ರಷ್ಯಾ-ಉಕ್ರೇನ್ ಯುದ್ಧದಿಂದ ಮನನೊಂದು ಕಾಶಿಗೆ ಬಂದು ದೀಕ್ಷೆ ಪಡೆದ ರಷ್ಯಾದ ಮಹಿಳೆ: ಹೆಸರೂ ಬದಲಾಯ್ತು…!

ಎರಡು ವರ್ಷಗಳಿಂದ ತೀವ್ರವಾಗಿ ಸಾಗುತ್ತಿರುವ ಯುದ್ದದಿಂದ ಬೇಸತ್ತು ಮಾನಸಿಕ ನೆಮ್ಮದಿಯನ್ನು ಅರಸಿ ರಷ್ಯಾದ ಮಹಿಳೆಯೋರ್ವರು ಉತ್ತರ ಪ್ರದೇಶದ ವಾರಣಾಸಿಗೆ ಬಂದು ತಾಂತ್ರಿಕ ದೀಕ್ಷೆಯನ್ನು ಪಡೆದುಕೊಂಡಿದ್ದಾರೆ. ರಷ್ಯಾ – ಉಕ್ರೇನ್ ಯುದ್ಧದಿಂದ ತುಂಬಾ ನೊಂದು ಮನಃಶಾಂತಿಯನ್ನು ಅರಸಿಕೊಂಡು ಭಾರತಕ್ಕೆ ಬಂದಿದ್ದ ನನಗೆ ದೀಕ್ಷೆ ಪಡೆದ ನಂತರ ನನ್ನ ಮನಸ್ಸು ಹಗುರವಾಗಿದೆ ಎಂದು ಇಂಗಾನಂದಮಯಿ ಹೇಳಿದ್ದಾರೆ.
ರಷ್ಯಾದ ಮಾಸ್ಕೋ ನಿವಾಸಿಯಾಗಿರುವ ಇಂಗಾ ಬರದೋಶ್ ಎಂಬ ಮಹಿಳೆ ಬುಧವಾರ ವಾರಣಾಸಿಯಲ್ಲಿ ಸನಾತನ ಧರ್ಮದ ತಾಂತ್ರಿಕ ದೀಕ್ಷೆ ಪಡೆದಿದ್ದಾರೆ ಹಾಗೂ ದೀಕ್ಷೆ ಪಡೆದ ನಂತರ ಇಂಗಾನಂದಮಯಿ ಮಾ ಆಗಿದ್ದಾರೆ.
ತಂತ್ರ ದೀಕ್ಷೆಯ ನಂತರ ಇಂಗಾ ಅವರ ಗೋತ್ರವೂ ಕಶ್ಯಪ ಗೋತ್ರವಾಯಿತು. ಮಹಾಮಹೋಪಾಧ್ಯಾಯ ಪ್ರೊ. ಭಗೀರಥ ಪ್ರಸಾದ ತ್ರಿಪಾಠಿ ಸ್ಥಾಪಿಸಿದ ವಾಗ್ಯೋಗ ಚೇತನ ಪೀಠಂ ಶಿವಾಲಯದಲ್ಲಿ ಬುಧವಾರ ನಡೆದ ಧಾರ್ಮಿಕ ವಿಧಿ ವಿಧಾನದಲ್ಲಿ ರಷ್ಯಾದ ಇಂಗಾ ಬರದೋಶ್ ಎಂಬ ಮಹಿಳೆಗೆ ತಂತ್ರ ದೀಕ್ಷೆಯನ್ನು ಪೂರ್ಣಗೊಳಿಸಲಾಯಿತು.

ಕಾಶಿಯ ಶಿವಾಳದಲ್ಲಿರುವ ವಾಗ್ಯೋಗ ಚೇತನ ಪೀಠದಲ್ಲಿ ಪಂ.ಆಶಾಪತಿ ಶಾಸ್ತ್ರಿ ಅವರು ರಷ್ಯಾ ಮಹಿಳೆ ಇಂಗಾ ಬರದೋಷ್ ಅವರಿಗೆ ಮಾತಾ ಸಿದ್ಧಿದಾತ್ರಿಯ ತಾಂತ್ರಿಕ ದೀಕ್ಷೆ ನೀಡಿದರು. ಇಂಗಾ ಅವರು ತಮ್ಮ ಜನ್ಮದಿನದಂದು ಮಂತ್ರ ದೀಕ್ಷೆ ತೆಗೆದುಕೊಳ್ಳಲು ಕಾಶಿಗೆ ಬಂದಿದ್ದರು. ಇಂಗ ಬರದೋಷ್ ಹಳದಿ ಸೀರೆಯಲ್ಲಿ ಸಂಪೂರ್ಣವಾಗಿ ಸನಾತನಿಯಾಗಿ ಕಾಣುತ್ತಿದ್ದರು. ಅವರು ತುಂಬಾ ಭಾವುಕರಾಗಿದ್ದರು. ಆಚರಣೆ ಮತ್ತು ಗುರುಮಂತ್ರದ ದೀಕ್ಷೆ ತೆಗೆದುಕೊಂಡ ನಂತರ, ಇಂಗಾ ಅವರ ಹೆಸರು ಮತ್ತು ಗೋತ್ರವೂ ಬದಲಾಯಿತು.
ಈಗ ಇಂಗಾ ಬರದೋಶ್ ಸನಾತನ ಸಂಪ್ರದಾಯದಂತೆ ಇಂಗಾನಂದಮಯಿ ಮಾ ಎಂದು ಕರೆಯಲ್ಪಡುತ್ತಾರೆ ಮತ್ತು ಅವರ ಗೋತ್ರ ಕಶ್ಯಪ ಗೋತ್ರವಾಗಿ ಮಾರ್ಪಟ್ಟಿದೆ. ಪಂಡಿತ ಆಶಾಪತಿ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಪಂಡಿತ ಸತ್ಯಂ ಶಾಸ್ತ್ರಿ, ಪಂಡಿತ ಶಿವಪ್ರಸಾದ್ ಶಾಸ್ತ್ರಿ ಮತ್ತು ಗಂಗಾ ಪ್ರಸಾದ ಶಾಸ್ತ್ರಿ ಅವರಿಂದ ಪೂಜೆ ನೆರವೇರಿತು. ಇಂಗಾ ಜನವರಿ 2012 ರಲ್ಲಿ ಗುರುದೇವ ವಾಗೀಶ್ ಶಾಸ್ತ್ರಿ ಅವರ ಮಾರ್ಗದರ್ಶನದಲ್ಲಿ ಶಕ್ತಿಪಥದ ಮೂಲಕ ಕುಂಡಲಿನಿ ಧ್ಯಾನವನ್ನು ಅಧ್ಯಯನ ಮಾಡಿದ್ದರು.

ಪ್ರಮುಖ ಸುದ್ದಿ :-   "ಚಾಣಕ್ಯ ಕೂಡ...: ತನ್ನ ಲುಕ್‌ ಬಗ್ಗೆ ಟ್ರೋಲ್‌ ಮಾಡಿದವರ ಬಾಯ್ಮುಚ್ಚಿಸಿದ ಬೋರ್ಡ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದ ವಿದ್ಯಾರ್ಥಿನಿ

ಆದರೆ, ಸಮಯದ ಅಭಾವದಿಂದ ಆಕೆಗೆ ಧ್ಯಾನವನ್ನು ಪೂರ್ಣಗೊಳಿಸಲಾಗಲಿಲ್ಲ. ಈ ವರ್ಷ ಅವರು ಗುರುದೇವ ಆಶಾಪತಿಯ ಮಾರ್ಗದರ್ಶನದಲ್ಲಿ ಮಂತ್ರ ದೀಕ್ಷೆಯನ್ನು ತೆಗೆದುಕೊಳ್ಳುವ ಬಯಕೆಯನ್ನು ವ್ಯಕ್ತಪಡಿಸಿದರು. ಕಾರ್ಯವಿಧಾನದ ಪ್ರಕಾರ, ಇಂಗಾ ಅವರನ್ನು ಐದು ದಿನಗಳ ಕಾಲ ಏಕಾಂತದಲ್ಲಿ ಮಾ ಸಿದ್ಧಿದಾತ್ರಿ ಸಾನಿಧ್ಯದಲ್ಲಿ ಸಾಧನೆ ಮಾಡಲು ಸೂಚಿಸಲಾಯಿತು.
ಐದು ದಿನಗಳಲ್ಲಿ ಅವರು ಪಡೆದ ಅನುಭವಗಳ ಪ್ರಕಾರ, ಅವರು ಮಾತಾ ಸಿದ್ಧಿದಾತ್ರಿಯಿಂದ ದೀಕ್ಷೆಯನ್ನು ತೆಗೆದುಕೊಳ್ಳಲು ನಿರ್ಧರಿಸಿದರು. ಇಂಗಾ ಅವರು ದೇವರಲ್ಲಿ ಆಶ್ರಯ ಪಡೆಯಲು ಮತ್ತು ಉನ್ನತ ಆಧ್ಯಾತ್ಮಿಕ ಅಭ್ಯಾಸಕ್ಕಾಗಿ ಮಂತ್ರದಲ್ಲಿ ದೀಕ್ಷೆಯನ್ನು ತೆಗೆದುಕೊಂಡಿರುವುದಾಗಿ ಹೇಳಿದ್ದಾರೆ. ಪ್ರಸ್ತುತ ಅವರು ರಷ್ಯಾ-ಉಕ್ರೇನ್ ಯುದ್ಧದಿಂದ ತುಂಬಾ ನೊಂದಿದ್ದಾರೆ ಮತ್ತು ಅದರ ಶಾಂತಿಗಾಗಿ ತಾಯಿ ಸಿದ್ಧಿದಾತ್ರಿಯನ್ನು ಪ್ರಾರ್ಥಿಸುತ್ತಾರೆ.

5 / 5. 3

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement