2ರ ಮಗ್ಗಿ ಹೇಳಲು ಬಾರದ ವರ… ವಿವಾಹ ಮಂಟಪದಿಂದ ಹೊರ ನಡೆದಳು ವಧು..!!

ಮಹೋಬಾ (ಉತ್ತರ ಪ್ರದೇಶ):ಸರಳವಾದ ‘ಗಣಿತ ಪರೀಕ್ಷೆಯು ವಿವಾಹವನ್ನೇ ಭೀಕರವಾಗಿಸುತ್ತದೆ ಎಂದು ಯಾರಾದರೂ ಊಹಿಸಲು ಸಾಧ್ಯವೇ.?
ಖಂಡಿತವಾಗಿಯೂ ಯಾರೂ ಊಹೆಮಾಡಿರುವುದಿಲ್ಲ. ಆದರೆ ಇಂತಹ ಅಭೂತಪೂರ್ವ ಘಟನೆಗೆ ಉತ್ತರ ಪ್ರದೇಶದ ಯುವಕನ ಮಧುವೆ ಸಾಕ್ಷಿಯಾಗಿದೆ..!
ಉತ್ತರ ಪ್ರದೇಶದ ಮಹೋಬಾ ಜಿಲ್ಲೆಯ ಯುವಕ ಶನಿವಾರ ಸಂಜೆ ತಮ್ಮ ‘ ಮದುವೆ ದಿಬ್ಬಣದೊಂದಿಗೆ ವಿವಾಹ ಮಂಟಪವನ್ನು ತಲುಪಿಪಿದ್ದರು. ಆದರೆ ಇನ್ನೇನು ಮದುವೆಯಾಗಬೇಕು ಎಂಬಷ್ಟರಲ್ಲಿ ವಧುವಿಗೆ ವರನ ಶೈಕ್ಷಣಿಕ ಅರ್ಹತೆ ಬಗ್ಗೆ ಅನುಮಾನ ಬಂದಿದೆ. ಹೀಗಾಗಿ ವಧುವು ವರನ ಜೊತೆ ಹೂಮಾಲೆ ಪರಸ್ಪರ ವಿನಿಮಯ ಮಾಡಿಕೊಳ್ಳುವ ಮೊದಲು ವರನ ಶೈಕ್ಷಣಿಕ ಅರ್ಹತೆಗಳ ಬಗ್ಗೆ ಅನುಮಾನವಿದ್ದ ವಧು, ವರನಿಗೆ 2 ರ ಮಗ್ಗಿ ಹೇಳುವಂತೆ ಕೇಳಿಕೊಂಡಿದ್ದಾಳೆ. ಆದರೆ ಇದು ವರನ ದುದೃಷ್ಟವೋ ಅಥವಾ ವಧುವಿನ ದುರದೃಷ್ಟವೋ ವರ ಮಹಾಶಯ 2 ರ ಮಗ್ಗಿ ಹೇಳಲು ವಿಫಲನಾಗಿದ್ದಾನೆ.ತಕ್ಷಣವೇ ವಧು ಮಂಪ ಬಿಟ್ಟು ನಡೆದಿದ್ದಾಳೆ..!
ನಂತರ ಮದುವೆ ನಿಲ್ಲಿಸಲಾಯಿತು.
ಈ ಘಟನೆ ಕುರಿತು ಪನ್ವಾರಿ ಸ್ಟೇಷನ್ ಹೌಸ್ ಆಫೀಸರ್ ವಿನೋದ್ ಕುಮಾರ್ ಮಾತನಾಡಿ, ಇದು ವ್ಯವಸ್ಥಿತ ವಿವಾಹವಾಗಿದ್ದು, ವರ ಮಹೋಬಾ ಜಿಲ್ಲೆಯ ಧವಾರ್ ಗ್ರಾಮದವರು. ಎರಡು ಕುಟುಂಬಗಳ ಸದಸ್ಯರು ಮತ್ತು ಹಲವಾರು ಗ್ರಾಮಸ್ಥರು ಮದುವೆ ಸ್ಥಳದಲ್ಲಿ ಜಮಾಯಿಸಿದ್ದರು. ವಿವಾಹವು ಇನ್ನೇನು ನಡೆಯುತ್ತದೆ ಎನ್ನುವಾಗ ವರನು ಗಣಿತದ ಮೂಲಭೂತ ಅಂಶಗಳನ್ನು ಸಹ ತಿಳಿದಿಲ್ಲದ ಕಾರಣ ತಾನು ಇಂಥ ವ್ಯಕ್ತಿಯನ್ನು ಮದುವೆಯಾಗಲು ಸಾಧ್ಯವಿಲ್ಲ ಎಂದು ವಧು ಮಂಟಪದಿಂದ ಹೊರನಡೆದಳು, ವಧುವನ್ನು ಮನವೊಲಿಸುವಲ್ಲಿ ಸ್ನೇಹಿತರು ಮತ್ತು ಸಂಬಂಧಿಕರು ವಿಫಲರಾಗಿದ್ದಾರೆ.
ವರನು ಅಶಿಕ್ಷಿತ ಎಂದು ತಿಳಿದು ವಧು ಆಘಾತಕ್ಕೆ ಒಳಗಾಗಿದ್ದಾಳೆ, ನಾವೂ ಆಘಾತಕ್ಕೊಳಗಾಗಿದ್ದೇವೆ ಎಂದು ವಧುವಿನ ಸೋದರಸಂಬಂಧಿ ಹೇಳಿದರು. “ವರನ ಕುಟುಂಬವು ಅವನ ಶಿಕ್ಷಣದ ಬಗ್ಗೆ ನಮ್ಮನ್ನು ಕತ್ತಲೆಯಲ್ಲಿರಿಸಿದೆ. ಅವನು ಶಾಲೆಗೆ ಹೋಗದಿರಬಹುದು.ಅ ಆದರೆ ವರನ ಕುಟುಂಬ ನಮಗೆ ಮೋಸ ಮಾಡಿತ್ತು. ಆದರೆ ನನ್ನ ಧೈರ್ಯಶಾಲಿ ಸಹೋದರಿ ಸಾಮಾಜಿಕ ನಿಷೇಧಕ್ಕೆ ಹೆದರದೆ ಹೊರನಡೆದರು, ”ಎಂದು ಅವರು ಹೇಳಿದ್ದಾರೆ.
ಗ್ರಾಮದ ಪ್ರಮುಖರ ಮಧ್ಯಸ್ಥಿಕೆಯಿಂದ ಎರಡೂ ಪಕ್ಷಗಳು ರಾಜಿ ಮಾಡಿಕೊಂಡ ನಂತರ ಪೊಲೀಸರು ಪ್ರಕರಣ ದಾಖಲಿಸಲಿಲ್ಲ.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

4.7 / 5. ಒಟ್ಟು ವೋಟುಗಳು 3

ನಿಮ್ಮ ಕಾಮೆಂಟ್ ಬರೆಯಿರಿ