ ಶಾಸಕರಾಗಿದ್ದ ಪ್ರತಾಪ್ ಗೌಡ ಪಾಟೀಲ್ ರಾಜೀನಾಮೆಯಿಂದ ಎದುರಾದ ರಾಯಚೂರು ಜಿಲ್ಲೆಯ ಮಸ್ಕಿ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಫಲಿತಾಂಶ ಕುತೂಹಲ ಕಾರಣವಾಗಿದೆ.
ಏಪ್ರಿಲ್ 17ರಂದು ಚುನಾವಣೆ ನಡೆದಿದ್ದು, ಮೇ 2ರಂದು ಫಲಿತಾಂಶ ಪ್ರಕಟವಾಗಲಿದೆ.
ಮಸ್ಕಿಯಲ್ಲಿ ಬಿಜೆಪಿಯಿಂದ ಪ್ರತಾಪಗೌಡ ಪಾಟೀಲ, ಕಾಂಗ್ರೆಸ್‌ನಿಂದ ಬಸನಗೌಡ ತುರ್ವಿಹಾಳ ಅಭ್ಯರ್ಥಿಗಳು. ಈ ಇಬ್ಬರೂ ನಾಯಕರು 2018ರ ಚುನಾವಣೆಯಲ್ಲಿಯೂ ಎದುರಾಳಿಗಳಾಗಿದ್ದರು. ಆದರೆ ಉಪ ಚುನಾವಣೆಯಲ್ಲಿ ಇಬ್ಬರೂ ಸಹ ಪಕ್ಷ ಬದಲಾಯಿಸಿದ್ದಾರೆ.
ಗುರುವಾರ ಮಸ್ಕಿ ಕ್ಷೇತ್ರದ ಉಪ ಚುನಾವಣೆ ಚುನಾವಣೋತ್ತರ ಸಮೀಕ್ಷೆಯನ್ನು ಟಿವಿ 9 ವಾಹಿನಿ ಪ್ರಕಟಿಸಿದೆ. ಸಮೀಕ್ಷೆಯಲ್ಲಿ ನೇರ ಪೈಪೋಟಿ ಕಂಡುಬಂದಿದೆ.
ಸಮೀಕ್ಷೆಯ ಸಮಯದಲ್ಲಿ ಈಗ ನೀವು ಯಾರಿಗೆ ಮತ ಹಾಕಿದ್ದೀರಿ? ಎಂಬ ಪ್ರಶ್ನೆಗೆ ಶೇ 47ರಷ್ಟು ಜನರು ಬಿಜೆಪಿ, ಶೇ 48ರಷ್ಟು ಜನರು ಕಾಂಗ್ರೆಸ್, ಶೇ 5ರಷ್ಟು ಜನರು ಇತರರಿಗೆ ಮತ ಹಾಕಿದ್ದೇವೆ ಎಂದು ಹೇಳಿದ್ದಾರೆ.
ಪಕ್ಷ ಬಿಟ್ಟಿದ್ದು ಹಿನ್ನಡೆ?: ಶಾಸಕರಾಗಿದ್ದ ಪ್ರತಾಪಗೌಡ ಪಾಟೀಲ ಪಕ್ಷ ಬದಲಿಸಿದ್ದನ್ನು ನೀವು ಒಪ್ಪಿಕೊಳ್ಳುತ್ತೀರಾ? ಎಂದು ಪ್ರಶ್ನಿಸಲಾಗಿತ್ತು. ಬದಲಿಸಿದ್ದು ತಪ್ಪು ಎಂದು ಶೇ 41ರಷ್ಟು ಜನರು ಹೇಳಿದ್ದಾರೆ. ಬದಲಿಸಿದ್ದು ಸರಿ ಎಂದು ಶೇ 27 ಜನರು ಅಭಿಪ್ರಾಯಪಟ್ಟಿದ್ದಾರೆ. ಏನನ್ನೂ ಹೇಳುವುದಿಲ್ಲ ಎಂದು ಶೇ 32ರಷ್ಟು ಜನರು ಹೇಳಿದ್ದಾರೆ. ಹೀಗಾಗಿ ಇದು ಯಾವ ರೀತಿ ವಾಲುತ್ತದೆ ಎಂದು ಹೇಳುವುದು ಕಷ್ಟಸಾಧ್ಯ. ಯಾರೇ ಗೆದ್ದರೂ ಅಂತರ ಕಡಿಮೆ ಇರಬಹುದು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ