ಜ್ಞಾನವಾಪಿ ಕೇಸ್‌ ಹಿಂಪಡೆಯದಿದ್ರೆ ಕನ್ಹಯ್ಯಲಾಲ್‌ಗೆ ಮಾಡಿದಂತೆ ತಲೆ ಕಡಿಯ್ತೇವೆ: ಫಿರ್ಯಾದಿ ಪತಿಗೆ ಪಾಕಿಸ್ತಾನದಿಂದ ಕೊಲೆ ಬೆದರಿಕೆ

ವಾರಾಣಸಿ: ಪಾಕಿಸ್ತಾನದ ನಂಬರ್‌ ಮೂಲಕ ಕರೆ ಮಾಡಿದ ಅಪರಿಚಿತರು ತಲೆ ಕಡಿಯುವುದಾಗಿ ನಮಗೆ ಬೆದರಿಕೆಯೊಡ್ಡಿದ್ದಾರೆ ಎಂದು ಶೃಂಗಾರ ಗೌರಿ-ಜ್ಞಾನವಾಪಿ ಮಸೀದಿ ಪ್ರಕರಣದಲ್ಲಿ ವಾದಿಯಾಗಿರುವ ಮಹಿಳೆಯ ಪತಿ ವಾರಣಾಸಿ ಪೊಲೀಸರಿಗೆ ದೂರು ನೀಡಿದ್ದು, ಈ ಸಂಬಂಧ ಎಫ್‌ಐಆರ್‌ ದಾಖಲಾಗಿದೆ. ಶೃಂಗಾರ್ ಗೌರಿ-ಜ್ಞಾನವಾಪಿ ಪ್ರಕರಣದ ವಿಚಾರಣೆ ಗುರುವಾರದಿಂದ ಜಿಲ್ಲಾ ನ್ಯಾಯಾಧೀಶರ ನ್ಯಾಯಾಲಯದಲ್ಲಿ ಪುನರಾರಂಭವಾಗಿದೆ. ಸೋಹನ್ ಲಾಲ್ ಆರ್ಯ ಅವರಿಂದ … Continued

ಉತ್ತರ ಪ್ರದೇಶ ಪಂಚಾಯತ್ ಚುನಾವಣೆ: ವಾರಾಣಸಿ, ಅಯೋಧ್ಯೆಯಲ್ಲಿ ಮುಗ್ಗರಿಸಿದ ಬಿಜೆಪಿ, ಎಸ್‌ಪಿಗೆ ದೊಡ್ಡ ಗೆಲುವು

ಲಕ್ನೋ: ಬಿಜೆಪಿ ಹಾಗೂ ಸಮಾಜವಾದಿ ಪಕ್ಷ (ಎಸ್‌ಪಿ) ಉತ್ತರ ಪ್ರದೇಶ ಪಂಚಾಯತ ಚುನಾವಣೆಯಲ್ಲಿ ದೊಡ್ಡ ಜಯ ಸಾಧಿಸಿದ್ದೇವೆ ಎಂದು ಹೇಳಿಕೊಂಡಿವೆ. ಉತ್ತರ ಪ್ರದೇಶದ ಆಡಳಿತವು ತನ್ನ ಅಭ್ಯರ್ಥಿಗಳಿಗೆ ಪ್ರಮಾಣಪತ್ರಗಳನ್ನು ನೀಡುತ್ತಿಲ್ಲ ಎಂದು ಆರೋಪಿಸಿರುವ ಸಮಾಜವಾದಿ ಪಕ್ಷವು ಜಿಲ್ಲಾ ಪಂಚಾಯಿತಿಗಳಲ್ಲಿ ಅರ್ಧಕ್ಕಿಂತ ಹೆಚ್ಚು ಸ್ಥಾನಗಳನ್ನು ತಮ್ಮ ಪಕ್ಷ ಗೆದ್ದಿದೆ ಎಂದು ಹೇಳಿಕೊಂಡಿದೆ. ಏಪ್ರಿಲ್ 29ರಂದು ಕೊನೆಗೊಂಡು ನಾಲ್ಕು … Continued

ಲೋಕಸಭೆ ಚುನಾವಣೆಯಲ್ಲಿ ದೀದಿ ವಾರಾಣಸಿ ಸ್ಪರ್ಧೆ: ಜೈ ಶ್ರೀರಾಂ ಘೋಷಣೆಯೊಂದಿಗೆ ಮೋದಿ ಆಹ್ವಾನ

2024ರಲ್ಲಿ ವಾರಾಣಸಿಯಿಂದ ಪ್ರಧಾನಿ ಮೋದಿ ವಿರುದ್ಧ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸ್ಪರ್ಧಿಸಲಿದ್ದಾರೆ ಎಂದು ತೃಣಮೂಲ ಕಾಂಗ್ರೆಸ್‌ ಶುಕ್ರವಾರ ಹೇಳಿದ ಬೆನ್ನಲ್ಲೇ ಜೈ ಶ್ರೀರಾಮ್ ಘೋಷಣೆಯೊಂದಿಗೆ ಮಮತಾ ಬ್ಯಾನರ್ಜಿಯವರನ್ನು ತಮ್ಮ ವಿರುದ್ಧ ವಾರಾಣಸಿಯಲ್ಲಿ ಸ್ಪರ್ಧಿಸಲು ಆಹ್ವಾನಿಸಿದ್ದಾರೆ. ಪಶ್ಚಿಮ ಬಂಗಾಳದ ದಕ್ಷಿಣ 24 ಪರಗಣದ ಸನರ್ಪುರದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಚುನಾವಣಾ ಸಮಾವೇಶದಲ್ಲಿ ಶನಿವಾರ ಮಾತನಾಡಿದ … Continued

೨೦೨೪ರ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿಯಲ್ಲಿ ಮೋದಿ ವಿರುದ್ಧ ದೀದಿ ಸ್ಪರ್ಧೆ: ಟಿಎಂಸಿ

ಕೋಲ್ಕತ್ತ: ನಂದಿಗ್ರಾಮ ಕ್ಷೇತ್ರದಲ್ಲಿ ಟಿಎಂಸಿ ಅಧ್ಯಕ್ಷೆ ಮಮತಾ ಬ್ಯಾನರ್ಜಿ ಗೆಲ್ಲುವುದು ಖಚಿತವಾಗಿದ್ದು, ಮುಂದಿನ ಲೋಕಸಭಾ ಚುನಾವಣೆಯಲ್ಲಿ ದೀದಿ ಪ್ರಧಾನಿ ಮೋದಿ ವಿರುದ್ಧ ವಾರಾಣಸಿಯಲ್ಲಿ ಕಣಕ್ಕಿಳಿಯಲಿದ್ದಾರೆ ಎಂದು ಟಿಎಂಸಿ ತಿಳಿಸಿದೆ. ನಂದಿಗ್ರಾಮದಲ್ಲಿ ಸೋಲುವ ಮಾತೇ ಇಲ್ಲ. ಬೇರೆ ಕ್ಷೇತ್ರದಲ್ಲಿ ಅವರು ಸ್ಪರ್ಧಿಸುವ ಅವಶ್ಯಕತೆಯಿಲ್ಲ. ಮಮತಾ ಬ್ಯಾನರ್ಜಿ ಮುಂದಿನ ಲೋಕಸಭಾ ಚುನಾವಣೆಯಲ್ಲಿ ವಾರಾಣಸಿಯಿಂದ ಸೆಣೆಸಲಿದ್ದು, ಮೋದಿಯವರು ಸುರಕ್ಷಿತ ಕ್ಷೇತ್ರ … Continued