ಬೆಂಗಳೂರು : ರಾಜ್ಯದಲ್ಲಿ ದಿನೇ ದಿನೇ ಹೆಚ್ಚುತ್ತಿರುವ ಕೋವಿಡ್ ಸೋಂಕಿನ ಹಿನ್ನೆಲೆಯಲ್ಲಿ ಮಾರುಕಟ್ಟೆಗಳಲ್ಲಿ ಆಗುತ್ತಿರುವ ನೂಕು ನುಗ್ಗಲನ್ನು ತಪ್ಪಿಸಲು ರಾಜ್ಯಸರ್ಕಾರ ಶನಿವಾರ ಸಂಜೆ ಹೊಸ ಪರಿಷ್ಕೃತ ಮಾರ್ಗಸೂಚಿ ಹೊರಡಿಸಿದೆ.ಈ ಮಾರ್ಗಸೂಚಿಗಳು ಭಾನುವಾರದಿಂದಲೇ (ಮೇ 2ರಿಂದಲೇ )ಜಾರಿಗೆ ಬರಲಿದೆ.
ಈ ಹೊಸ ಮಾರ್ಗಸೂಚಿ ಅನ್ವಯ ರಾಜ್ಯಾದ್ಯಂತ ಸಂತೆ ಮಾರುಕಟ್ಟೆಗಳು ಸಂಪೂರ್ಣ ಬಂದ್ ಆಗಲಿದೆ. ಇದಕ್ಕೆ ಬದಲಾಗಿ ಹೊಸ ಮಾರ್ಗಸೂಚಿಯಲ್ಲಿ ಹಾಪ್ ಕಾಮ್ಸ್, ಎಲ್ಲ ಹಾಲಿನ ಬೂತ್ಗಳು ತಳ್ಳುಗಾಡಿಗಳಲ್ಲಿ ಹಣ್ಣು ಮತ್ತು ತರಕಾರಿ ಮಾರಾಟ ಮಾಡಲು ಅವಕಾಶ ನೀಡಲಾಗಿದ್ದು, ಕೋವಿಡ್ ನಿಯಮಾವಳಿ ಅನುಸರಿಸಿ ಬೆಳಿಗ್ಗೆ ಆರು ಗಂಟೆಯಿಂದ ಸಂಜೆ ಆರು ಗಂಟೆ ವರೆಗೆ ಮಾರಾಟ ಮಾಡಲು ಅವಕಾಶ ನೀಡಲಾಗಿದೆ.
ಎಪಿಎಂಸಿ ಹಾಗೂ ದಿನಸಿ ಅಂಗಡಿಗಳ ವ್ಯಾಪಾರದ ಸಮಯದಲ್ಲೂ ಬದಲಾವಣೆ ಮಾಡಿದ್ದು, ಹೊಸ ಮಾರ್ಗಸೂಚಿಯಲ್ಲಿ ಬೆಳ್ಳಿಗ್ಗೆ 6 ರಿಂದ ಮಧ್ಯಾಹ್ನ 12 ಗಂಟೆಯ ವರೆಗೆ ವ್ಯಾಪಾರ ಮಾಡಲು ಅವಕಾಶ ನೀಡಲಾಗಿದೆ. ಇವೆಲ್ಲವೂ ಭಾನುವಾರದಿಂದಲೇ (ಮೇ 2ರಿಂದಲೇ) ಜಾರಿಗೆ ಬರಲಿದೆ ಎಂದು ತಿಳಿಸಲಾಗಿದೆ.
ನಿಮ್ಮ ಕಾಮೆಂಟ್ ಬರೆಯಿರಿ