ಬೆಡ್ ಬ್ಲಾಕಿಂಗ್ ದಂಧೆಗೆ ಕಡಿವಾಣಕ್ಕೆ ಸಾಫ್ಟವೇರ್‌ ಸುಧಾರಣೆ

posted in: ರಾಜ್ಯ | 0

ಬೆಂಗಳೂರು: ಬೆಡ್ ಬ್ಲಾಕಿಂಗ್‍ಗೆ ಕಡಿವಾಣ ಹಾಕುವ ಉದ್ದೇಶದಿಂದ ಸಾಫ್ಟವೇರ್‌ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತಾ ತಿಳಿಸಿದರು.
ಬುಧವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈಗ ಬಳಕೆ ಮಾಡುತ್ತಿರುವ ಸಾಫ್ಟವೇರ್‌ ಹಿಂದಿನ ವರ್ಷದ್ದು ಹೀಗಾಗಿ ಸಾಫ್ಟವೇರ್‌ ಸುಧಾರಣೆಗಾಗಿ ಒಂದು ತಾಂತ್ರಿಕ ಸಮಿತಿ ರಚಿಸಲಾಗಿದೆ. ಸಮಿತಿ ಬುಧವಾರವೇ ವರದಿ ನೀಡಲಿದ್ದು, ವರದಿಯನ್ನಾಧರಿಸಿ ತಂತ್ರಾಂಶ ಸುಧಾರಣೆ ಮಾಡುತ್ತೇವೆ. ಈ ಕಾರ್ಯದ ನಂತರ ಬೆಡ್ ಬ್ಲಾಕಿಂಗ್‍ಗೆ ಅವಕಾಶ ಇರುವುದಿಲ್ಲ ಎಂದರು.
ಇದರ ಜೊತೆಗೆ ವಾರ್ ರೂಮುಗಳಲ್ಲಿ ಕೆಎಎಸ್ ಮಟ್ಟದ ಅಧಿಕಾರಿಗಳನ್ನು ನಿಯೋಜಿಸಲು ಕ್ರಮ ಕೈಗೊಳ್ಳಲಾಗಿದೆ. ತಪ್ಪು ಮಾಡಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
11 ಸಾವಿರ ಬೆಡ್ ಇದೆ. ಜನರಲ್ ಬೆಡ್‍ಗಳನ್ನು ಆಕ್ಸಿಜನ್ ಬೆಡ್‍ಗಳನ್ನಾಗಿ ಪರಿವರ್ತಿಸುವ ಕಾರ್ಯವನ್ನು ತ್ವರಿತಗೊಳಿಸಲಾಗಿದೆ ಎಂದು ತಿಳಿಸಿದರು.

ಮೇಲಿನ ಸುದ್ದಿಗೆ ರೇಟಿಂಗ್ ನೀಡಿ

0 / 5. ಒಟ್ಟು ವೋಟುಗಳು 0

ನಿಮ್ಮ ಕಾಮೆಂಟ್ ಬರೆಯಿರಿ