ಜುಲೈ ವರೆಗೆ 16 ಕೋಟಿಗೂ ಹೆಚ್ಚಿನ ಕೋವಿಡ್ -19 ಲಸಿಕೆ ಡೋಸ್‌ಗಳಿಗೆ ಆರ್ಡರ್‌: ಕೇಂದ್ರ ಸರ್ಕಾರ‌

ನವ ದೆಹಲಿ: ಕೋವಿಶೀಲ್ಡ್ ಮತ್ತು ಕೋವಾಕ್ಸಿನ್ ಸಂಯೋಜನೆಯ 160 ಮಿಲಿಯನ್ ಡೋಸ್‌ಗಳಿಗೆ ಈಗಾಗಲೇ ಆರ್ಡರ್‌ ನೀಡಲಾಗಿದೆ ಎಂದು ಕೇಂದ್ರ ಸರ್ಕಾರ ಸೋಮವಾರ ತಿಳಿಸಿದೆ.
ಈ ತಿಂಗಳಿನಿಂದ ಜುಲೈ ವರೆಗೆ ವಿತರಿಸಲಾಗುತ್ತದೆ. ಅಲ್ಲದೆ, ಎರಡು ಕೋವಿಡ್ -19 ಲಸಿಕೆಗಳ ಹಿಂದಿನ ಆರ್ಡರ್‌ಗಳ ಇನ್ನೂ 23 ಮಿಲಿಯನ್ ಡೋಸ್‌ಗಳು ಪೂರಖೆಯಾಗಬೇಕಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.
ಸೋಮವಾರ ಎರಡು ಭಾರತೀಯ ಲಸಿಕೆ ತಯಾರಕರಾದ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ (ಎಸ್‌ಐಐ) ಮತ್ತು ಭಾರತ್ ಬಯೋಟೆಕ್ – ಕ್ರಮವಾಗಿ ಕೋವಿಶೀಲ್ಡ್ ಮತ್ತು ಕೊವಾಕ್ಸಿನ್‌ಗಾಗಿ ಕೇಂದ್ರ ಹೊಸ ಆರ್ಡರ್‌ ನೀಡಿಲ್ಲ ಎಂಬ ವರದಿಯೊಂದನ್ನು ಖಂಡಿಸಿರುವ ಕೇಂದ್ರವು ಈ ಹೇಳಿಕೆ ಬಿಡುಗಡೆ ಮಾಡಿದೆ.
ಮೂಲದಲ್ಲಿ ತೆರಿಗೆಯನ್ನು ಕಡಿತಗೊಳಿಸಿದ ನಂತರ ಸರ್ಕಾರವು ಈಗಾಗಲೇ 1,699.50 ಕೋಟಿ ರೂ.ಗಳ ಮುಂಗಡವನ್ನುಕೋವಿಶೀಲ್ಡ್‌ 11 ಕೋಟಿ ಡೋಸೇಜ್‌ಗಳಿಗೆ ಸೀರಮ್ ಇನ್ಸ್ಟಿಟ್ಯೂಟಿಗೆ ಹಾಗೂ 772.50 ಕೋಟಿ ರೂ.ಗಳನ್ನು ಕೋ ವ್ಯಾಕ್ಸಿನ್‌ಗಾಗಿ ಭಾರತ ಬಯೋಟೆಕ್‌ಗೆ ಪಾವತಿಸಿದೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ. ಎರಡೂ ಪಾವತಿಗಳನ್ನು ಏಪ್ರಿಲ್ 28 ರಂದು ಮಾಡಲಾಗಿದ್ದು, ಆರ್ಡರ್‌ಗಳು ಈ ತಿಂಗಳಿನಿಂದ ಪ್ರಾರಂಭವಾಗಿ ಜುಲೈ ವರೆಗೆ ಮುಂದುವರಿಯುವ ನಿರೀಕ್ಷೆಯಿದೆ ಎಂದು ಸರ್ಕಾರ ತಿಳಿಸಿದೆ.
ಹೊಸ ಆರ್ಡರ್‌ಗಳ ಹೊರತಾಗಿ, ಸರ್ಕಾರವು ಸುಮಾರು 12.6 ಮಿಲಿಯನ್ ಡೋಸ್ ಕೋವಿಶೀಲ್ಡ್ ಮತ್ತು 11.2 ಮಿಲಿಯನ್ ಡೋಸ್ ಕೋವಾಕ್ಸಿನ್ ಅನ್ನು ಹೊಂದಿದೆ, ಇವುಗಳನ್ನು ಹಿಂದಿನ ಆದೇಶಗಳಿಂದ ಕ್ರಮವಾಗಿ 100 ಮಿಲಿಯನ್ ಮತ್ತು 20 ಮಿಲಿಯನ್ನಿಗೆ ತಲುಪಿಸಬೇಕಾಗಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.
ಸೀರಮ್ ಸಂಸ್ಥೆ ಸೋಮವಾರ ಆರೋಗ್ಯ ಸಚಿವಾಲಯ ಹೊರಡಿಸಿದ ಹೇಳಿಕೆಯನ್ನು ಅನುಮೋದಿಸಿದೆ. ನಾವು ಸಾಧ್ಯವಾದಷ್ಟು ಪ್ರತಿ ಜೀವವನ್ನು ಉಳಿಸಲು ನಮ್ಮ ಲಸಿಕೆ ಉತ್ಪಾದನೆ ಹೆಚ್ಚಿಸಲು ಬದ್ಧರಾಗಿದ್ದೇವೆ” ಎಂದು ಕಂಪನಿ ಟ್ವಿಟರ್‌ನಲ್ಲಿ ತಿಳಿಸಿದೆ. ಪುಣೆ ಮೂಲದ ಸಂಸ್ಥೆಯು ಕೋವಿಶೀಲ್ಡ್‌ ಉತ್ಪಾದನಾ ಸಾಮರ್ಥ್ಯವನ್ನು ಜುಲೈ ವೇಳೆಗೆ ತಿಂಗಳಿಗೆ 100 ಮಿಲಿಯನ್ ಡೋಸಿಗೆ ಹೆಚ್ಚಿಸಲು ಯೋಜಿಸುತ್ತಿದೆ. ಪ್ರಸ್ತುತ 60-70 ಮಿಲಿಯನ್ ಸಾಮರ್ಥ್ಯವಿದೆ.
ಭಾರತ್ ಬಯೋಟೆಕ್ ತನ್ನ ಸಾಮರ್ಥ್ಯವನ್ನು ತಿಂಗಳಿಗೆ 10 ಮಿಲಿಯನ್ ಡೋಸ್‌ನಿಂದ ಜೂನ್ ವೇಳೆಗೆ ಸುಮಾರು 20 ಮಿಲಿಯನ್‌ಗೆ ಹೆಚ್ಚಿಸಲು ಯೋಜಿಸಿದೆ. ಆಗಸ್ಟ್ ವೇಳೆಗೆ 60-70 ಮಿಲಿಯನ್‌ಗೆ ಮತ್ತು ಸೆಪ್ಟೆಂಬರ್ ವೇಳೆಗೆ 100 ಮಿಲಿಯನ್‌ಗೆ ಹೆಚ್ಚಿಸಲು ಯೋಜಿಸುತ್ತಿದೆ. ಸಾಮರ್ಥ್ಯ ವಿಸ್ತರಣೆಯನ್ನು ತನ್ನದೇ ಆದ ಸ್ಥಾವರ ಹೆಚ್ಚಿಸುವುದರ ಮೂಲಕ ಮತ್ತು ಮೂರು ಸರ್ಕಾರಿ ಸ್ವಾಮ್ಯದ ಕಂಪನಿಗಳಾದ ಇಂಡಿಯನ್ ಇಮ್ಯುನೊಲಾಜಿಕಲ್ಸ್ ಲಿಮಿಟೆಡ್, ಭಾರತ್ ಇಮ್ಯುನೊಲಾಜಿಕಲ್ಸ್ ಮತ್ತು ಬಯೋಲಾಜಿಕಲ್ಸ್ ಕಾರ್ಪೊರೇಶನ್ ಲಿಮಿಟೆಡ್ ಮತ್ತು ಹ್ಯಾಫ್ಕೈನ್ ಬಯೋಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್‌ನ ಸಹಭಾಗಿತ್ವದ ಮೂಲಕ ಮಾಡಲಾಗುತ್ತದೆ.
ಏಪ್ರಿಲ್‌ನಲ್ಲಿ ಪ್ರತಿದಿನ ಸುಮಾರು 3 ಮಿಲಿಯನ್ ಡೋಸ್ ಲಸಿಕೆಗಳನ್ನು ನೀಡಲಾಗುತ್ತಿತ್ತು, ಆರೋಗ್ಯ ಸಚಿವಾಲಯವು ಪ್ರಸ್ತುತ ತಮ್ಮ ದಾಸ್ತಾನುಗಳಲ್ಲಿ 7.8 ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣವನ್ನು ಲಭ್ಯವಿದ್ದು, ಇನ್ನೂ ನಿರ್ವಹಿಸಬೇಕಾಗಿಲ್ಲ, ಮುಂದಿನ ಮೂರು ದಿನಗಳಲ್ಲಿ 5.6 ದಶಲಕ್ಷಕ್ಕೂ ಹೆಚ್ಚಿನ ಪ್ರಮಾಣ ಅವರಿಗೆ ನೀಡಲಾಗುವುದು ಎಂದು ತಿಳಿಸಲಾಗಿದೆ.
ಲಿಬರಲೈಸ್ಡ್ ಪ್ರೈಸಿಂಗ್ ಮತ್ತು ಆಕ್ಸಿಲರೇಟೆಡ್ ನ್ಯಾಷನಲ್ ಕೋವಿಡ್ -19 ವ್ಯಾಕ್ಸಿನೇಷನ್ ಸ್ಟ್ರಾಟಜಿ ಅಡಿಯಲ್ಲಿ, ಭಾರತ ಸರ್ಕಾರವು ಮಾಸಿಕ ಕೇಂದ್ರ ಡ್ರಗ್ಸ್ ಲ್ಯಾಬೊರೇಟರಿ (ಸಿಡಿಎಲ್) ತೆರವುಗೊಳಿಸಿದ ಲಸಿಕೆಗಳ 50% ನಷ್ಟು ಪಾಲನ್ನು ಪಡೆದುಕೊಳ್ಳುವುದನ್ನು ಮುಂದುವರಿಸುತ್ತದೆ ಮತ್ತು ಅದನ್ನು ರಾಜ್ಯ ಸರ್ಕಾರಗಳಿಗೆ ಸಂಪೂರ್ಣವಾಗಿ ಉಚಿತವಾಗಿ ಲಭ್ಯವಾಗುವಂತೆ ಮಾಡುತ್ತದೆ ಎಂದು ಆರೋಗ್ಯ ಸಚಿವಾಲಯ ಹೇಳಿದೆ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

5 / 5. ಒಟ್ಟು ವೋಟುಗಳು 1

ನಿಮ್ಮ ಕಾಮೆಂಟ್ ಬರೆಯಿರಿ