ಉತ್ತರ ಪ್ರದೇಶ ಪಂಚಾಯತ್ ಚುನಾವಣೆ: ವಾರಾಣಸಿ, ಅಯೋಧ್ಯೆಯಲ್ಲಿ ಮುಗ್ಗರಿಸಿದ ಬಿಜೆಪಿ, ಎಸ್‌ಪಿಗೆ ದೊಡ್ಡ ಗೆಲುವು

ಲಕ್ನೋ: ಬಿಜೆಪಿ ಹಾಗೂ ಸಮಾಜವಾದಿ ಪಕ್ಷ (ಎಸ್‌ಪಿ) ಉತ್ತರ ಪ್ರದೇಶ ಪಂಚಾಯತ ಚುನಾವಣೆಯಲ್ಲಿ ದೊಡ್ಡ ಜಯ ಸಾಧಿಸಿದ್ದೇವೆ ಎಂದು ಹೇಳಿಕೊಂಡಿವೆ.
ಉತ್ತರ ಪ್ರದೇಶದ ಆಡಳಿತವು ತನ್ನ ಅಭ್ಯರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷವು ಜಿಲ್ಲಾ ಪಂಚಾಯಿತಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ತಮ್ಮ ಪಕ್ಷ ಗೆದ್ದಿದೆ ಎಂದು ಹೇಳಿಕೊಂಡಿದೆ.
ಏಪ್ರಿಲ್ 29ರಂದು ಕೊನೆಗೊಂಡು ನಾಲ್ಕು ಹಂತಗಳಲ್ಲಿ ಉತ್ತರ ಪ್ರದೇಶ ಪಂಚಾಯತ ಚುನಾವಣೆ ನಡೆಯಿತು. ಗ್ರಾಮ ಪಂಚಾಯಿತಿ, ಗ್ರಾಮ ಪ್ರಧಾನ್, ಬ್ಲಾಕ್ ಪಂಚಾಯತ್ ಮತ್ತು ಜಿಲಾ ಪಂಚಾಯತ ಎಂಬ ನಾಲ್ಕು ಹಂತಗಳಲ್ಲಿ ಚುನಾವಣೆ ನಡೆಯಿತು.
ಉತ್ತರಪ್ರದೇಶದಲ್ಲಿ ನಡೆದ ಪಂಚಾಯತ ಚುನಾವಣೆಗಳಲ್ಲಿ ಯಾರೂ ಪಕ್ಷದ ಚಿಹ್ನೆಗಳ ಮೇಲೆ ಸ್ಪರ್ಧಿಸಿಲ್ಲ. ಆದಾಗ್ಯೂ, ಎಲ್ಲ ಪಕ್ಷಗಳು ಈ ಚುನಾವಣೆಯಲ್ಲಿ ಅಭ್ಯರ್ಥಿಗಳ ಆಯ್ಕೆ ಮತ್ತು ಚುನಾವಣಾ ಪ್ರಚಾರಗಳಿಂದ ಹಿಡಿದು ಎಲ್ಲವನ್ನೂ ಕೇಂದ್ರೀಕೃತ ವ್ಯವಸ್ಥೆ ರೀತಿಯಲ್ಲಿ ನಿರ್ವಹಿಸಿದ್ದವು.
ಉತ್ತರ ಪ್ರದೇಶದ ರಾಜ್ಯದಲ್ಲಿ ಒಟ್ಟಾರೆಯಾಗಿ ಬಿಜೆಪಿ ಮುನ್ನಡೆಯಲ್ಲಿದೆ ಎಂದು ವರದಿಯಾಗಿದ್ದರೂ, ಅಯೋಧ್ಯೆ ಮತ್ತು ವಾರಣಾಸಿಯ ಪ್ರಮುಖ ಜಿಲ್ಲೆಗಳಲ್ಲಿ ಅದಕ್ಕೆ ಹಿನ್ನೆಡೆಯಾಗಿದೆ ಎಂದು ವರದಿಯಾಗಿದೆ. ಅಯೋಧ್ಯೆಯ 40 ಜಿಲ್ಲಾ ಪಂಚಾಯತ ಸ್ಥಾನಗಳಲ್ಲಿ ಬಿಜೆಪಿ ಕೇವಲ ಆರು ಸ್ಥಾನಗಳನ್ನು ಗೆದ್ದಿದೆ. ಕಳೆದ ವರ್ಷ ರಾಮ ದೇವಾಲಯ ನಿರ್ಮಾಣದ ಯೋಜನೆ ಪ್ರಾರಂಭವಾದ ಅಯೋಧ್ಯೆಯಲ್ಲಿ ಸಮಾಜವಾದಿ ಪಕ್ಷ 24 ಸ್ಥಾನಗಳನ್ನು ಗೆದ್ದುಕೊಂಡಿದೆ. ಬಹುಜನ ಸಮಾಜ ಪಕ್ಷ (ಬಿಎಸ್ಪಿ) ಐದರಲ್ಲಿ ಗೆದ್ದಿದೆ.
ಪ್ರಧಾನಿ ನರೇಂದ್ರ ಮೋದಿಯವರ ಲೋಕಸಭಾ ಕ್ಷೇತ್ರವಾದ ವಾರಾಣಸಿಯಲ್ಲಿ 40 ಜಿಲ್ಲಾ ಪಂಚಾಯತ್ ಸ್ಥಾನಗಳ ಪೈಕಿ ಬಿಜೆಪಿಗೆ ಏಳನ್ನು ಮಾತ್ರ ಗೆಲ್ಲಲು ಸಾಧ್ಯವಾಗಿದೆ. ಸಮಾಜವಾದಿ ಪಕ್ಷವು ವಾರಣಾಸಿಯಲ್ಲಿ ಈ 15 ಸ್ಥಾನಗಳನ್ನು ಗೆದ್ದಿದೆ ಎಂದು ವರದಿಯಾಗಿದೆ
3,050 ಜಿಲ್ಲಾ ಮಟ್ಟದ ಪಂಚಾಯತ್ ವಾರ್ಡ್‌ಗಳಿವೆ. ಜಿಲ್ಲಾ ಪಂಚಾಯಿತಿಗಳಿಗೆ ತಮ್ಮ ಪಕ್ಷದ 918 ಪಕ್ಷದ ಅಭ್ಯರ್ಥಿಗಳು ಆಯ್ಕೆಯಾಗಿದ್ದು, 500ಕ್ಕೂ ಹೆಚ್ಚು ಅಭ್ಯರ್ಥಿಗಳು ಮುನ್ನಡೆಯಲಿದ್ದಾರೆ ಎಂದು ಬಿಜೆಪಿ ಹೇಳಿಕೊಂಡಿದೆ.
ಬಿಜೆಪಿ ಮತ್ತು ಸಮಾಜವಾದಿ ಪಕ್ಷದ ಹೊರತಾಗಿ, ಆಮ್ ಆದ್ಮಿ ಪಕ್ಷ (ಎಎಪಿ) ಕೂಡ ಉತ್ತರ ಪ್ರದೇಶ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಪಕ್ಷದ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಸಿದ್ದಾರೆ ಎಂದು ಹೇಳಿಕೊಂಡಿದೆ. ಎಎಪಿ ಬೆಂಬಲಿತ 70 ಅಭ್ಯರ್ಥಿಗಳನ್ನು ಜಿಲ್ಲಾ ಪಂಚಾಯತ್ ಸದಸ್ಯರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಪಕ್ಷದ ರಾಜ್ಯಸಭಾ ಸಂಸದ ಸಂಜಯ್ ಸಿಂಗ್ ಹೇಳಿದ್ದಾರೆ. 200 ಕ್ಕೂ ಹೆಚ್ಚು ಎಎಪಿ ಸದಸ್ಯರು ಗ್ರಾಮ ಪ್ರಧಾನ್ ಹುದ್ದೆಗಳನ್ನು ಪಡೆದಿದ್ದಾರೆ ಎಂದು ಅವರು ಹೇಳಿದರು.
ಉತ್ತರ ಪ್ರದೇಶದ 75 ಜಿಲ್ಲೆಗಳಲ್ಲಿ 825 ಕ್ಕೂ ಹೆಚ್ಚು ಕೇಂದ್ರಗಳಲ್ಲಿ ಭಾನುವಾರ ಬೆಳಿಗ್ಗೆ ಮತ ಎಣಿಕೆ ಪ್ರಾರಂಭವಾಯಿತು. ಎಲ್ಲಾ ಸ್ಥಾನಗಳನ್ನು ರಾಜ್ಯ ಚುನಾವಣಾ ಆಯೋಗ ಘೋಷಿಸಿಲ್ಲ.
ಈ ಮತದಾನದಲ್ಲಿ 8.69 ಲಕ್ಷಕ್ಕೂ ಹೆಚ್ಚು ಸ್ಥಾನಗಳಿವೆ. ಇವುಗಳಲ್ಲಿ 7.32 ಲಕ್ಷಕ್ಕೂ ಹೆಚ್ಚು ಸೀಟುಗಳು ಗ್ರಾಮ ಪಂಚಾಯಿತಿ ವಾರ್ಡ್‌ಗಳಲ್ಲಿ, 58,176 ಗ್ರಾಮ ಪಂಚಾಯಿತಿಗಳಲ್ಲಿ, ಕ್ಷೇತ್ರ (ಬ್ಲಾಕ್) ಪಂಚಾಯಿತಿಗಳಲ್ಲಿ 75,852 ಮತ್ತು ಜಿಲ್ಲಾ ಪಂಚಾಯಿತಿಗಳಲ್ಲಿ 3,050 ಸ್ಥಾನಗಳಿವೆ.
ಪಂಚಾಯತ್ ಚುನಾವಣೆಯಲ್ಲಿ 3.19 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ರಾಜ್ಯ ಚುನಾವಣಾ ಆಯೋಗ ತಿಳಿಸಿದೆ. 3.27 ಲಕ್ಷ ಪಂಚಾಯತ ಹುದ್ದೆಗಳಿಗೆ ಫಲಿತಾಂಶ ಘೋಷಿಸಲು ಮತಗಳನ್ನು ಎಣಿಸಲಾಗುತ್ತಿದೆ ಎಂದು ಆಯೋಗ ತಿಳಿಸಿದೆ.

ಪ್ರಮುಖ ಸುದ್ದಿ :-   ಐಷಾರಾಮಿ ಕಾರು, ದುಬೈ, ಲಂಡನ್‌ನಲ್ಲಿ ಮನೆ... : ಈ ಬಿಜೆಪಿ ಅಭ್ಯರ್ಥಿ ಆಸ್ತಿ ₹1,400 ಕೋಟಿ

5 / 5. 2

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement