ಮಾಸ್ಕೋದಲ್ಲಿ ಅಮೆರಿಕ ಸೇನಾ ವಿಮಾನ ಲ್ಯಾಂಡಿಂಗ್‌ ; ʼತನಗೆ ಗೊತ್ತೆ ಇಲ್ಲ’ ಎಂದ ರಷ್ಯಾ ; ಈ ರಹಸ್ಯ ಹಾರಾಟದ ಮರ್ಮವೇನು?

ಮಾಸ್ಕೋ: ಅಮೆರಿಕ ವಾಯುಪಡೆಯ ಬೋಯಿಂಗ್ C-17A ಗ್ಲೋಬ್‌ಮಾಸ್ಟರ್ III (Globemaster III) ಎಂಬ ಭಾರೀ ಸೇನಾ ಸರಕು ಸಾಗಣೆ ವಿಮಾನ ಸೋಮವಾರ ಬೆಳಿಗ್ಗೆ ರಷ್ಯಾದ ರಾಜಧಾನಿ ಮಾಸ್ಕೋದಲ್ಲಿ ಇಳಿದಿರುವುದು ಜಾಗತಿಕ ಮಟ್ಟದಲ್ಲಿ ಕುತೂಹಲ ಮತ್ತು ಊಹಾಪೋಹಗಳಿಗೆ ಕಾರಣವಾಗಿದೆ. ವಿಮಾನದ ಆಗಮನದ ಕುರಿತು ರಷ್ಯಾ ತನಗೆ ಯಾವುದೇ ಮಾಹಿತಿ ಇಲ್ಲ ಎಂದು ಅಧಿಕಾರಿಗಳು ಹೇಳಿರುವುದು ಮತ್ತಷ್ಟು ಚರ್ಚೆಗೆ … Continued

ರಷ್ಯಾದ ತೈಲ ಖರೀದಿಗೆ ಭಾರತದ ಮೇಲೆ ಟ್ರಂಪ್‌ ಸುಂಕದ ಟಾರ್ಗೆಟ್‌ ಮಧ್ಯೆ ಪುತಿನ್ ಶೀಘ್ರವೇ ಭಾರತಕ್ಕೆ ಭೇಟಿ

ನವದೆಹಲಿ: ರಷ್ಯಾದ ಅಧ್ಯಕ್ಷ ವ್ಲಾದಿಮಿರ್ ಪುತಿನ್ ಶೀಘ್ರದಲ್ಲೇ ಭಾರತಕ್ಕೆ ಭೇಟಿ ನೀಡಲಿದ್ದಾರೆ ಎಂದು ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ ದೋವಲ್ ಮಾಸ್ಕೋ ಭೇಟಿಯ ಸಂದರ್ಭದಲ್ಲಿ ತಿಳಿಸಿದ್ದಾರೆ. ದಿನಾಂಕಗಳು ಇನ್ನೂ ಅಂತಿಮಗೊಳ್ಳದಿದ್ದರೂ, ಈ ವರ್ಷ ಭೇಟಿ ನಡೆಯುವ ಸಾಧ್ಯತೆಯಿದೆ ಎಂದು ರಷ್ಯಾದ ರಾಜ್ಯ ಸುದ್ದಿ ಸಂಸ್ಥೆ ಸ್ಪುಟ್ನಿಕ್ ವರದಿ ಮಾಡಿದೆ. “ನಮ್ಮಲ್ಲಿ ವಿಶೇಷ ಹಾಗೂ ಸುದೀರ್ಘ ಸಂಬಂಧವಿದೆ … Continued

ರಷ್ಯಾದ ವಿಮಾನ ಪತನ ; ವಿಮಾನದಲ್ಲಿದ್ದ ಎಲ್ಲಾ 49 ಮಂದಿ ಸಾವು

ಮಾಸ್ಕೋ: ಐದು ಮಕ್ಕಳು ಮತ್ತು ಆರು ಸಿಬ್ಬಂದಿ ಸೇರಿದಂತೆ 49 ಜನರನ್ನು ಹೊತ್ತೊಯ್ಯುತ್ತಿದ್ದ ರಷ್ಯಾದ ಆನ್ -24 ವಿಮಾನವು ಗುರುವಾರ ಸೈಬಿರಿಯಾದ ಪರ್ವತ ಅಮುರ್ ಪ್ರದೇಶದಲ್ಲಿ ಪತನಗೊಂಡಿದ್ದು, ವಿಮಾನದಲ್ಲಿದ್ದ ಎಲ್ಲರೂ ಸತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮ ವರದಿಗಳು ತಿಳಿಸಿವೆ. ಸೈಬೀರಿಯಾ ಮೂಲದ ಅಂಗಾರ ಏರ್ಲೈನ್ಸ್ ನಿರ್ವಹಿಸುತ್ತಿದ್ದ ಈ ದುರದೃಷ್ಟಕರ ವಿಮಾನವು ಬ್ಲಾಗೊವೆಶ್ಚೆನ್ಸ್ಕ್ ನಿಂದ ಹೊರಟು ರಷ್ಯಾ-ಚೀನಾ … Continued

ರಷ್ಯಾ-ಉಕ್ರೇನ್ ಯುದ್ಧದಿಂದ ಮನನೊಂದು ಕಾಶಿಗೆ ಬಂದು ದೀಕ್ಷೆ ಪಡೆದ ರಷ್ಯಾದ ಮಹಿಳೆ: ಹೆಸರೂ ಬದಲಾಯ್ತು…!

ಎರಡು ವರ್ಷಗಳಿಂದ ತೀವ್ರವಾಗಿ ಸಾಗುತ್ತಿರುವ ಯುದ್ದದಿಂದ ಬೇಸತ್ತು ಮಾನಸಿಕ ನೆಮ್ಮದಿಯನ್ನು ಅರಸಿ ರಷ್ಯಾದ ಮಹಿಳೆಯೋರ್ವರು ಉತ್ತರ ಪ್ರದೇಶದ ವಾರಣಾಸಿಗೆ ಬಂದು ತಾಂತ್ರಿಕ ದೀಕ್ಷೆಯನ್ನು ಪಡೆದುಕೊಂಡಿದ್ದಾರೆ. ರಷ್ಯಾ – ಉಕ್ರೇನ್ ಯುದ್ಧದಿಂದ ತುಂಬಾ ನೊಂದು ಮನಃಶಾಂತಿಯನ್ನು ಅರಸಿಕೊಂಡು ಭಾರತಕ್ಕೆ ಬಂದಿದ್ದ ನನಗೆ ದೀಕ್ಷೆ ಪಡೆದ ನಂತರ ನನ್ನ ಮನಸ್ಸು ಹಗುರವಾಗಿದೆ ಎಂದು ಇಂಗಾನಂದಮಯಿ ಹೇಳಿದ್ದಾರೆ. ರಷ್ಯಾದ ಮಾಸ್ಕೋ … Continued