ಪಿಪಿಇ ಕಿಟ್ ಧರಿಸಿ ಕೋವಿಡ್ ಸೋಂಕಿತರ ಮಧ್ಯೆ ಓಡಾಡಿ ಆರೋಗ್ಯ ವಿಚಾರಿಸಿದ ಸಚಿವರು..!

ಚಾಮರಾಜನಗರ: ಚಾಮರಾಜನಗರ ಜಿಲ್ಲಾಸ್ಪತ್ರೆಗೆ ಭೇಟಿ ನೀಡಿದ ಸಚಿವ ಸುರೇಶ್‌ಕುಮಾರ್, ವೈಯಕ್ತಿಕ ಆರೋಗ್ಯ ಲೆಕ್ಕಿಸದೇ ತಾವೇ ಸ್ವತಃ ಪಿಪಿಇ ಕಿಟ್ ಧರಿಸಿ ಕೋವಿಡ್ ವಾರ್ಡಿನೊಳಗೆಲ್ಲಾ ಓಡಾಡಿದರು.
ವ್ಯವಸ್ಥೆಯನ್ನು ಖುದ್ದಾಗಿ ಪರಾಮರ್ಶಿಸಿದ ಸಚಿವರು ಯಾವುದೇ ಸಮಸ್ಯೆಗಳಾಗದ ರೀತಿಯಲ್ಲಿ ಕೆಲಸ‌ ಮಾಡಬೇಕೆಂದು ಸೂಚನೆ ನೀಡಿದರು.
ಬುಧವಾರ 167 ಕೋವಿಡ್ ಸೋಂಕಿತರು ಚಾಮರಾಜನಗರ ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, 26 ಜನ ವೆಂಟಿಲೇಟರ್ ಮೇಲಿದ್ದಾರೆ. ಐಸಿಯು ವಾರ್ಡ್ ನಲ್ಲಿ 47 ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ. ಸಚಿವರೇ ಪ್ರತಿಯೊಬ್ಬರನ್ನೂ ಖುದ್ದಾಗಿ ಭೇಟಿ ಮಾಡಿ ಅವರಿಂದ ಮಾಹಿತಿ ಪಡೆದರು ಸಕಾಲಕ್ಕೆ ಆರೈಕೆ ದೊರೆಯುತ್ತಿದೆಯಾ? ಸಮಸ್ಯೆ ಆದ ತಕ್ಷಣ‌ ಪರಿಹಾರಕ್ಕೆ ಪ್ರಯತ್ನ ನಡೀತಿದೆಯಾ? ಎಂದು‌ ಪ್ರಶ್ನಿಸಿ ಎಲ್ಲರಿಂದ ಮಾಹಿತಿ ಪಡೆದ ಅವರು ಎಲ್ಲರಿಗೂ ಶೀಘ್ರ ಗುಣಮುಖರಾಗಲೆಂದು ಹಾರೈಸಿದರು.
ಕೆಲವು ಸೋಂಕಿತರ ಆಮ್ಲಜನಕ ಸ್ಯಾಚುರೇಚನ್‌ ವೈದ್ಯಾಧಿಕಾರಿಗಳ ಸಹಾಯದೊಂದಿಗೆ ತಾವೇ‌ ಖುದ್ದಾಗಿ ಪರೀಕ್ಷಿಸಿದ ಸುರೇಶ್‌ಕುಮಾರ್ ಕೆಲ ತಿಂಗಳ ಹಿಂದೆ‌ ನಿಮ್ಮ ಥರ ನಾನೂ ಕೋವಿಡ್ ಸೋಂಕಿತನಾಗಿದ್ದೆ. ನನ್ನ ಶ್ವಾಸಕೋಶವೂ ತೀವ್ರವಾದ ಸೋಂಕಿಗೊಳಗಾಗಿತ್ತು. ಧೃತಿಗೆಡದಿದ್ದರೆ‌ ಅದು ನಮ್ಮನ್ನು ಹೆದರಿಸಲು ಸಾಧ್ಯವಿಲ್ಲ ಎಂದು ವಿಶ್ವಾಸ ಮೂಡಿಸುವ ಪ್ರಯತ್ನ ಮಾಡಿದರು.
ಕೋವಿಡ್ ಸೋಂಕಿತ ಬಾಣಂತಿ -ಮಗು ಭೇಟಿ:
ಕೋವಿಡ್ ಪೀಡಿತ ಮಹಿಳೆಗೆ ಬುಧವಾರ ಬೆಳಗ್ಗೆಯಷ್ಟೇ ಹೆರಿಗೆಯಾಗಿದ್ದು, ತಾಯಿ ಮಗುವನ್ನೂ ಸಹ ಸುರೇಶ್ ಕುಮಾರ್ ಭೇಟಿ ಮಾಡಿ ಾರೋಗ್ಯ ವಿಚಾರಿಸಿದರು. ಸರ್ಕಾರಿ ನೌಕರರು, ಶಿಕ್ಷಕರು‌ ಸೇರಿದಂತೆ ನೂರಾರು ಸಾರ್ವಜನಿಕರು ಕೋವಿಡ್ ಚಿಕಿತ್ಸೆಯನ್ನು ಪಡೆಯುತ್ತಿದ್ದು, ಸಮರ್ಪಕ ಸೌಲಭ್ಯಗಳು ದೊರೆಯುತ್ತಿರುವ ಬಗ್ಗೆ ಅವರೆಲ್ಲರಿಂದ ಮಾಹಿತಿ ಪಡೆದರು.

ಪ್ರಮುಖ ಸುದ್ದಿ :-   ಯಕ್ಷಗಾನದ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement