ಭಾರತದಲ್ಲಿ ಕೋವಿಡ್‌ ಉಲ್ಬಣ: ಪರೋಲ್‌ ಮೇಲೆ ಕೈದಿಗಳ ಬಿಡುಗಡೆಗೆ ಸುಪ್ರೀಂಕೋರ್ಟ್ ಸೂಚನೆ

ನವ ದೆಹಲಿ: ದೇಶದಲ್ಲಿ ಕೊರೋನ ಸೋಂಕು ಉಲ್ಬಣಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಜೈಲುಗಳಲ್ಲಿ ದಟ್ಟಣೆ ಕಡಿಮೆ ಮಾಡಲು
ಕೆಲವು ಕೈದಿಗಳಲ್ಲಿ ಪರೋಲ್ ಮೇಲೆ ಅಥವಾ ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಲು ಕ್ರಮ ಕೈಗೊಳ್ಳುವಂತೆ ಸುಪ್ರೀಂಕೋರ್ಟ್ ಶುಕ್ರವಾರ ರಾಜ್ಯಗಳಿಗೆ ಸೂಚಿಸಿದೆ.
ಕೊರೊನಾ ಸೋಂಕಿನ ಉಲ್ಬಣ ದೇಶದಲ್ಲಿ ಆತಂಕಕಾರಿಯಾಗಿದ್ದು ಜೈಲಿನಲ್ಲಿಯೂ ಹರಡುತ್ತಿದೆ. ಹೀಗಾಗಿ ಜೈಲಿನಲ್ಲಿ ದಟ್ಟಣೆ ಕಡಿಮೆ ಮಾಡಬೇಕಿದೆ. ಸೋಂಕು ತಡೆಯುವ ಒಂದು ವಿಧಾನವಾದ ಸುರಕ್ಷಿತ ಅಂತರ ಪಾಲನೆ ಜೈಲಿನಲ್ಲಿ ಕಷ್ಟಸಾಧ್ಯ. ಆದ್ದರಿಂದ ಯಾವ ಕೈದಿಗಳನ್ನು ಪರೋಲ್ ಮೇಲೆ ಮತ್ತು ಯಾರನ್ನು ಮಧ್ಯಂತರ ಜಾಮೀನಿನ ಮೇಲೆ ಬಿಡುಗಡೆ ಗೊಳಿಸಬಹುದು ಎಂದು ನಿರ್ಧರಿಸಲು ಪ್ರತೀ ರಾಜ್ಯದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲು ಸುಪ್ರೀಂಕೋರ್ಟ್ ಸೂಚಿಸಿದೆ.
ಕಳೆದ ವರ್ಷದ ಮಾರ್ಚ್‌ನಲ್ಲಿ ಜಾರಿಗೊಳಿಸಿದ್ದ ಆದೇಶವನ್ನು ಪುನರಾವರ್ತಿಸಬಹುದು ಎಂದು ಸೂಚಿಸಿದೆ.ಕಳೆದ ವರ್ಷದ ಮಾರ್ಚ್‌ನಲ್ಲಿ ದೇಶದ ಕೊರೊನಾ ಸೋಂಕಿನ ಸ್ಥಿತಿ ಗಮನಿಸಿ ಸುಮಾರು 45,000 ಕೈದಿಗಳನ್ನು ವಿವಿಧ ಜೈಲಿನಿಂದ ಬಿಡುಗಡೆಗೊಳಿಸಲು ಸುಪ್ರೀಂಕೋರ್ಟ್ ಆದೇಶಿಸಿತ್ತು. ಪರೋಲ್ ಮೇಲೆ ಬಿಡುಗಡೆಯಾದವರು ನಂತರ ನಿಗದಿ ಪಡಿಸಿದ ಸಮಯಕ್ಕೆ ಜೈಲಿಗೆ ಮರಳಿದ್ದರು.

ಪ್ರಮುಖ ಸುದ್ದಿ :-   26/11ರ ಮುಂಬೈ ಭಯೋತ್ಪಾಕ ದಾಳಿ: ಹೇಮಂತ್ ಕರ್ಕರೆ ಕೊಂದಿದ್ದು ಉಗ್ರ ಕಸಬ್‌ ಅಲ್ಲ, ಕೊಂದಿದ್ದು ಆರ್‌ ಎಸ್‌ ಎಸ್ ನಂಟಿನ ಪೊಲೀಸ್‌ ಅಧಿಕಾರಿ ; ಕಾಂಗ್ರೆಸ್​ ನಾಯಕನ ವಿವಾದಿತ ಹೇಳಿಕೆ

5 / 5. 1

ಶೇರ್ ಮಾಡಿ :

ನಿಮ್ಮ ಕಾಮೆಂಟ್ ಬರೆಯಿರಿ

advertisement