ಎರಡನೇ ಕೋವಿಡ್ ಅಲೆಗೆ ಇಸ್ರೋದ ಶ್ರೀಹರಿಕೋಟದಲ್ಲಿ 350 ಜನರಿಗೆ ಸೋಂಕು?

ಚೆನ್ನೈ: ಕೋವಿಡ್‌ ಎರಡನೇ ಅಲೆಗೆ ಶ್ರೀಹರಿಕೋಟಾದ ಪ್ರತಿಷ್ಠಿತ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರ (ಎಸ್‌ಡಿಎಸ್‌ಸಿ) ಈಗ ಹೆಚ್ಚು ಹಾನಿಗೊಳಗಾಗಿದೆ..!
ಒಂದು ಅಂದಾಜಿನ ಪ್ರಕಾರ, ಶ್ರೀಹರಿಕೋಟದಲ್ಲಿ 350 ಹೊಸ ಪ್ರಕರಣಗಳು ವರದಿಯಾಗಿವೆ ಮತ್ತು ಕನಿಷ್ಠ ಇಬ್ಬರು ಸೋಂಕಿಗೆ ಮೃತಪಟ್ಟಿದ್ದಾರೆ ಎಂದು ದಿ ನ್ಯೂ ಇಂಡಿಯನ್‌ ಎಕ್ಸ್‌ಪ್ರೆಸ್‌ ವರದಿ ಮಾಡಿದೆ.
ಏಪ್ರಿಲ್ ಮಧ್ಯದಿಂದ ಈ ಸಂಖ್ಯೆಗಳು ಹೆಚ್ಚಾಗಲು ಪ್ರಾರಂಭಿಸಿದವು, ಇದು ತಿರುಪತಿ ಲೋಕಸಭಾ ಕ್ಷೇತ್ರದ ಉಪಚುನಾವಣೆಗೆ ಹೊಂದಿಕೆಯಾಯಿತು. ಎಸ್‌ಡಿಎಸ್‌ಸಿ ಉದ್ಯೋಗಿಗಳಿಗೆ ವೀಕ್ಷಕರಾಗಿ ಮತದಾನ ಕರ್ತವ್ಯವನ್ನೂ ನೀಡಲಾಯಿತು ಎಂದು ಎಸ್‌ಡಿಎಸ್‌ಸಿಯ ಅಧಿಕಾರಿಗಳ ಮೂಲಗಳು ತಿಳಿಸಿವೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್‌ಗೆ ವರದಿ ಮಾಡಿದೆ.
ವರದಿ ಪ್ರಕಾರ, ಪ್ರತಿದಿನ ಸರಾಸರಿ 30-40 ಕೋವಿಡ್ ಧನಾತ್ಮಕ ಪ್ರಕರಣಗಳು ಪ್ರತಿದಿನ ವರದಿಯಾಗುತ್ತಿರುವ ಹಿನ್ನೆಲೆಯಲ್ಲಿ ಬಾಹ್ಯಾಕಾಶ ಕೇಂದ್ರದಲ್ಲಿ ಕಾರ್ಯಾಚರಣೆಯನ್ನು ಅಧಿಕಾರಿಗಳಿಗೆ ನಿರ್ಬಂಧಿಸುವ ಅನಿವಾರ್ಯತೆ ಎದುರಾಗಿದೆ. ಈಗ ಟೊಟೇಶನ್‌ನೊಂದಿಗೆ 50% ಸಿಬ್ಬಂದಿಯೊಂದಿಗೆ ಕೆಲಸಗಳನ್ನು ನಿರ್ವಹಿಸುವ ಪದ್ಧತಿ ಜಾರಿಗೆ ತರಲಾಗಿದೆ ಮತ್ತು ಗುತ್ತಿಗೆ ನೌಕರರನ್ನು ಕರ್ತವ್ಯಕ್ಕೆ ಹಾಜರಾಗದಂತೆ ನಿಲ್ಲಿಸಲಾಗಿದೆ ಎಂದು ಹೇಳಲಾಗಿದೆ..
ಶ್ರೀಹರಿಕೋಟ ಟೌನ್‌ಶಿಪ್‌ನೊಳಗೆ ಕೋವಿಡ್ ಪ್ರಕರಣಗಳು ಹೆಚ್ಚಾಗುತ್ತಿವೆ ಎಂದು ನೆಲ್ಲೂರು ಜಿಲ್ಲಾಧಿಕಾರಿ ಕೆವಿಎನ್ ಚಕ್ರಧರ್ ಬಡು ದೃಢಪಡಿಸಿದ್ದು, ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ತಿಳಿಸಿದ್ದಾರೆ.

ಪ್ರಮುಖ ಸುದ್ದಿ :-   ಕುಖ್ಯಾತ ಗ್ಯಾಂಗ್‌ಸ್ಟರ್‌-ರಾಜಕಾರಣಿ ಮುಖ್ತಾರ್ ಅನ್ಸಾರಿ ಹೃದಯಾಘಾತದಿಂದ ಸಾವು

0 / 5. 0

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement