ನನ್ನ ಕಾರು, ಬೆಂಗಾವಲು ಮೇಲೆ ಟಿಎಂಸಿ ದಾಳಿ ಆರೋಪ: ವಿಡಿಯೋ ಹಂಚಿಕೊಂಡ ಕೇಂದ್ರ ಸಚಿವ..

ಪಶ್ಚಿಮ ಬಂಗಾಳದ ಪಶ್ಚಿಮ ಮಿಡ್ನಾಪುರದಲ್ಲಿ ಟಿಎಂಸಿ ಗೂಂಡಾಗಳು ತಮ್ಮ ಬೆಂಗಾವಲು ಮೇಲೆ ದಾಳಿ ಮಾಡಿದ್ದಾರೆ ಎಂದು ಕೇಂದ್ರ ಸಚಿವ ವಿ ಮುರಲೀಧರನ್ ಆರೋಪಿಸಿದ್ದಾರೆ.

ಚುನಾವಣಾ ಫಲಿತಾಂಶದ ಬಳಿಕ ನಡೆದ ಗಲಭೆಯಲ್ಲಿ ಗಾಯಗೊಂಡಿದ್ದ ಬಿಜೆಪಿ ಕಾರ್ಯಕರ್ತರನ್ನು ಭೇಟಿಯಾಗಲು ತೆರಳಿದ್ದ ವಿದೇಶಾಂಗ ಖಾತೆ ರಾಜ್ಯ ಸಚಿವ ವಿ. ಮುರುಳೀಧರನ್‌ ಅವರ ಕಾರು ಮತ್ತು ಬೆಂಗಾವಲು ವಾಹನದ ಮೇಲೆ ಪಶ್ಚಿಮ ಮಿಡ್ನಾಪುರ ಜಿಲ್ಲೆಯ ಪಂಚಕುರಿ ಹಳ್ಳಿಯ ಬಳಿ ಗುರುವಾರ ಅಪರಿಚಿತ ಗುಂಪೊಂದು ದಾಳಿ ನಡೆಸಿದೆ.
ಘಟನೆಯಲ್ಲಿ ಸಚಿವರ ಕಾರು ಧ್ವಂಸವಾಗಿದೆ. ತಮ್ಮ ‘ಬೆಂಗಾವಲು ವಾಹನಗಳ ಮೇಲಿನ ದಾಳಿಯ ಹಿಂದೆ ಟಿಎಂಸಿ ಗೂಂಡಾಗಳ ಕೈವಾಡವಿದೆ’ ಎಂದು ಮುರಳೀಧರನ್‌ ಟ್ವೀಟ್‌ನಲ್ಲಿ ಆರೋಪಿಸಿದ್ದಾರೆ.
ಈ ಕುರಿತು ಸುದ್ದಿ ಸಂಸ್ಥೆಯೊಂದಿಗೆ ಮಾತನಾಡಿದ ನಾನು ಸುರಕ್ಷಿತವಾಗಿದ್ದೇನೆ. ಆದರೆ ನನ್ನ ಚಾಲಕನಿಗೆ ಗಾಯಗಳಾಗಿವೆ. ಕೆಲವು ಕಾರುಗಳ ಕಿಟಕಿ ಗಾಜುಗಳೂ ಒಡೆದಿವೆ’ ಎಂದು ಸಚಿವರು ತಿಳಿಸಿದ್ದಾರೆ. ಮುರಳೀಧರನ್ ಅವರೊಂದಿಗೆ ತೆರಳಿದ್ದ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ರಾಹುಲ್ ಸಿನ್ಹಾ ‘ಪೊಲೀಸರ ಸಮ್ಮುಖದಲ್ಲೇ ಈ ದಾಳಿ ನಡೆದಿದೆ’ಎಂದು ಆರೋಪಿಸಿದ್ದಾರೆ.
ಕೆಲವು ಅಶಿಸ್ತಿನ ಅಂಶಗಳು ವಾಹನಗಳ ಮೇಲೆ ದಾಳಿ ಮಾಡುತ್ತವೆ ಎಂದು ತೋರಿಸುವ ವಿಡಿಯೋವನ್ನೂ ಸಚಿವರು ಪೋಸ್ಟ್ ಮಾಡಿದ್ದಾರೆ. ವಾಹನಗಳ ಕಿಟಕಿಗಳು ಹಾಳಾಗಿವೆ, ಅವರ ವೈಯಕ್ತಿಕ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಲಾಗಿದೆ ಮತ್ತು ಅವರು ಈ ಹಿನ್ನೆಲೆಯಲ್ಲಿ ಪಶ್ಚಿಮ ಬಂಗಾಳದ ತಮ್ಮ ಪ್ರವಾಸವನ್ನು ಮೊಟಕುಗೊಳಿಸಿದ್ದಾರೆ ಎಂದು ಪ್ರಕಟಿಸಿದ್ದಾರೆ.
2021 ರ ಮೇ 2 ರಂದು ಫಲಿತಾಂಶಗಳನ್ನು ಘೋಷಿಸಿದ ನಂತರ ಹಿಂಸಾಚಾರ ಸಂಭವಿಸಿದ ರಾಜ್ಯಕ್ಕೆ ಕೇಂದ್ರವು 4 ಸದಸ್ಯರ ಸತ್ಯ ಶೋಧನಾ ತಂಡವನ್ನು ಕಳುಹಿಸಿದೆ. ಬಿಜೆಪಿ ಮತ್ತು ಟಿಎಂಸಿ ಸಹ ಹಿಂಸಾಚಾರದ ಬಗ್ಗೆ ಪರಸ್ಪರ ದೂಷಣೆಗಳಲ್ಲಿ ಭಾಗಿಯಾಗಿವೆ.

https://twitter.com/VMBJP/status/1390209778798923778
ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement