ಪಶ್ಚಿಮ ಬಂಗಾಳ: ದಿನಗೂಲಿ ಕಾರ್ಮಿಕನ ಪತ್ನಿ ಈಗ ಶಾಸಕಿ..!

ಕೋಲ್ಕತ್ತಾ: ಪಶ್ಚಿಮ ಬಂಗಾಳದ ಬಂಕುರಾ ಜಿಲ್ಲೆಯ ಸಾಲ್ಟೋರಾ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಸ್ಪರ್ಧಿಸಿ ದಿನಗೂಲಿ ಕಾರ್ಮಿಕನ ಪತ್ನಿ ಚಂದನಾ ಬೌರಿ ಅಭೂತಪೂರ್ವ ಗೆಲುವು ಸಾಧಿಸಿದ್ದು, ಅವರಿಗೆ ಟ್ವಿಟರ್ ನಲ್ಲಿ ಅಭಿನಂದನೆಯ ಸುರಿಮಳೆಯಾಗಿದೆ.
30ರ ಹರೆಯದ ಚಂದನಾ ಬೌರಿ ಅವರು ಪ್ರತಿಸ್ಪರ್ಧಿ ತೃಣಮೂಲ ಕಾಂಗ್ರೆಸ್‌ನ ಸಂತೋಷ್ ಕುಮಾರ್ ಮೊಂಡಲ ಅವರನ್ನು 4,000 ಕ್ಕೂ ಹೆಚ್ಚು ಮತಗಳ ಅಂತರದಿಂದ ಸೋಲಿಸಿದರು. ಚಂದಾನಾ ಅವರ ಗೆಲುವು ಎಲ್ಲರಿಗೂ ಸ್ಫೂರ್ತಿಯಾಗಿದೆ ಎಂದು ಟ್ವಿಟರಿಗರು ಪ್ರಂಶಂಸೆ ಮಾಡಿದ್ದಾರೆ.
ಚುನಾವಣಾ ಅಫಿಡವಿಟ್ ಪ್ರಕಾರ, ಮೂವರು ಮಕ್ಕಳ ತಾಯಿಯಾಗಿರುವ ಚಂದನಾ ಅವರ ಬಳಿ ಕೇವಲ 31,985 ರೂ. ಇದೆ. ಅವರ ಪತಿಯ ಆಸ್ತಿ 30,311 ರೂ. ಆಗಿದೆ. ಚಂದನಾರ ಪತಿ ದಿನಗೂಲಿ ಕಾರ್ಮಿಕ. ಮಣ್ಣಿನ ಸಣ್ಣ ಮನೆಯಲ್ಲಿ ವಾಸವಾಗಿರುವ ಇವರಿಗೆ ವಿದ್ಯುತ್, ನೀರಿನ ಸಂಪರ್ಕ ಹಾಗೂ ಶೌಚಾಲಯದ ವ್ಯವಸ್ಥೆಯೂ ಇಲ್ಲ. ಇಬ್ಬರಲ್ಲೂ ಮಹಾತ್ಮಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಕಾರ್ಡ್ ಇದೆ. ನಾನು ವಿಧಾನಸಭಾ ಚುನಾವಣೆಯಲ್ಲಿ ಅಭ್ಯರ್ಥಿಯಾಗಿ ಆಯ್ಕೆಯಾಗುತ್ತೇನೆ ಎಂದು ಕನಸಿನಲ್ಲಿಯೂ ಎಣಿಸಿರಲಿಲ್ಲ ಎಂದು ಅವರು ಹೇಳಿದ್ದಾರೆ.
ಚಂದನಾ ಬೌರಿ ಅವರ ಗೆಲುವಿನ ಸುದ್ದಿ ಬಿಜೆಪಿ ಬೆಂಬಲಿಗರನ್ನು ಖುಷಿಪಡಿಸಿದೆ. ರಾಜಕೀಯ ಸಂಪರ್ಕಗಳಿಲ್ಲದ “ಸಾಮಾನ್ಯ ಮಹಿಳೆ” ಯ ವಿಜಯವನ್ನು ಟ್ವಿಟ್ಟರ್ ಬಳಕೆದಾರರು ಶ್ಲಾಘಿಸಿದ್ದಾರೆ.
ಸಾಲ್ಟೋರಾ ಕ್ಷೇತ್ರದಿಂದ ಕಳೆದ ಎರಡು ಬಾರಿ ತೃಣಮೂಲದ ಸ್ವಪನ್ ಬರುಯಿ ಗೆದ್ದಿದ್ದರು.

ಪ್ರಮುಖ ಸುದ್ದಿ :-   ನಟಿ ಸಿದ್ಧಾರ್ಥ- ನಟಿ ಅದಿತಿ ರಾವ್ ಮದುವೆ ಆಗಿಲ್ಲ : ನಿಶ್ಚಿತಾರ್ಥ ಮಾಡಿಕೊಂಡಿದ್ದಾರೆ ; ಸ್ಪಷ್ಟನೆ ನೀಡಿದ ಅದಿತಿ

5 / 5. 4

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement