ಡಿಆರ್‌ಡಿಒದಿಂದ ದೆಹಲಿಯಲ್ಲಿ 2 ಆಮ್ಲಜನಕ ಸ್ಥಾವರ ಸ್ಥಾಪನೆ, ಪ್ರತಿಯೊಂದರಿಂದ ಪ್ರತಿ ನಿಮಿಷಕ್ಕೆ 1,000 ಲೀಟರ್ ಆಮ್ಲಜನಕ ಉತ್ಪಾದನೆ

ನವದೆಹಲಿಯ ಏಮ್ಸ್ನಲ್ಲಿ ಹೊಸದಾಗಿ ಸ್ಥಾಪಿಸಲಾದ ಆಮ್ಲಜನಕ ಘಟಕದೊಂದಿಗೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) ಪ್ರತಿ ನಿಮಿಷಕ್ಕೆ 1,000 ಲೀಟರ್ ಆಮ್ಲಜನಕ ಉತ್ಪಾದಿಸುವ ಪ್ಲಾಂಟ್‌ ಸ್ಥಾಪಿಸಿ ಸಾಧನೆ ಮಾಡಿದೆ.
ಈ ವಾರದ ಅಂತ್ಯದ ವೇಳೆಗೆ ದೆಹಲಿಯಲ್ಲಿ ಇಂತಹ ಐದು ಆಮ್ಲಜನಕ ಸ್ಥಾವರಗಳ ಸ್ಥಾಪನೆ ಸಾಧ್ಯತೆ ಇದೆ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಕಳೆದ ಮೂರು ವಾರಗಳಿಂದ, ಆಮ್ಲಜನಕವು ದೆಹಲಿಯಲ್ಲಿ ಹೆಚ್ಚು ಬೇಡಿಕೆಯ ಸರಕಾಗಿದೆ. ನಗರದಲ್ಲಿ ಕೋವಿಡ್ -19 ಪ್ರಕರಣಗಳು ಸ್ಫೋಟಗೊಳ್ಳುತ್ತಿರುವುದರಿಂದ, ಆಸ್ಪತ್ರೆಗಳು ರೋಗಿಗಳಿಗೆ ಚಿಕಿತ್ಸೆ ನೀಡಲು ಹಾಸಿಗೆಗಳು ಮತ್ತು ವೈದ್ಯಕೀಯ ಆಮ್ಲಜನಕದ ಪೂರೈಕೆ ಕೊರತೆ ಎದುರಿಸುತ್ತಿದೆ.
ಪರಿಸ್ಥಿತಿ ಹೇಗಿದೆ ಎಂದರೆ ಪರಿಸ್ಥಿತಿಯನ್ನು ನಿಭಾಯಿಸಲು ಭಾರತೀಯ ಸೇನೆಯನ್ನು ನಿಯೋಜಿಸುವಂತೆ ದೆಹಲಿ ಸರ್ಕಾರ ಕೇಂದ್ರವನ್ನು ಕೋರಿದೆ.
ಆದಾಗ್ಯೂ, ಸಶಸ್ತ್ರ ಪಡೆಗಳು ಈಗಾಗಲೇ ನಗರದಲ್ಲಿ ಮೀಸಲಾದ ಆಸ್ಪತ್ರೆಗಳನ್ನು ಸ್ಥಾಪಿಸುವ ಮೂಲಕ ಕೋವಿಡ್ ನಿರ್ವಹಣೆಯಲ್ಲಿ ನಾಗರಿಕ ಆಡಳಿತಕ್ಕೆ ಸಹಾಯ ಮಾಡಲು ಪ್ರಾರಂಭಿಸಿವೆ.
ವರದಿ ಪ್ರಕಾರ, ವೈದ್ಯಕೀಯ ಆಕ್ಸಿಜನ್‌ಗಾಗಿ ಸ್ವಾವಲಂಬಿಗಳಾಗಲು ಡಿಆರ್‌ಡಿಒ ದೇಶಾದ್ಯಂತ ಆಸ್ಪತ್ರೆಗಳಲ್ಲಿ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುತ್ತಿದೆ. ಮುಂದಿನ ಮೂರು ತಿಂಗಳಲ್ಲಿ ಇಂತಹ 500 ಸ್ಥಾವರಗಳನ್ನು ಸ್ಥಾಪಿಸುವ ಗುರಿ ಹೊಂದಿದೆ.
ನವದೆಹಲಿಯ ಏಮ್ಸ್ ಮತ್ತು ಸಫ್ದರ್ಜಂಗ್ ಆಸ್ಪತ್ರೆಯಲ್ಲಿ ಸ್ಥಾಪಿಸಲಾದ ಆಮ್ಲಜನಕ ಸ್ಥಾವರಗಳು ಪ್ರತಿ ನಿಮಿಷಕ್ಕೆ 1,000 ಲೀಟರ್ ಆಮ್ಲಜನಕವನ್ನು ಉತ್ಪಾದಿಸುತ್ತವೆ ಮತ್ತು ಪ್ರತಿದಿನ 195 ರೋಗಿಗಳಿಗೆ ಸಹಾಯ ಮಾಡುತ್ತವೆ. ಈ ಪ್ಲಾಂಟ್‌ 195 ಸಿಲಿಂಡರ್‌ಗಳನ್ನು ದಿನಕ್ಕೆ 150 ಬಾರಿ ಭರ್ತಿ ಮಾಡಬಹುದು.ವೈದ್ಯಕೀಯ ಆಮ್ಲಜನಕ ಸ್ಥಾವರವು ಡಿಆರ್‌ಡಿಒ ಅಭಿವೃದ್ಧಿಪಡಿಸಿದ ಲಘು ಯುದ್ಧ ತೇಜಸ್ ವಿಮಾನಕ್ಕಾಗಿ ಆನ್-ಬೋರ್ಡ್ ಆಮ್ಲಜನಕ ಉತ್ಪಾದನೆ ಆಧರಿಸಿದ ತಂತ್ರಜ್ಞಾನದ ಮೇಲೆ ಕಾರ್ಯನಿರ್ವಹಿಸುತ್ತದೆ.
ಡಿಆರ್‌ಡಿಒ ವಿಜ್ಞಾನಿ ದೇವೇಂದರ್ ಶರ್ಮಾ, “ಆಮ್ಲಜನಕ ಪೂರೈಕೆದಾರರ ಮೇಲೆ ಆಸ್ಪತ್ರೆಯ ಅವಲಂಬನೆ ಕಡಿಮೆ ಮಾಡುವ ಉದ್ದೇಶವಿದೆ. ಈ ಸ್ಥಾವರಗಳ ಸಹಾಯದಿಂದ ಆಸ್ಪತ್ರೆಗಳು ಈಗ ತಮ್ಮದೇ ಆದ ಆಮ್ಲಜನಕವನ್ನು ತಯಾರಿಸಬಹುದು.ಈ ಸ್ಥಾವರಗಳು ವಾತಾವರಣದ ಗಾಳಿಯನ್ನು ಬಳಸುತ್ತದೆ ಮತ್ತು ಅದನ್ನು ಆಮ್ಲಜನಕ 24×7 ಆಗಿ ಪರಿವರ್ತಿಸುತ್ತದೆ. ಇದು ಆಸ್ಪತ್ರೆಗಳ ಮೇಲಿನ ಹೊರೆ ಕಡಿಮೆ ಮಾಡಲು ಮತ್ತು ಜೀವಗಳನ್ನು ಉಳಿಸಲು ಸಹಾಯ ಮಾಡುತ್ತದೆ ಎಂದು ಹೇಳಿದ್ದಾರೆ.
ಡಿಆರ್‌ಡಿಒ ಅಧ್ಯಕ್ಷ ಡಾ.ಜಿ.ಸತೀಶ್ ರೆಡ್ಡಿ ಮಾತನಾಡಿ, ಪ್ರಧಾನಿ ನರೇಂದ್ರ ಮೋದಿ ಅವರು ದೇಶಾದ್ಯಂತ 500 ಸ್ಥಾವರಗಳನ್ನು ಸ್ಥಾಪಿಸುವ ಗುರಿಯನ್ನು ಹೊಂದಿದ್ದಾರೆ ಮತ್ತು ಅದನ್ನು ಸಾಧಿಸುವಲ್ಲಿ ಡಿಆರ್‌ಡಿಒವನ್ನು ದೃಢವಾಗಿ ನಂಬಿದ್ದಾರೆ.ಮುಂದಿನ ಮೂರು ತಿಂಗಳಲ್ಲಿ ಇಂತಹ 500 ಸ್ಥಾವರಗಳನ್ನು ದೇಶದಾದ್ಯಂತದ ಆಸ್ಪತ್ರೆಗಳಲ್ಲಿ ಸ್ಥಾಪಿಸಲು ಸಾಧ್ಯವಾಗುತ್ತದೆ ಎಂಬ ವಿಶ್ವಾಸವಿದೆ ಎಂದು ಅವರು ಹೇಳಿದರು.
ಆಸ್ಪತ್ರೆಗಳು ಒಮ್ಮೆ ಸ್ಥಾವರಗಳನ್ನು ಚಾಲನೆ ಮಾಡಿದರೆ ಕೋವಿಡ್ -19 ರೋಗಿಗಳಿಗೆ ಉತ್ತಮವಾಗಿ ಚಿಕಿತ್ಸೆ ನೀಡಲು ಸಾಧ್ಯವಾಗುತ್ತದೆ. .ದಿನದ ಕೊನೆಯಲ್ಲಿ, ನಾವು ಸಾಧ್ಯವಾದಷ್ಟು ರೋಗಿಗಳಿಗೆ ಸಹಾಯ ಮಾಡಲು ತಂತ್ರಜ್ಞಾನವನ್ನು ಆವಿಷ್ಕರಿಸುತ್ತಿದ್ದೇವೆ ಎಂದು ತಿಳಿಸಿದ್ದಾರೆ.
ಏಮ್ಸ್ ಆಘಾತ ಕೇಂದ್ರ, ಡಾ.ರಾಮ್ ಮನೋಹರ್ ಲೋಹಿಯಾ ಆಸ್ಪತ್ರೆ (ಆರ್‌ಎಂಎಲ್), ಸಫ್ದರ್ಜಂಗ್ ಆಸ್ಪತ್ರೆ, ಲೇಡಿ ಹಾರ್ಡಿಂಗ್ ವೈದ್ಯಕೀಯ ಕಾಲೇಜು ಮತ್ತು ಹರಿಯಾಣದ ಝಾಜ್ಜರಿನ ಏಮ್ಸ್ ನಲ್ಲಿ ಒಂದು ಆಮ್ಲಜನಕ ಘಟಕಗಳನ್ನು ಅಳವಡಿಸಲಾಗುವುದು ಎಂದು ರಕ್ಷಣಾ ಸಚಿವಾಲಯ ಮಂಗಳವಾರ ತಿಳಿಸಿದೆ.
ಪಿಎಂ-ಕೇರ್ಸ್ ಫಂಡ್ ಹಂಚಿಕೆಯಿಂದ ಮುಂದಿನ ಮೂರು ತಿಂಗಳಲ್ಲಿ 500 ವೈದ್ಯಕೀಯ ಆಮ್ಲಜನಕ ಸ್ಥಾವರಗಳನ್ನು ಸ್ಥಾಪಿಸುವುದಾಗಿ ಏಪ್ರಿಲ್ 28 ರಂದು ಡಿಆರ್‌ಡಿಒ ಘೋಷಿಸಿತ್ತು. ತೇಜಸ್ ಫೈಟರ್ ಜೆಟ್‌ನಲ್ಲಿ ಆನ್-ಬೋರ್ಡ್ ಆಮ್ಲಜನಕ ಉತ್ಪಾದನೆಗಾಗಿ ಅಭಿವೃದ್ಧಿಪಡಿಸಿದ ತನ್ನ ವೈದ್ಯಕೀಯ ಆಮ್ಲಜನಕ ಸ್ಥಾವರ (ಎಂಒಪಿ) ತಂತ್ರಜ್ಞಾನವನ್ನು ಟ್ರೈಡೆಂಟ್ ಮತ್ತು ಬೆಂಗಳೂರು ಮೂಲದ ಟಾಟಾ ಅಡ್ವಾನ್ಸ್ಡ್ ಸಿಸ್ಟಮ್ಸ್ ಲಿಮಿಟೆಡ್‌ಗೆ ವರ್ಗಾಯಿಸಿದೆ ಎಂದು ಡಿಆರ್‌ಡಿಒ ಹೇಳಿದೆ, ಇದರಿಂದಾಗಿ 500ರಲ್ಲಿ ಈ ಎರಡು ಕಂಪನಿಗಳು ಒಟ್ಟು 380 ಘಟಕ ಸ್ಥಾಪಿಸಬಹುದು.
ಟ್ರೈಡೆಂಟ್ ಮತ್ತು ಟಾಟಾ ಕ್ರಮವಾಗಿ 48 ಮತ್ತು 332 ಸ್ಥಾವರಗಳನ್ನು ಸ್ಥಾಪಿಸಲಿವೆ ಎಂದು ಹೇಳಿವೆ. ಉಳಿದ 120 ಸ್ಥಾವರಗಳನ್ನು ಡೆಹ್ರಾಡೂನ್‌ನ ಇಂಡಿಯನ್ ಇನ್‌ಸ್ಟಿಟ್ಯೂಟ್ ಆಫ್ ಪೆಟ್ರೋಲಿಯಂನಲ್ಲಿ ಕೆಲಸ ಮಾಡುವ ಕೈಗಾರಿಕೆಗಳು ಸ್ಥಾಪಿಸಲಿವೆ.

ಪ್ರಮುಖ ಸುದ್ದಿ :-   ಇವಿಎಂ ಮತಗಳ ಜೊತೆ ವಿವಿಪ್ಯಾಟ್ ಮತಗಳ ಸಂಪೂರ್ಣ ಎಣಿಕೆ : ಎಲ್ಲ ಅರ್ಜಿಗಳನ್ನು ವಜಾ ಮಾಡಿದ ಸುಪ್ರೀಂ ಕೋರ್ಟ್

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement