ಕೊರೊನಾ ಸೋಂಕು: ರಣಧೀರ ಕಪೂರ್‌ ಆಸ್ಪತ್ರೆಗೆ ದಾಖಲು

ಮುಂಬೈ: ಏಪ್ರಿಲ್ 29 ರಂದು ಕೊರೊನಾ ಪಾಸಿಟಿವ್‌ ಬಂದಿರುವ ರಣಧೀರ್‌ ಕಪೂರ್‌ ತನ್ನ ಐವರು ಸಿಬ್ಬಂದಿಯೊಂದಿಗೆ ಆಸ್ಪತ್ರೆಗೆ ದಾಖಲಾಗಿದ್ದು, ಈಗ ಅವರನ್ನು ಕಪೂರ್ ಅವರನ್ನು ತೀವ್ರ ನಿಗಾ ಘಟಕಕ್ಕೆ(ಐಸಿಯು) ಸ್ಥಳಾಂತರಿಸಲಾಗಿದೆ.
ಹೆಚ್ಚಿನ ಪರೀಕ್ಷೆಗಳಿಗಾಗಿ ಐಸಿಯುಗೆ ಸ್ಥಳಾಂತರಿಸಲಾಗಿದೆ ಎಂದು ಸ್ವತಃ ರಣಧೀರ ಕಪೂರ ಬಹಿರಂಗಪಡಿಸಿದ್ದಾರೆ. ಅವರನ್ನು ಮುಂಬೈನ ಕೋಕಿಲಾಬೆನ್ ಅಂಬಾನಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಹೆಚ್ಚಿನ ಪರೀಕ್ಷೆಗಳನ್ನು ನಡೆಸಲು ಕೊಕಿಲಾಬೆನ್ ಅಂಬಾನಿ ಆಸ್ಪತ್ರೆಯ ಐಸಿಯುಗೆ ಸ್ಥಳಾಂತರಿಸಲಾಗಿದೆ ಎಂದು ರಣಧೀರ್ ಕಪೂರ್ ಶುಕ್ರವಾರ ತಿಳಿಸಿದ್ದಾರೆ. ಇನ್ನೂ ಕೆಲವು ಪರೀಕ್ಷೆಗಳನ್ನು ಮಾಡಲು ನನ್ನನ್ನು ತೀವ್ರ ನಿಗಾ ಘಟಕಕ್ಕೆ ಸ್ಥಳಾಂತರಿಸಲಾಗಿದೆ. ಎಲ್ಲವೂ ನಿಯಂತ್ರಣದಲ್ಲಿದೆ ಎಂದು ಟೈಮ್ಸ್‌ ಆಪ್‌ ಇಂಡಿಯಾಕ್ಕೆ ಅವರು ಹೇಳಿದ್ದಾರೆ.
ರಣಧೀರ್ ಕಪೂರ್ ಅವರು ಏಪ್ರಿಲ್ 20 ರಂದು ಕರೀನಾ ಕಪೂರ್ ಮನೆಯಲ್ಲಿ ನಡೆದ ಬಬಿತಾ ಕಪೂರ್ ಜನ್ಮದಿನದಲ್ಲಿ ಭಾಗವಹಿಸಿದ್ದರು. ಇದರಲ್ಲಿ ಕರಿಷ್ಮಾ ಕಪೂರ್ ಮತ್ತು ಅವರ ಪುತ್ರ ಕಿಯಾನ್ ಕೂಡ ಭಾಗವಹಿಸಿದ್ದರು. ರಣಧೀರ್‌ಗೆ ವೈರಸ್ ಪತ್ತೆಯಾದ ನಂತರ, ಬಬಿತಾ, ಕರಿಷ್ಮಾ ಮತ್ತು ಕರೀನಾ ಖಾನ್ ಕೂಡ ಪರೀಕ್ಷೆಗೆ ಒಳಗಾದರು. ವರದಿಗಳು ನಕಾರಾತ್ಮಕವಾಗಿವೆ” ಎಂದು ಹೇಳಿದ್ದಾರೆ ಎಂದು ಟೈಮ್ಸ್‌ ಆಪ್‌ ಇಂಡಿಯಾ ವರದಿ ಮಾಡಿದೆ.
ರಣಧೀರ್ ಕಪೂರ್ ದಿವಂಗತ ಚಲನಚಿತ್ರ ನಿರ್ಮಾಪಕ ರಾಜ್ ಕಪೂರ್ ಅವರ ಹಿರಿಯ ಮಗ. ಅವರು ತಮ್ಮ ಯುವ ಸಹೋದರರಾದ ರಿಷಿ ಕಪೂರ್ ಮತ್ತು ರಾಜೀವ್ ಕಪೂರ್ ಅವರನ್ನು ಒಂದು ವರ್ಷದ ಅವಧಿಯಲ್ಲಿ ಕಳೆದುಕೊಂಡಿದ್ದಾರೆ.

ಪ್ರಮುಖ ಸುದ್ದಿ :-   "ನನ್ನ 90 ಸೆಕೆಂಡುಗಳ ಭಾಷಣವು ಕಾಂಗ್ರೆಸ್, ಇಂಡಿಯಾ ಮೈತ್ರಿಕೂಟದಲ್ಲಿ ತಲ್ಲಣ ಮೂಡಿಸಿದೆ" : ಪ್ರಧಾನಿ ಮೋದಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement